
ನವದೆಹಲಿ: ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಆ.08 ರಂದು ವಕ್ಫ್ ಆಸ್ತಿ (ಅನಧಿಕೃತ ನಿವಾಸಿಗಳ ತೆರವು) ಮಸೂದೆ, 2014 ನ್ನು ಹಿಂಪಡೆದಿದೆ.
ವಕ್ಫ್ ಆಸ್ತಿಗಳಿಂದ ಅನಧಿಕೃತ ನಿವಾಸಿಗಳನ್ನು ಹೊರಹಾಕುವ ಕಾರ್ಯವಿಧಾನಕ್ಕೆ ಈ ಮಸೂದೆ ನೆರವಾಗಿತ್ತು. ಇದನ್ನು ಈಗ ಹಿಂಪಡೆಯುವುದಾಗಿ ರಾಜ್ಯಸಭೆಯಲ್ಲಿ ಸರ್ಕಾರ ಘೋಷಿಸಿದೆ.
ವಕ್ಫ್ ಆಸ್ತಿ (ಅನಧಿಕೃತ ನಿವಾಸಿಗಳ ತೆರವು), ಮಸೂದೆ, 2014 ನ್ನು ಹಿಂದಿನ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕೆ ರೆಹಮಾನ್ ಖಾನ್ ಅವರು ಫೆಬ್ರವರಿ 18, 2014 ರಂದು ರಾಜ್ಯಸಭೆಯಲ್ಲಿ ಮಂಡಿಸಿದ್ದರು. ಇದನ್ನು ಮಾರ್ಚ್ 5, 2014 ರಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯದ ಸ್ಥಾಯಿ ಸಮಿತಿಗೆ ಕಳುಹಿಸಲಾಗಿತ್ತು.
ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗಾಗಿ ಮೀಸಲಾದ ಸ್ವತ್ತುಗಳನ್ನು ವಕ್ಫ್ ಆಸ್ತಿಗಳು ಎಂದು ಉಲ್ಲೇಖಿಸಲಾಗುತ್ತದೆ.
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮಸೂದೆಯನ್ನು ಹಿಂಪಡೆಯಲು ಸದನದ ಅನುಮತಿ ಕೋರಿದರು ಮತ್ತು ಸದಸ್ಯರು ರಾಜ್ಯಸಭೆಯಲ್ಲಿ ಧ್ವನಿ ಮತದ ಮೂಲಕ ಹಿಂತೆಗೆದುಕೊಳ್ಳುವಿಕೆಯನ್ನು ಅಂಗೀಕರಿಸಲಾಯಿತು.
Advertisement