ಡೆಹ್ರಾಡೂನ್: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗಿರುವ ಪರಿಣಾಮ ಭೂಕುಸಿತ, ಪ್ರವಾಹ ಉಂಟಾಗಿದ್ದು, 120 ರಸ್ತೆಗಳು ಬಂದ್ ಆಗಿವೆ.
ಪ್ರಾದೇಶಿಕ ಹವಾಮಾನ ಇಲಾಖೆಯ ಮಾಹಿತಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಆ.16 ವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಶುಕ್ರವಾರ ಸಂಜೆಯಿಂದ ನಹಾನ್ (ಸಿರ್ಮೌರ್) ನಲ್ಲಿ ಅತಿ ಹೆಚ್ಚು ಅಂದರೆ, 168.3 ಮಿಮೀ ಮಳೆಯಾಗಿದ್ದು, ಸಂಧೋಳೆಯಲ್ಲಿ 106.4 ಮಿಮೀ, ನಗ್ರೋಟಾ ಸೂರಿಯನ್‌ನಲ್ಲಿ 93.2 ಮಿಮೀ, ಧೌಲಕುವಾನ್‌ನಲ್ಲಿ 67 ಮಿಮೀ, ಜುಬ್ಬರಹಟ್ಟಿಯಲ್ಲಿ 53.2 ಮಿಮೀ ಮತ್ತು ಕಂದಗಹಟ್ಟಿಯಲ್ಲಿ 45.6 ಮಿಮೀ ಮಳೆಯಾಗಿದೆ.
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ಮಳೆಯಿಂದಾಗಿ 44 ವಿದ್ಯುತ್ ಮತ್ತು 67 ನೀರು ಸರಬರಾಜು ಯೋಜನೆಗಳು ಸ್ಥಗಿತಗೊಂಡಿವೆ. ಬಲವಾದ ಗಾಳಿ ಮತ್ತು ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವುದರಿಂದ ತೋಟಗಳು, ಬೆಳೆಗಳು, ದುರ್ಬಲ ಮತ್ತು 'ಕಚ್ಚ' ಮನೆಗಳಿಗೆ ಹಾನಿಯಾಗುವ ಸಾಧ್ಯತೆಯ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
Advertisement