
ಉತ್ತರ ಪ್ರದೇಶ: ಮೃತ ತಂದೆಯ ಅಂತ್ಯಕ್ರಿಯೆ ಅಂಗವಾಗಿ ಚಿತಾಭಸ್ಮವನ್ನು ಪವಿತ್ರ ಗಂಗಾನದಿಯಲ್ಲಿ ವಿಸರ್ಜಿಸುವಾಗ ಯುವಕನೊಬ್ಬ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ
ಬ್ರಜ್‌ಘಾಟ್‌ನಲ್ಲಿ ಈ ಘಟನೆ ನಡೆದಿದ್ದು, 22 ವರ್ಷದ ಯುವಕ ಅರ್ಜುನ್ ವೈದ್ ನದಿಯಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಪೊಲೀಸರು ಗುರುವಾರ ತಿಳಿಸಿದ್ದಾರೆ.
ಹೃದಯಾಘಾತದಿಂದ ಮೃತಪಟ್ಟಿದ್ದ ತನ್ನ ತಂದೆಯ ಅಂತ್ಯಕ್ರಿಯೆಯನ್ನು ನೆರವೇರಿಸಿದ ಅರ್ಜುನ್, ಚಿತಾಭಸ್ಮವನ್ನು ಗಂಗಾ ನದಿಯಲ್ಲಿ ವಿಸರ್ಜಿಸುವಾಗ ನೀರಿನ ಹರಿವು ಹೆಚ್ಚಾಗಿದ್ದು, ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.
ಸ್ಥಳದಲ್ಲಿದ್ದ ಮುಳುಗುತಜ್ಞರು ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಅವರ ಪ್ರಯತ್ನ ಸಫಲವಾಗದೆ ಅರ್ಜುನ್ ಸಾವನ್ನಪ್ಪಿರುವುದಾಗಿ ಸರ್ಕಲ್ ಆಫೀಸರ್ (ಗಢ ಮುಕ್ತೇಶ್ವರ) ಅಶುತೋಷ್ ಶಿವಂ ಹೇಳಿದರು.
Advertisement