ಎಎಪಿ ನಾಯಕ ಸಂಜಯ್ ಸಿಂಗ್ ಬಂಧನಕ್ಕೆ ಉತ್ತರ ಪ್ರದೇಶ ಕೋರ್ಟ್ ಆದೇಶ

ಎಎಪಿ ನಾಯಕ ಸಂಜಯ್ ಸಿಂಗ್ ಅವರನ್ನು ಆಗಸ್ಟ್ 28 ರಂದು ಬಂಧಿಸಿ ವಿಚಾರಣೆಗೆ ಹಾಜರುಪಡಿಸುವಂತೆ ಕೋರ್ಟ್ ಪೊಲೀಸರಿಗೆ ಆದೇಶಿಸಿದೆ.
ಎಎಪಿ ನಾಯಕ ಸಂಜಯ್ ಸಿಂಗ್
ಎಎಪಿ ನಾಯಕ ಸಂಜಯ್ ಸಿಂಗ್
Updated on

ಸುಲ್ತಾನ್‌ಪುರ: ಎರಡು ದಶಕಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಹಾಜರಾಗದೇ ಇರುವುದಕ್ಕೆ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಅವರನ್ನು ಬಂಧಿಸುವಂತೆ ಉತ್ತರ ಪ್ರದೇಶದ ಸುಲ್ತಾನ್‌ಪುರ ನ್ಯಾಯಾಲಯ ಮಂಗಳವಾರ ಆದೇಶ ಹೊರಡಿಸಿದೆ.

ಎಎಪಿ ನಾಯಕ ಸಂಜಯ್ ಸಿಂಗ್ ಅವರನ್ನು ಆಗಸ್ಟ್ 28 ರಂದು ಬಂಧಿಸಿ ವಿಚಾರಣೆಗೆ ಹಾಜರುಪಡಿಸುವಂತೆ ಕೋರ್ಟ್ ಪೊಲೀಸರಿಗೆ ಆದೇಶಿಸಿದೆ.

ಆಗಸ್ಟ್ 13 ರಂದು ಸಿಂಗ್, ಎಸ್‌ಪಿ ನಾಯಕ ಅನೂಪ್ ಸಂದಾ ಮತ್ತು ಇತರ ನಾಲ್ವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದ್ದು, ಇಂದು ವಿಚಾರಣೆ ನಿಗದಿಪಡಿಸಲಾಗಿತ್ತು. ಆದರೆ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಆಗಸ್ಟ್ 28ರೊಳಗೆ ಎಲ್ಲ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಎಪಿ ನಾಯಕ ಸಂಜಯ್ ಸಿಂಗ್
ಒಂದು ವರ್ಷದೊಳಗೆ NDA ಸರ್ಕಾರ ಪತನ: ಸಂಜಯ್ ಸಿಂಗ್

ಆರು ಆರೋಪಿಗಳ ಪರ ವಾದ ಮಂಡಿಸಿದ ಮದನ್ ಸಿಂಗ್, ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠದಲ್ಲಿ ಸಿಂಗ್ ಮತ್ತು ಸಂದಾ ಅವರಿಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿದ್ದು, ವಿಚಾರಣೆಯನ್ನು ಆಗಸ್ಟ್ 22 ಕ್ಕೆ ನಿಗದಿಪಡಿಸಲಾಗಿದೆ.

ಜೂನ್ 19, 2001 ರಂದು ಎಸ್ಪಿ ಮಾಜಿ ಶಾಸಕ ಅನೂಪ್ ಸಂದಾ ಅವರ ನೇತೃತ್ವದಲ್ಲಿ ಕಳಪೆ ವಿದ್ಯುತ್ ಪೂರೈಕೆ ಖಂಡಿಸಿ ನಗರದ ಸಬ್ಜಿ ಮಂಡಿ ಪ್ರದೇಶಕ್ಕೆ ಸಮೀಪವಿರುವ ಮೇಲ್ಸೇತುವೆಯ ಬಳಿ ಪ್ರತಿಭಟನೆ ನಡೆಸಲಾಗಿತ್ತು.

ಈ ಪ್ರತಿಭಟನೆಯಲ್ಲಿ ಸಂಜಯ್ ಸಿಂಗ್, ಮಾಜಿ ಕೌನ್ಸಿಲರ್‌ಗಳಾದ ಕಮಲ್ ಶ್ರೀವಾಸ್ತವ್, ವಿಜಯ್ ಕುಮಾರ್, ಸಂತೋಷ್, ಸುಭಾಷ್ ಚೌಧರಿ ಅವರು ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com