ಅತ್ಯಾಚಾರ ಯತ್ನ, ಮಗುವನ್ನು ಚರಂಡಿಗೆ ಎಸೆದ ವ್ಯಕ್ತಿ!

ಮಗುವಿನ ಕುಟುಂಬದವರು ಆರೋಪಿಯನ್ನು ಬೆನ್ನಟ್ಟಿದಾಗ ಮಗುವನ್ನು ಆತ ಚರಂಡಿಗೆ ಎಸೆದಿರುವ ಘಟನೆ ಮೀರತ್ ನಲ್ಲಿ ನಡೆದಿದೆ.
File pic
ಸಂಗ್ರಹ ಚಿತ್ರonline desk
Updated on

ಮುಂಬೈ: 2 ವರ್ಷದ ಮಗುವನ್ನು ವ್ಯಕ್ತಿಯೋರ್ವ ಕಿಡ್ನ್ಯಾಪ್ ಮಾಡಿ ಅತ್ಯಾಚಾರವೆಸಗಲು ಯತ್ನಿಸಿ ಚರಂಡಿ ಎಸೆದಿದ್ದಾನೆ. ಮಗುವಿನ ಕುಟುಂಬದವರು ಆರೋಪಿಯನ್ನು ಬೆನ್ನಟ್ಟಿದಾಗ ಮಗುವನ್ನು ಆತ ಚರಂಡಿಗೆ ಎಸೆದಿರುವ ಘಟನೆ ಮೀರತ್ ನಲ್ಲಿ ನಡೆದಿದೆ.

ಬಾಲಕಿಯ ಕುಟುಂಬವು ಆತನನ್ನು ಬೆನ್ನಟ್ಟಲು ಪ್ರಾರಂಭಿಸಿದ ನಂತರ ವ್ಯಕ್ತಿಯೊಬ್ಬ ಎರಡು ವರ್ಷದ ಬಾಲಕಿಯನ್ನು ಅಪಹರಿಸಿ, ಆಕೆಯ ಮೇಲೆ 'ಅತ್ಯಾಚಾರ' ಮಾಡಲು ಪ್ರಯತ್ನಿಸಿದನು ಮತ್ತು ಚರಂಡಿಗೆ ಎಸೆದಿದ್ದಾನೆ ಎಂದು ಮೀರತ್‌ನ ಪೊಲೀಸರು ಶನಿವಾರ ತಿಳಿಸಿದ್ದಾರೆ.

ಇಂದು ಬೆಳಗ್ಗೆ ಬಾಲಕಿಯ ಶವ ಚರಂಡಿಯಲ್ಲಿ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದ್ದು, ಸದರ್ ಪ್ರದೇಶದ ತನ್ನ ಮನೆಯ ಹೊರಗೆ ತನ್ನ ಕುಟುಂಬದ ಸದಸ್ಯರೊಂದಿಗೆ ಮಲಗಿದ್ದ ಅಪ್ರಾಪ್ತೆಯನ್ನು ಮೋಯಿಶ್ (20) ಅಪಹರಿಸಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆಯುಷ್ ವಿಕ್ರಮ್ ಸಿಂಗ್ ತಿಳಿಸಿದ್ದಾರೆ.

ಕುಟುಂಬಸ್ಥರು ಎಚ್ಚೆತ್ತುಕೊಂಡಾಗ ಬಾಲಕಿಯನ್ನು ಆತನ ಹಿಡಿತದಿಂದ ರಕ್ಷಿಸಲು ಆರೋಪಿಯನ್ನು ಬೆನ್ನಟ್ಟಿದ ಮೊಯಿಶ್ ಬಾಲಕಿಯನ್ನು ಚರಂಡಿಗೆ ಎಸೆದು ಪರಾರಿಯಾಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.

File pic
ಬೆಂಗಳೂರು: ಹನಿಟ್ರ್ಯಾಪ್ ಮಾಡುತ್ತಿದ್ದ ಮಹಿಳೆ, ಮಲತಾಯಿ ಸೇರಿ ಮೂವರ ಬಂಧನ

ಆರೋಪಿಯನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ, ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com