ಭಾರತ ಪ್ರವಾಸಕ್ಕೆ ಬಂದಿದ್ದ ಪಾಕ್ ಪ್ರವಾಸಿಗನೊಬ್ಬ ಮಹಿಳೆಯೊಂದಿಗೆ ಸೇರಿ ಭಾರತ ಮತ್ತು ಭಾರತೀಯರನ್ನು ಬೈಯುತ್ತಿದ್ದರಿಂದ ಆಕ್ರೋಶಗೊಂಡ ಉಬರ್ ಕ್ಯಾಬ್ ಚಾಲಕನೊಬ್ಬ ಅವರನ್ನು ಮಧ್ಯರಾತ್ರಿ ನಡುರಸ್ತೆಯಲ್ಲೇ ಇಳಿಸಿ ಹಿಗ್ಗಾಮುಗ್ಗಾ ಜಾಡಿಸಿರುವ ವಿಡಿಯೋ ವೈರಲ್ ಆಗಿದೆ.
ಅವರಿಬ್ಬರನ್ನು ಕಾರಿನಿಂದ ಇಳಿಸಿದ ಉಬರ್ ಚಾಲಕ 'ನೀವು ಪಾಕಿಸ್ತಾನಿ. ನೀವು ಹಲಾಲಾ ಮಕ್ಕಳು ಎಂದು ಹೇಳುವುದು ಕೇಳಿಸಿತು. ಈ ಘಟನೆ ಆಗಸ್ಟ್ 9ರ ಮಧ್ಯರಾತ್ರಿ ನಡೆದಿದೆ ಎಂದು ವರದಿಯಾಗಿದೆ. ಪ್ರಯಾಣಿಕ ಘಟನೆಯ ದೃಶ್ಯವನ್ನು ರೆಕಾರ್ಡ್ ಮಾಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದನು. ಆ ವಿಡಿಯೋ ವೈರಲ್ ಆಗಿದ್ದು ಟೀಕೆಗಳು ವ್ಯಕ್ತವಾಗುತ್ತಿವೆ. ಕೆಲವು ಬಳಕೆದಾರರು ಚಾಲಕನ ಕಾರ್ಯವನ್ನು ಶ್ಲಾಘಿಸಿದರೆ, ಕೆಲವರು ಪ್ರಯಾಣಿಕರೊಂದಿಗೆ ಅವರ ವರ್ತನೆಯನ್ನು ಟೀಕಿಸಿದರು.
ದೆಲಿಯಲ್ಲಿ ಉಬರ್ ಚಾಲಕ ಮತ್ತು ಆತನ ಪ್ರಯಾಣಿಕರ ನಡುವೆ ತೀವ್ರ ವಾಗ್ವಾದದ ವಿಡಿಯೋ ವೈರಲ್ ಆಗಿದೆ. ದೆಹಲಿಯ ಜನರು ಸ್ವಾರ್ಥಿಗಳು ಎಂದು ಪ್ರಯಾಣಿಕರು ಮಾತನಾಡಿದ್ದು ಚಾಲಕ ಈ ಬಗ್ಗೆ ಪ್ರಶ್ನೆ ಮಾಡಿದಾಗ ವಿವಾದ ಪ್ರಾರಂಭವಾಯಿತು. ಇದು ಭಾರತಕ್ಕೆ ಮಾಡಿದ ಅವಮಾನ ಎಂದು ಚಾಲಕ ಸಿಟ್ಟಿಗೆದ್ದಿದರು.
ಮಹಿಳೆ ತನ್ನ ಹೇಳಿಕೆಗಳು ವೈಯಕ್ತಿಕ ಟೀಕೆಗಿಂತ ಹೆಚ್ಚಾಗಿ ನಗರದ ಬಗ್ಗೆ ಇರುವ ಸಾಮಾನ್ಯ ಹೇಳಿಕೆಗಳು ಎಂದು ವಿವರಿಸುವ ಮೂಲಕ ಪರಿಸ್ಥಿತಿಯನ್ನು ತಗ್ಗಿಸಲು ಪ್ರಯತ್ನಿಸಿದಳು. ಆದರೆ ಅವಳ ಪ್ರಯತ್ನಗಳು ವಿಫಲವಾದವು. ಇನ್ನೂ ಕೋಪಗೊಂಡಿದ್ದ ಚಾಲಕ ಮಧ್ಯರಾತ್ರಿಯಲ್ಲಿ ಪ್ರಯಾಣಿಕರನ್ನು ಟ್ಯಾಕ್ಸಿಯಿಂದ ಹೊರಗೆ ಇಳಿಸಿ, ಪ್ರಯಾಣಿಕರನ್ನು ಪಾಕಿಸ್ತಾನಿ ಎಂದು ಕರೆದಿದ್ದಾರೆ.
ಆಗಸ್ಟ್ 11ರಂದು ಪೋಸ್ಟ್ ಮಾಡಲಾದ ನಂತರ ವೀಡಿಯೊವನ್ನು ಐದು ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಅನೇಕ ಜನರು ತಮ್ಮ ಪ್ರತಿಕ್ರಿಯೆಗಳನ್ನು ಕಾಮೆಂಟ್‌ಗಳಲ್ಲಿ ಹಂಚಿಕೊಂಡಿದ್ದಾರೆ.
Advertisement