ಕೋಲ್ಕತ್ತ: ಕೋಲ್ಕತ್ತಾದಲ್ಲಿ ಅತ್ಯಾಚಾರ, ಹತ್ಯೆಗೊಳಗಾದ ವೈದ್ಯೆಗೆ ನ್ಯಾಯ ಒದಗಿಸಲು ಆಗ್ರಹಿಸಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೌಲಾಲಿಯಿಂದ ಡೋರಿನಾಗೆ ಇಂದು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ವಾರ ವೈದ್ಯೆ ಮೇಲೆ ಅತ್ಯಾಚಾರವೆಸಗಲಾಗಿ ಹತ್ಯೆ ಮಾಡಲಾಗಿತ್ತು. "ನಾವು ಸತ್ಯ ಹೊರಬರಬೇಕೆಂದು ಬಯಸುತ್ತೇವೆ, ಆದರೆ ಜನರನ್ನು ದಾರಿತಪ್ಪಿಸಲು ಕೆಲವು ಕಡೆ ಸುಳ್ಳನ್ನು ಹರಡುತ್ತಿದೆ. ಎಡಪಕ್ಷಗಳೊಂದಿಗೆ ಬಿಜೆಪಿಯ ನಂಟನ್ನು ಬಹಿರಂಗಪಡಿಸಬೇಕು" ಎಂದು ಬಂಗಾಳ ಸಿಎಂ ಹೇಳಿದರು.
ಬ್ಯಾನರ್ಜಿ ಅವರೊಂದಿಗೆ ಬಂದ ಟಿಎಂಸಿ ಕಾರ್ಯಕರ್ತರು ಆರೋಪಿಗಳಿಗೆ ಮರಣದಂಡನೆ ವಿಧಿಸುವಂತೆ ಘೋಷಣೆಗಳನ್ನು ಕೂಗಿದರು, ಮರಣದಂಡನೆ ಶಿಕ್ಷೆಗೆ ಮುಖ್ಯಮಂತ್ರಿಗಳು ಈಗಾಗಲೇ ಒತ್ತಾಯಿಸಿದ್ದಾರೆ. ಆಗಸ್ಟ್ 9 ರಂದು ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಕೊಠಡಿಯಲ್ಲಿ ಮಹಿಳಾ ಸ್ನಾತಕೋತ್ತರ ತರಬೇತಿ ವೈದ್ಯೆಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಕೊಲೆ ಮಾಡಲಾಗಿತ್ತು.
ಮರುದಿನ ಅಪರಾಧಕ್ಕೆ ಸಂಬಂಧಿಸಿದಂತೆ ನಾಗರಿಕ ಸ್ವಯಂಸೇವಕನನ್ನು ಬಂಧಿಸಲಾಗಿದೆ. ಸುಮಾರು 40 ಜನರ ಗುಂಪು ಗುರುವಾರ ಮುಂಜಾನೆ ಆಸ್ಪತ್ರೆಗೆ ನುಗ್ಗಿ ತುರ್ತು ವಿಭಾಗ, ನರ್ಸಿಂಗ್ ಘಟಕ ಮತ್ತು ಔಷಧಿ ಅಂಗಡಿಯನ್ನು ಧ್ವಂಸಗೊಳಿಸಿದೆ. ಸರ್ಕಾರಿ ಸ್ವಾಮ್ಯದ ಆರೋಗ್ಯ ಸೌಲಭ್ಯದಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಹಾನಿಗೊಳಿಸಲಾಗಿದೆ. ಮಹಿಳಾ ವೈದ್ಯೆಯ ಮೇಲೆ ಆಪಾದಿತ ಅತ್ಯಾಚಾರ ಮತ್ತು ಹತ್ಯೆಯ ವಿರುದ್ಧ ಕಿರಿಯ ವೈದ್ಯರು ಪ್ರತಿಭಟನೆ ಮಾಡುತ್ತಿದ್ದ ವೇದಿಕೆಯನ್ನು ಧ್ವಂಸಗೊಳಿಸಿದರು ಮತ್ತು ಅವರ ಕೆಲಸದ ಸ್ಥಳದಲ್ಲಿ ಭದ್ರತೆಗೆ ಒತ್ತಾಯಿಸಿದರು.
Advertisement