ಮಹಾರಾಷ್ಟ್ರ: ಸೆಲ್ಫಿ ತೆಗೆಯುವ ಗೀಳಿನಲ್ಲಿ ಅನೇಕರು ಪ್ರಾಣಕ್ಕೆ ಸಂಚಕಾರ ತಂದುಕೊಂಡಿದ್ದು ಇದೆ. ಇಂಥದ್ದೇ ಮತ್ತೊಂದು ಘಟನೆ ನಡೆದಿದೆ.
ಮಹಾರಾಷ್ಟ್ರದ ಬೋರನೆ ಘಾಟ್‌ನಲ್ಲಿ ನಿನ್ನೆ ಸೆಲ್ಫಿ ತೆಗೆಯಲು ಹೋಗಿ 60 ಅಡಿ ಆಳದ ಕಂದಕಕ್ಕೆ ಬಿದ್ದ ಯುವತಿಯನ್ನು ರಕ್ಷಿಸಲಾಗಿದೆ. ಪುಣೆಯ ತಂಡವೊಂದು ತೋಸ್ಘರ್ ಜಲಪಾತಕ್ಕೆ ಭೇಟಿ ನೀಡಿತ್ತು. ಪುಣೆಯ ವಾರ್ಜೆಯ ನಿವಾಸಿ 29 ವರ್ಷದ ನಸ್ರೀನ್ ಅಮೀರ್ ಎನ್ನುವಾಕೆ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದಾಳೆ. ಈ ವೇಳೆ ಆಕೆ 60 ಅಡಿ ಆಳದ ಕಂದಕಕ್ಕೆ ಜಾರಿ ಬಿದ್ದಿದ್ದಾಳೆ.
ಸ್ಥಳೀಯರು ಹಾಗೂ ಹೋಮ್ ಗಾರ್ಡ್ ಸಿಬ್ಬಂದಿ ಕಾರ್ಯಾಚರಣೆಗಿಳಿದು ಕಂದಕಕ್ಕೆ ಬಿದ್ದ ಯುವತಿಯನ್ನು ಹರಸಾಹಸಪಟ್ಟು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
Advertisement