ಟ್ರೈನಿ ಡಾಕ್ಟರ್ ಅತ್ಯಾಚಾರ, ಕೊಲೆ ಪ್ರಕರಣ: ಸಿಬಿಐನಿಂದ ಆಸ್ಪತ್ರೆಯ ಮಾಜಿ ಪ್ರಾಂಶುಪಾಲರ ವಿಚಾರಣೆ

ನಗರದ ಸಿಬಿಐನ ಕಚೇರಿಯಲ್ಲಿ ಶುಕ್ರವಾರ ರಾತ್ರಿ 9-30ಕ್ಕೆ ಆರಂಭವಾದ ವಿಚಾರಣೆ ಶನಿವಾರ ಮುಂಜಾನೆ 3 ಗಂಟೆಯವರೆಗೂ ಮುಂದುವರೆದಿದೆ. ಎರಡನೇ ಸುತ್ತಿನ ವಿಚಾರಣೆಗಾಗಿ ಇಂದು ಬೆಳಗ್ಗೆ 10-30ರ ಸುಮಾರಿಗೆ ಸಿಬಿಐ ಕಚೇರಿ ತಲುಪಿದ ಘೋಷ್
ಪ್ರತಿಭಟನೆ ಚಿತ್ರ
ಪ್ರತಿಭಟನೆ ಚಿತ್ರ
Updated on

ಕೊಲ್ಕತ್ತ: ಟ್ರೈನಿ ಡಾಕ್ಟರ್ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ದೇಶಾದ್ಯಂತ ತೀವ್ರ ಆಕ್ರೋಶ, ಪ್ರತಿಭಟನೆ ನಡೆಯುತ್ತಿರುವಂತೆಯೇ ಸಿಬಿಐ ತನಿಖೆಯನ್ನು ಚುರುಕುಗೊಳಿಸಿದೆ. ಘಟನೆ ನಡೆದಿದ್ದ R G Kar ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ಸತತ ಎರಡನೇ ದಿನವೂ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ನಗರದ ಸಿಬಿಐನ ಕಚೇರಿಯಲ್ಲಿ ಶುಕ್ರವಾರ ರಾತ್ರಿ 9-30ಕ್ಕೆ ಆರಂಭವಾದ ವಿಚಾರಣೆ ಶನಿವಾರ ಮುಂಜಾನೆ 3 ಗಂಟೆಯವರೆಗೂ ಮುಂದುವರೆದಿದೆ. ಎರಡನೇ ಸುತ್ತಿನ ವಿಚಾರಣೆಗಾಗಿ ಇಂದು ಬೆಳಗ್ಗೆ 10-30ರ ಸುಮಾರಿಗೆ ಘೋಷ್ ಸಿಬಿಐ ಕಚೇರಿ ತಲುಪಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಮೊದಲ ಸುತ್ತಿನ ವಿಚಾರಣೆಯ ಸಮಯದಲ್ಲಿ ವೈದ್ಯೆಯ ಸಾವಿನ ಸುದ್ದಿ ತಿಳಿದ ನಂತರ ಅವರ ಮೊದಲ ಪ್ರತಿಕ್ರಿಯೆಯ ಬಗ್ಗೆ ಮಾಜಿ ಪ್ರಾಂಶುಪಾಲರನ್ನು ಕೇಳಲಾಯಿತು. ಅವರ ಕುಟುಂಬಕ್ಕೆ ಮಾಹಿತಿ ತಿಳಿಸಲು ಯಾರಿಗೆ ತಿಳಿಸಲಾಯಿತು, ಹೇಗೆ ಮತ್ತು ಪೊಲೀಸರನ್ನು ಸಂಪರ್ಕಿಸಿದ್ದು ಯಾರು ಎಂಬ ಪ್ರಶ್ನೆಗಳನ್ನು ಕೇಳಲಾಯಿತು. ಕೆಲವು ಉತ್ತರಗಳು ಗೊಂದಲಕಾರಿಯಾಗಿದ್ದವು ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಪ್ರತಿಭಟನೆ ಚಿತ್ರ
ಪಶ್ಚಿಮ ಬಂಗಾಳ: ಮಹಿಳಾ ವೈದ್ಯೆ ಹತ್ಯೆ, ಸಿಬಿಐನಿಂದ ನಾಲ್ವರು ಟ್ರೈನಿ ಡಾಕ್ಟರ್ ಗಳ ವಿಚಾರಣೆ!

ಹತ್ಯೆಯಾದ ಸಂತ್ರಸ್ತೆಯನ್ನು 36 ಗಂಟೆಗಳ ಕಾಲ ಅಥವಾ ಕೆಲವೊಮ್ಮೆ 48 ಗಂಟೆಗಳ ಕಾಲ ಕರ್ತವ್ಯದಲ್ಲಿ ಇರಿಸುವ ವಾರದ ವೇಳಾಪಟ್ಟಿ ಬಗ್ಗೆಯೂ ಘೋಷ್ ಅವರನ್ನು ಕೇಳಲಾಯಿತು ಎಂದು ಅವರು ಹೇಳಿದರು. ಶವ ಪತ್ತೆಯಾದ ಎರಡು ದಿನಗಳ ನಂತರ ಮಾಜಿ ಪ್ರಾಂಶುಪಾಲರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆಗಸ್ಟ್ 9 ರಂದು ಕಾರ್ ಆಸ್ಪತ್ರೆಯ ಸೆಮಿನಾರ್ ಕೊಠಡಿಯಲ್ಲಿ ಮಹಿಳಾ ಟ್ರೈನಿ ಡಾಕ್ಟರ್ ಶವ ಪತ್ತೆಯಾಗಿತ್ತು. ಮರುದಿನ ಪೊಲೀಸರು ನಾಗರಿಕ ಸ್ವಯಂಸೇವಕನನ್ನು ಬಂಧಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com