ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತ ಮತ್ತು ಹಠಾತ್ ಪ್ರವಾಹದಿಂದಾಗಿ 213 ರಸ್ತೆಗಳನ್ನು ಬಂದ್ ಮಾಡಲಾಗಿದೆ.
ಸ್ಥಳೀಯ ಹವಾಮಾನ ಕಚೇರಿಯು ಆಗಸ್ಟ್ 19 ರವರೆಗೆ ರಾಜ್ಯದ ಅನೇಕ ಭಾಗಗಳಲ್ಲಿ 'ಹಳದಿ ಅಲರ್ಟ್' ಘೋಷಣೆ ಮಾಡಿದೆ.
ಭಾರೀ ಮಳೆಯಿಂದಾಗಿ, ಶಿಮ್ಲಾದಲ್ಲಿ 89 ರಸ್ತೆಗಳನ್ನು ಬಂದ್ ಆಗಿವೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ. ನಂತರ ಸಿರ್ಮೌರ್‌ನಲ್ಲಿ 42, ಮಂಡಿಯಲ್ಲಿ 37, ಕುಲುದಲ್ಲಿ 26, ಕಂಗ್ರಾದಲ್ಲಿ 6, ಚಂಬಾದಲ್ಲಿ ಐದು ಮತ್ತು ಕಿನ್ನೌರ್ ಹಾಗೂ ಲಾಹೌಲ್ ಮತ್ತು ಸ್ಪಿತಿಯಲ್ಲಿ ತಲಾ ನಾಲ್ಕು ರಸ್ತೆಗಳನ್ನು ಬಂದ್ ಆಗಿವೆ ಎಂದು ಹೇಳಿದೆ.
ಸೋಮವಾರ ಸಂಜೆಯಿಂದ, ನೈನಾ ದೇವಿಯಲ್ಲಿ 96.4 ಮಿಮೀ ಅತ್ಯಧಿಕ ಮಳೆ ದಾಖಲಾಗಿದೆ. ನಂತರ ಧರ್ಮಶಾಲಾ (25 ಮಿಮೀ), ಕಂದಘಾಟ್ (10.4 ಮಿಮೀ) ಮತ್ತು ಕಾಹು(9.2 ಮಿಮೀ)ದಲ್ಲಿ ಭಾರಿ ಮಳೆಯಾಗಿದೆ.
ಹಿಮಾಚಲದಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ 110 ಜನ ಸಾವನ್ನಪ್ಪಿದ್ದಾರೆ ಮತ್ತು ಜೂನ್ 27 ರಿಂದ ಆಗಸ್ಟ್ 12 ರವರೆಗೆ ರಾಜ್ಯದಲ್ಲಿ ಸುಮಾರು 1,004 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement