ಹವಾಮಾನ ಬದಲಾವಣೆ, ಶೇ.10ರಷ್ಟು ಅಧಿಕ ಮಳೆ ವಯನಾಡ್ ಭೂಕುಸಿತಕ್ಕೆ ಕಾರಣ: WWA

ಈ ಪ್ರದೇಶವು ಒಂದೇ ದಿನದಲ್ಲಿ 146 ಮಿಮೀ ಮಳೆಯನ್ನು ಕಂಡಿದೆ, ಇದು ಕೇರಳದಲ್ಲಿ ಮೂರನೇ ಅತಿ ಹೆಚ್ಚು ಮಳೆಯಾಗಿದೆ.
ವಯನಾಡಿನ ಮುಂಡಕ್ಕೈ ಭೂಕುಸಿತದಿಂದ ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ ತಂಡ ಶಿಶುವನ್ನು ರಕ್ಷಿಸಿರುವುದು
ವಯನಾಡಿನ ಮುಂಡಕ್ಕೈ ಭೂಕುಸಿತದಿಂದ ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ ತಂಡ ಶಿಶುವನ್ನು ರಕ್ಷಿಸಿರುವುದು
Updated on

ನವದೆಹಲಿ: ಜುಲೈ 30 ರಂದು ಕೇರಳದ ವಯನಾಡಿನಲ್ಲಿ ಸಂಭವಿಸಿದ ದುರಂತ ಭೂಕುಸಿತವು ಹವಾಮಾನ ಬದಲಾವಣೆಯಿಂದ ಉಂಟಾಗಿದೆ ಎಂದು ವಿಶ್ವ ಹವಾಮಾನ ಗುಣಲಕ್ಷಣ (WWA) ಹೊಸ ವಿಶ್ಲೇಷಣೆ ಹೇಳಿದೆ. ಮಾನವ ಚಟುವಟಿಕೆಗಳಿಂದ ಉಂಟಾದ ಹವಾಮಾನದ ಮಾದರಿಗಳಲ್ಲಿನ ಬದಲಾವಣೆಯು ಈ ಪ್ರದೇಶದಲ್ಲಿ ಶೇಕಡಾ 10ರಷ್ಟು ಹೆಚ್ಚು ಮಳೆಯನ್ನು ಸುರಿಸಿದೆ. ಇದು ಭೂಕುಸಿತಗಳಿಗೆ ಕಾರಣವಾಯಿತು ಎಂದು ಅದು ಹೇಳುತ್ತದೆ.

ಭವಿಷ್ಯದಲ್ಲಿ ಇಂತಹ ನೈಸರ್ಗಿಕ ವಿಕೋಪಗಳ ಪರಿಣಾಮವನ್ನು ತಗ್ಗಿಸಲು, ಹವಾಮಾನ ವೈಪರೀತ್ಯದ ಘಟನೆಗಳ ಕ್ಷಿಪ್ರ ಮೌಲ್ಯಮಾಪನ ನಡೆಸುವ ಹವಾಮಾನ ವಿಜ್ಞಾನಿಗಳ ಅಂತಾರಾಷ್ಟ್ರೀಯ ಸಹಯೋಗವಾದ WWA, ಅರಣ್ಯನಾಶ ಮತ್ತು ಕಲ್ಲುಗಣಿಗಾರಿಕೆಯನ್ನು ಕಡಿಮೆಗೊಳಿಸುವುದರ ಜೊತೆಗೆ ಪೂರ್ವ ಎಚ್ಚರಿಕೆ ಮತ್ತು ಸ್ಥಳಾಂತರಿಸುವ ವ್ಯವಸ್ಥೆಗಳ ಸುಧಾರಣೆಯನ್ನು ಶಿಫಾರಸು ಮಾಡುತ್ತದೆ. ಒಂದು ದಿನದ ಸ್ಫೋಟಕ ಮಳೆಯಂತಹ ಪರಿಸ್ಥಿತಿಗಳನ್ನು ಕಡಿಮೆ ಮಾಡಲು ಪಳೆಯುಳಿಕೆ ಇಂಧನಗಳನ್ನು ನವೀಕರಿಸಬಹುದಾದ ಶಕ್ತಿಯ ಮೂಲಗಳೊಂದಿಗೆ ಬದಲಿಸಲು ಅಧ್ಯಯನವು ಶಿಫಾರಸು ಮಾಡುತ್ತದೆ.

ಡಬ್ಲ್ಯುಡಬ್ಲ್ಯುಎಗೆ ಸಂಬಂಧಿಸಿದ ಹವಾಮಾನ ವಿಜ್ಞಾನಿಗಳು, ಸಂಶೋಧಕರು ಮತ್ತು ಸಂಸ್ಥೆಗಳ ಗುಂಪಿನಿಂದ ಮಾನವ ಪ್ರೇರಿತ ಹವಾಮಾನ ಬದಲಾವಣೆಯಿಂದ ಭೂಕುಸಿತ-ಪ್ರಚೋದನೆಯಿಂದ ಮಳೆಯು ಹೆಚ್ಚು ತೀವ್ರಗೊಂಡಿದೆ, ಉತ್ತರ ಕೇರಳದಲ್ಲಿ ಹೆಚ್ಚು ದುರ್ಬಲ ಸಮುದಾಯಗಳನ್ನು ವಿನಾಶಕಾರಿಯಾಗಿಸಿದೆ ಎಂದು ಅಧ್ಯಯನ ಹೇಳುತ್ತದೆ.

ಈ ಪ್ರದೇಶವು ಒಂದೇ ದಿನದಲ್ಲಿ 146 ಮಿಮೀ ಮಳೆಯನ್ನು ಕಂಡಿದೆ, ಇದು ಕೇರಳದಲ್ಲಿ ಮೂರನೇ ಅತಿ ಹೆಚ್ಚು ಮಳೆಯಾಗಿದೆ.

ವಯನಾಡಿನ ಮುಂಡಕ್ಕೈ ಭೂಕುಸಿತದಿಂದ ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ ತಂಡ ಶಿಶುವನ್ನು ರಕ್ಷಿಸಿರುವುದು
'ಪರಿಹಾರ, ಪುನರ್ವಸತಿಗೆ ಕೇಂದ್ರ ಸಂಪೂರ್ಣ ಬೆಂಬಲ': ವಯನಾಡು ವೈಮಾನಿಕ ಸಮೀಕ್ಷೆ ಬಳಿಕ ಪ್ರಧಾನಿ ಮೋದಿ

ದುರ್ಬಲ ಜಿಲ್ಲೆ: ಗುಡ್ಡಗಾಡು ಪ್ರದೇಶವಾದ ವಯನಾಡು ಜಿಲ್ಲೆಯ ಮಣ್ಣು ಕೇರಳದಲ್ಲಿ ಅತ್ಯಂತ ಸಡಿಲವಾದ ಮತ್ತು ಸವೆತಕ್ಕೆ ಒಳಗಾಗಿದ್ದು, ಮಳೆಗಾಲದಲ್ಲಿ ಭೂಕುಸಿತದ ಹೆಚ್ಚಿನ ಅಪಾಯವಿದೆ. ಭವಿಷ್ಯದಲ್ಲಿ ಇದೇ ರೀತಿಯ ಅನಾಹುತಗಳನ್ನು ತಪ್ಪಿಸಲು ಬೆಟ್ಟದ ಪ್ರದೇಶಗಳಲ್ಲಿ ನಿರ್ಮಾಣ, ಅರಣ್ಯನಾಶ ಮತ್ತು ಕಲ್ಲುಗಣಿಗಾರಿಕೆಗೆ ಕಡಿವಾಣ ಹಾಕಬೇಕು ಎಂದು ಸಂಶೋಧಕರು ಹೇಳುತ್ತಾರೆ.

ಪಳೆಯುಳಿಕೆ ಇಂಧನಗಳನ್ನು ಬಳಸಬೇಡಿ: ಜಗತ್ತು ಪಳೆಯುಳಿಕೆ ಇಂಧನಗಳಿಂದ ದೂರ ಸರಿಯದಿದ್ದರೆ, ಕೇರಳದಲ್ಲಿ ಒಂದು ದಿನದ ಮಳೆಯ ಪ್ರಮಾಣವು ಇನ್ನೂ ಶೇಕಡಾ 4 ರಷ್ಟು ಹೆಚ್ಚಾಗುತ್ತದೆ, ಇದು ಇನ್ನಷ್ಟು ವಿನಾಶಕಾರಿ ಭೂಕುಸಿತಗಳ ಅಪಾಯವನ್ನುಂಟುಮಾಡುತ್ತದೆ ಎಂದು ಗ್ರಂಥಮ್ ಇನ್ಸ್ಟಿಟ್ಯೂಟ್ - ಹವಾಮಾನ ಬದಲಾವಣೆ ಮತ್ತು ಪರಿಸರದ ಸಂಶೋಧಕರಾದ ಮರಿಯಮ್ ಜಕರಿಯಾ ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com