ಪ್ರಸಾರ ಸೇವೆಗಳ ಕರಡು ವಾಪಸ್ ಪಡೆದ ಕೇಂದ್ರ ಸರ್ಕಾರ: ಸಮಾಲೋಚನೆ ನಂತರ ಹೊಸ ಕರಡು ರಚನೆ!

ಪರಿಷ್ಕೃತ ಕರಡು ಮಸೂದೆಯು ಇನ್ಸ್ಟಾಗ್ರಾಮ್ ಇನ್​ಫ್ಲ್ಯುಯೆನ್ಸರ್​ಗಳು ಮತ್ತು ಯೂಟ್ಯೂಬರ್​ಗಳನ್ನು ಅವರ ಬಳಕೆದಾರರ ನೆಲೆಯನ್ನು ವ್ಯಾಖ್ಯಾನಿಸಲು 'ಡಿಜಿಟಲ್ ಸುದ್ದಿ ಪ್ರಸಾರಕರು ಎಂದು ವರ್ಗೀಕರಿಸಲು ಪ್ರಯತ್ನಿಸುತ್ತದೆ.
ಅಶ್ವಿನ್ ವೈಷ್ಣವ್
ಅಶ್ವಿನ್ ವೈಷ್ಣವ್TNIE
Updated on

ನವದೆಹಲಿ: ಪ್ರಸ್ತಾವಿತ ಪ್ರಸಾರ ಸೇವೆಗಳ (ನಿಯಂತ್ರಣ) ಮಸೂದೆಯ ಬಗ್ಗೆ ಸಾರ್ವಜನಿಕವಾಗಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹೆಚ್ಚಿನ ಸಮಾಲೋಚನೆ ನಡೆಸಿ ಹೊಸ ಪ್ರಸಾರ ಸೇವೆಗಳ ಕರಡನ್ನು ತರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

ಪ್ರಸಾರ ಸೇವೆಗಳ (ನಿಯಂತ್ರಣ) ಕರಡನ್ನು ಡಿಜಿಪಬ್ ಮತ್ತು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದಂತಹ ಮಾಧ್ಯಮ ಸಂಸ್ಥೆಗಳು ಟೀಕಿಸಿದ್ದು ಡಿಜಿಟಲ್ ಮಾಧ್ಯಮ ಸಂಸ್ಥೆಗಳು ಮತ್ತು ನಾಗರಿಕ ಸಮಾಜದ ಸಂಘಗಳನ್ನು ಈ ಕ್ರಮದಲ್ಲಿ ಸಮಾಲೋಚಿಸಲಿಲ್ಲ ಎಂದು ಆರೋಪಿಸಿತ್ತು. ಮಸೂದೆಯ ಕೆಲವು ನಿಬಂಧನೆಗಳು ಆನ್​​ಲೈನ್​ ಕಂಟೆಂಟ್​ ಕ್ರಿಯೇಟರ್​ಗಳಲ್ಲಿ ಕಳವಳ ಹುಟ್ಟುಹಾಕಿತ್ತು. ತಮ್ಮನ್ನು ಒಟಿಟಿ ಅಥವಾ ಡಿಜಿಟಲ್ ಸುದ್ದಿ ಪ್ರಸಾರಕರೊಂದಿಗೆ ಸೇರಿಸಲು ಪ್ರಯತ್ನಿಸಿದ್ದಾರೆ ಎಂದು ಕಂಟೆಂಟ್ ಕ್ರಿಯೇಟರ್​ಗಳು ಆಕ್ಷೇಪ ವ್ಯಕ್ತಪಡಿಸಿದ್ದರು.

ಸಚಿವಾಲಯವು ಕರಡು ಮಸೂದೆ ಕುರಿತಂತೆ ಮಧ್ಯಸ್ಥಗಾರರೊಂದಿಗೆ ಸರಣಿ ಸಮಾಲೋಚನೆಗಳನ್ನು ನಡೆಸುತ್ತಿದೆ. ಅಲ್ಲದೆ 2024ರ ಅಕ್ಟೋಬರ್ 15ರವರೆಗೆ ಕಾಮೆಂಟ್‌ಗಳು/ಸಲಹೆಗಳನ್ನು ಪಡೆಯಲು ಹೆಚ್ಚುವರಿ ಸಮಯವನ್ನು ನೀಡಲಾಗುತ್ತದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಟ್ವಿಟರ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದೆ. ವಿವರವಾದ ಚರ್ಚೆಯ ನಂತರ ಹೊಸ ಕರಡನ್ನು ಪ್ರಕಟಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಅಶ್ವಿನ್ ವೈಷ್ಣವ್
'ಹೇ ಪಾಕಿಸ್ತಾನಿ': ಭಾರತವನ್ನು ಬೈಯುತ್ತಿದ್ದ ಪಾಕ್ ಪ್ರವಾಸಿಗನಿಗೆ ಹಿಗ್ಗಾಮುಗ್ಗಾ ಜಾಡಿಸಿದ ದೆಹಲಿಯ ಉಬರ್ ಚಾಲಕ, ವಿಡಿಯೋ

ಪರಿಷ್ಕೃತ ಕರಡು ಮಸೂದೆಯು ಇನ್ಸ್ಟಾಗ್ರಾಮ್ ಇನ್​ಫ್ಲ್ಯುಯೆನ್ಸರ್​ಗಳು ಮತ್ತು ಯೂಟ್ಯೂಬರ್​ಗಳನ್ನು ಅವರ ಬಳಕೆದಾರರ ನೆಲೆಯನ್ನು ವ್ಯಾಖ್ಯಾನಿಸಲು 'ಡಿಜಿಟಲ್ ಸುದ್ದಿ ಪ್ರಸಾರಕರು ಎಂದು ವರ್ಗೀಕರಿಸಲು ಪ್ರಯತ್ನಿಸುತ್ತದೆ. ಕಂಟೆಂಟ್​ ಪರಿಶೀಲನೆಗಾಗಿ ಅವರು ಸರ್ಕಾರದೊಂದಿಗೆ ಪೂರ್ವ ನೋಂದಣಿ ಪಡೆಯಬೇಕಾಗುತ್ತದೆ ಎಂದಿತ್ತು. ಇದು ವಾಕ್ ಸ್ವಾತಂತ್ರ್ಯದ ಬಗ್ಗೆ ಕಳವಳ ಹುಟ್ಟುಹಾಕಿತು.

ಕರಡು ಮಸೂದೆಯನ್ನು 2023ರ ನವೆಂಬರ್ 11ರಂದು ಸಮಾಲೋಚನೆಗಾ ಸಾರ್ವಜನಿಕ ಡೊಮೈನ್​ನಲ್ಲಿ ಪ್ರಕಟಿಸಲಾಗಿತ್ತು. ಇತ್ತೀಚೆಗೆ, ಕರಡಿನ ಪರಿಷ್ಕೃತ ಆವೃತ್ತಿಯನ್ನು ಕೆಲವು ಆಯ್ದ ಪಾಲುದಾರರಿಗೆ 'ರಹಸ್ಯವಾಗಿ' ನೀಡಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com