ನವದೆಹಲಿ: ಇಂದು ರಕ್ಷಾ ಬಂಧನ್.ಶ್ರಾವಣ ಮಾಸದ ಹಬ್ಬಗಳಲ್ಲಿ ರಕ್ಷಾ ಬಂಧನ್ ಒಂದಾಗಿದೆ. ಅಣ್ಣ- ತಂಗಿಯ ಬಾಂಧವ್ಯ ಬೆಸೆಯುವ ಈ ಹಬ್ಬವನ್ನು ದೇಶಾದ್ಯಂತ ಸಡಗರ- ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಸಹೋದರಿಯರು ತನ್ನ ಸಹೋದರನ ಮುಂಗೈಗೆ ರಾಖಿ ಕಟ್ಟುವ ಮೂಲಕ ಅವರ ಧೀರ್ಘಾಯಸ್ಸಿಗಾಗಿ ಪ್ರಾರ್ಥಿಸುವುದು ಈ ಹಬ್ಬದ ವಿಶೇಷವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಸೋಮವಾರ ದೆಹಲಿಯ ವಿವಿಧ ಸಾಲೆಯ ಮಕ್ಕಳೊಂದಿಗೆ ರಕ್ಷಾ ಬಂಧನ್ ಆಚರಿಸಿದರು. ತನ್ನ ಮುಂಗೈಗೆ ರಾಖಿ ಕಟ್ಟುವ ಮಕ್ಕಳೊಂದಿಗೆ ಪ್ರಧಾನಿ ಸಂವಾದ ನಡೆಸುತ್ತಿರುವ ವಿಡಿಯೋಗಳನ್ನು ಎಎನ್ ಐ ಸುದ್ದಿಸಂಸ್ಥೆ ಹಂಚಿಕೊಂಡಿದೆ.
ವೀಡಿಯೋದಲ್ಲಿ, ಪ್ರಧಾನಿ ಮೋದಿ ತರಗತಿಗೆ ಪ್ರವೇಶಿಸಿದಾಗ ಶಾಲಾ ಮಕ್ಕಳು ನಗುಮೊಗದಿಂದ ಸ್ವಾಗತಿಸುತ್ತಿರುವುದು ಕಂಡುಬಂದಿದೆ. ಅಲ್ಲದೇ ಅವರಿಗೆ ರಾಖಿಯನ್ನು ಕಟ್ಟಲಾಗಿದೆ.. ವಿದ್ಯಾರ್ಥಿಗಳು ರಾಖಿ ಕಟ್ಟಲು ಮುಂದಾದಾಗ, ಪ್ರಧಾನಿ ಮೋದಿ ಅವರನ್ನು ಪ್ರೀತಿಯ ನಗುವಿನೊಂದಿಗೆ ಸ್ವಾಗತಿಸಿದ್ದು, ಅವರ ಹೆಸರು ಮತ್ತು ತರಗತಿಗಳನ್ನು ಕೇಳಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಪ್ರಧಾನಿ, ಶಾಲಾ ವಿದ್ಯಾರ್ಥಿನಿಯರು ಮತ್ತು ಶಿಕ್ಷಕರೊಂದಿಗೆ ಫೋಟೋಗೆ ಫೋಸ್ ನೀಡಿದ್ದಾರೆ.
ಮಧ್ಯೆ ವಾಘಾ ಗಡಿಯಲ್ಲಿ ದೇಶ ಕಾಯುವ ಗಡಿ ಭದ್ರತಾ ಪಡೆಯ ಯೋಧರು ಮಹಿಳೆಯರು ಮತ್ತು ಮಕ್ಕಳೊಂದಿಗೆ ರಕ್ಷಾ ಬಂಧನ್ ಆಚರಿಸಿದರು. ಮಹಿಳೆಯರು ಯೋಧ ಕೈಗೆ ರಾಖಿ ಕಟ್ಟಿ, ಸಿಹಿ ವಿನಿಮದ ಮೂಲಕ ಸಂಭ್ರಮಿಸಿದರು.
Advertisement