ಗುವಾಹಟಿ: ನಿಷೇಧಿತ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್-ಇಂಡಿಪೆಂಡೆಂಟ್ (ಉಲ್ಫಾ-I) ಗುರುವಾರ ಅಸ್ಸಾಂನಾದ್ಯಂತ 24 ಸ್ಥಳಗಳಲ್ಲಿ ಬಾಂಬ್‌ಗಳನ್ನು ಇಟ್ಟಿರುವುದಾಗಿ ಹೇಳಿಕೊಂಡಿದೆ.
ಉಲ್ಫಾ ಹೇಳಿಕೆ ನಂತರ ಭದ್ರತಾ ಪಡೆಗಳು ಸ್ಫೋಟಕಗಳನ್ನು ಹುಡುಕಲು ತಂಡಗಳನ್ನು ಕಳುಹಿಸಿದೆ. ಉಲ್ಫಾ-I ತಿಳಿಸಿರುವ ಎಲ್ಲಾ ಸ್ಥಳಗಳಿಗೆ ಬಾಂಬ್ ನಿಷ್ಕ್ರಿಯ ದಳಗಳು ಧಾವಿಸಿದ್ದು, ಯಾವುದೇ ಬಾಂಬ್ ಅಥವಾ ಸ್ಫೋಟಕ ಪತ್ತೆಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಲ್ಫಾ-I ಮಾಧ್ಯಮ ಸಂಸ್ಥೆಗಳಿಗೆ ಕಳುಹಿಸಿರುವ ಇಮೇಲ್‌ನಲ್ಲಿ, "ತಾಂತ್ರಿಕ ವೈಫಲ್ಯ" ದಿಂದ ಬಾಂಬ್‌ಗಳು ಸ್ಫೋಟಗೊಂಡಿಲ್ಲ ಎಂದು ಭಯೋತ್ಪಾದಕ ಸಂಘಟನೆ ಪ್ರತಿಪಾದಿಸಿದೆ.
ಬಾಂಬ್ ನಿಷ್ಕ್ರಿಯ ದಳ, ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಲು ಸಾರ್ವಜನಿಕ ಸಹಕಾರ ಕೋರಿತ್ತು ಮತ್ತು ತಕ್ಷಣ ಎಲ್ಲಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಎಲ್ಲಾ ಜಿಲ್ಲೆಗಳ ಎಸ್‌ಪಿಗಳು, ವಿಶೇಷವಾಗಿ ಉಲ್ಫಾದ ಶಾಂತಿ ವಿರೋಧಿ ಬಣ, ಪಟ್ಟಿಯಲ್ಲಿ ಉಲ್ಲೇಖಿಸಿರುವ ಸ್ಥಳಗಳಲ್ಲಿ ಎಚ್ಚರಿಕೆ ವಹಿಸಲಾಗಿದೆ ಮತ್ತು ಪ್ರದೇಶಗಳನ್ನು ಕೂಲಂಕುಷವಾಗಿ ಶೋಧಿಸುವಂತೆ ಸೂಚಿಸಿಲಾಗಿದೆ ಎಂದು ಅಸ್ಸಾಂ ಪೊಲೀಸ್ ಪ್ರಧಾನ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
"ಬಾಂಬ್ ನಿಷ್ಕ್ರಿಯ ದಳಗಳು, ಲೋಹ ಶೋಧಕಗಳು ಮತ್ತು ಸ್ನಿಫರ್ ಡಾಗ್‌ಗಳನ್ನು ಪ್ರತಿ ಸ್ಥಳಕ್ಕೆ ರವಾನಿಸಲಾಗಿದೆ. ಇದುವರೆಗೆ ಬಾಂಬ್‌ಗಳು ಪತ್ತೆಯಾಗಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಸಿಕ್ಕಿಲ್ಲ" ಎಂದು ಅವರು ಹೇಳಿದ್ದಾರೆ.
ಆದಾಗ್ಯೂ, ನಾಗಾಂವ್, ಲಖಿಂಪುರ ಮತ್ತು ಶಿವಸಾಗರ್‌ನ ಕೆಲವು ಸ್ಥಳೀಯ ಪೊಲೀಸ್ ಅಧಿಕಾರಿಗಳು ಸ್ಥಳಗಳಿಂದ ಕೆಲವು "ಬಾಂಬ್ ತರಹದ ವಸ್ತುಗಳನ್ನು" ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
Advertisement