ಪಾಟ್ನಾ: ಮುಂಬರುವ 2025 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು 20 ಸ್ಥಾನ ಪಡೆಯಲು ಹೆಣಗಾಡಲಿದೆ ಎಂದು ಜನ್ ಸುರಾಜ್ ಅಭಿಯಾನದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಮಂಗಳವಾರ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 2015 ರಲ್ಲಿ ನಾನು ನಿತೀಶ್ ಕುಮಾರ್ ಅವರನ್ನು ಬೆಂಬಲಿಸಿದ್ದರಿಂದ ಬಿಹಾರದಲ್ಲಿ ಮಹಾಮೈತ್ರಿಕೂಟ ಸರ್ಕಾರ ರಚನೆಯಾಯಿತು. 2020 ರ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಯು ಗಣನೀಯವಾಗಿ ಕುಸಿದು ಕೇವಲ 43 ಸ್ಥಾನ ಗಳಿಸಿತು. 2025 ರ ಚುನಾವಣೆಯು ಇನ್ನಷ್ಟು ತೀವ್ರ ಕುಸಿತದ ಫಲಿತಾಂಶ ನೀಡುತ್ತದೆ. ಆರ್‌ಜೆಡಿಯೊಂದಿಗೆ ಜೆಡಿಯು ಬಿಹಾರ ರಾಜಕೀಯದಿಂದ ದೂರವಾಗಲಿದೆ ಎಂದರು.
ಕಿಶೋರ್ ಕೇವಲ ಏಜೆನ್ಸಿಯನ್ನು ನಡೆಸುತ್ತಿದ್ದಾರೆ. ನಾಯಕರಲ್ಲ ಎಂಬ ಜೆಡಿ-ಯು ರಾಜ್ಯಾಧ್ಯಕ್ಷ ಉಮೇಶ್ ಕುಶ್ವಾಹ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಬಿಹಾರ ಜನರು ಅಂತಿಮವಾಗಿ ಲಾಲು ಪ್ರಸಾದ್ ಯಾದವ್, ನಿತೀಶ್ ಕುಮಾರ್ ಮತ್ತು ಬಿಜೆಪಿಯನ್ನು ತಿರಸ್ಕರಿಸಲಿದ್ದಾರೆ ಎಂದು ಹೇಳಿದರು.
ಆರ್‌ಜೆಡಿ ವಿರುದ್ಧವೂ ವಾಗ್ದಾಳಿ ನಡೆಸಿದ ಕಿಶೋರ್, ಸದಸ್ಯರಿಗೆ ಪತ್ರ ಬರೆಯುವ ಮೂಲಕ ಪಕ್ಷ ಬಿಡದಂತೆ ಮನವಿ ಮಾಡುತತಿದ್ದಾರೆ. ಲಾಲು ಪ್ರಸಾದ್ ಯಾದವ್ ಅವರ ಸಿದ್ಧಾಂತದಲ್ಲಿ ನಂಬಿಕೆ ಇದ್ದರೆ ಪಕ್ಷವನ್ನು ಬಿಡುವುದಿಲ್ಲ ಎಂದು ಆರ್‌ಜೆಡಿಯ ಉನ್ನತ ನಾಯಕರು ಕಾರ್ಯಕರ್ತರಲ್ಲಿ ಮನವಿ ಮಾಡುತ್ತಿದ್ದಾರೆ. ತೇಜಸ್ವಿ ಯಾದವ್ ಅವರಲ್ಲಿ ಜನರಿಗೆ ಸ್ಪೂರ್ತಿ ಸಿಕ್ಕಿಲ್ಲ. ಲಾಲು ಕುಟುಂಬದ ಕಾರಣದಿಂದಾಗಿ ಅವರು ಉಳಿದುಕೊಂಡಿದ್ದಾರೆ. 2025 ರ ಚುನಾವಣೆಯಲ್ಲಿ ಆರ್‌ಜೆಡಿ ಪ್ರಮುಖ ಪಕ್ಷವಾಗುವುದಿಲ್ಲ. ತಮ್ಮ ಜನ್ ಸುರಾಜ್ ಮತ್ತು ಎನ್‌ಡಿಎ ನಡುವೆ ಸ್ಪರ್ಧೆ ಇರಲಿದೆ ಎಂದು ಅವರು ಭವಿಷ್ಯ ನುಡಿದರು.
Advertisement