
ಜಬಲ್ ಪುರ್: ನೈನ್ ಪುರ್ ಜಬಲ್ ಪುರ್ ರೈಲು ಕಬ್ಬಿಣದ ರಾಡ್ ಗಳಿಗೆ ಡಿಕ್ಕಿ ಹೊಡೆದಿದೆ. ಕಚ್ಚ್ ಪುರ ನಿಲ್ದಾಣದ ಬಳಿ ಹಳಿ ಮೇಲೆ 3 ಕಬ್ಬಿಣದ ರಾಡ್ ಗಳನ್ನು ಇರಿಸಿ ವಿಧ್ವಂಸಕ ಕೃತ್ಯ ಎಸಗಲಾಗಿತ್ತು.
ಕಬ್ಬಿಣದ ರಾಡ್ ಗಳ ಮೇಲೆ ರೈಲು ಹರಿದಿದೆಯಾದರೂ ಅದೃಷ್ಟವಶಾತ್ ರೈಲು ಹಳಿ ತಪ್ಪಿ ಯಾವುದೇ ಅಪಾಯ ಸಂಭವಿಸಿಲ್ಲ. 15 ಅಡಿ ಉದ್ದ ಇರುವ 3 ಕಬ್ಬಿಣದ ರಾಡ್ ಗಳನ್ನು ರೈಲ್ವೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
2 ದಿನಗಳಲ್ಲಿ ವರದಿಯಾಗಿರುವ 2 ನೇ ವಿಧ್ವಂಸಕ ಕೃತ್ಯ ಇದಾಗಿದೆ. ಇದಕ್ಕೂ ಮುನ್ನ ಟ್ರ್ಯಾಕ್ ಮೇಲೆ ಇರಿಸಲಾಗಿದ್ದ ವಸ್ತುವಿನಿಂದ ಸಬರ್ ಮತಿ ಎಕ್ಸ್ ಪ್ರೆಸ್ ಪ್ಯಾಸೆಂಜರ್ ರೈಲಿನ 20 ರೈಲು ಕೋಚ್ ಗಳು ಹಳಿ ತಪ್ಪಿದ್ದರ ಬಗ್ಗೆ ರೈಲ್ವೆ ಮಂತ್ರಿ ಟ್ವೀಟ್ ಮಾಡಿದ್ದರು.
ಕಾನ್ಪುರದಲ್ಲಿ ಆಗಸ್ಟ್ 17 ರ ಮುಂಜಾನೆ ಸಬರಮತಿ ಎಕ್ಸ್‌ಪ್ರೆಸ್ (19168) 22 ಬೋಗಿಗಳು ಹಳಿತಪ್ಪಿದ ಪ್ರಕರಣದಲ್ಲಿ ಭಯೋತ್ಪಾದಕ ಸಂಚಿನ ಸಂಭವನೀಯತೆ ಹೆಚ್ಚುತ್ತಿದೆ ಎಂದು ಕೆಲವೇ ದಿನಗಳ ಹಿಂದೆ ವರದಿಯಾಗಿದೆ. ಹಳಿ ತಪ್ಪಿದ ರೀತಿ ನೋಡಿದರೆ ರೈಲು ಹಳಿತಪ್ಪಿಸಿ ಗರಿಷ್ಠ ಅನಾಹುತ ಸಂಭವಿಸುವ ಸಂಚು ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ರೈಲು ಹಳಿತಪ್ಪಿದರೂ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ.
Advertisement