'ರಾಷ್ಟ್ರೀಯ ವೈದ್ಯಕೀಯ ನೋಂದಣಿ ಪೋರ್ಟಲ್'ಗೆ ಜೆಪಿ ನಡ್ಡಾ ಚಾಲನೆ

ಭಾರತವನ್ನು ಡಿಜಿಟಲೀಕರಣ ಮಾಡುವುದು ಪ್ರಧಾನಮಂತ್ರಿಯವರ ದೃಷ್ಟಿಯಾಗಿದೆ ಮತ್ತು ಆರೋಗ್ಯ ಪರಿಸರ ವ್ಯವಸ್ಥೆ ಡಿಜಿಟಲೀಕರಣಗೊಂಡರೆ ಪ್ರಧಾನಿ ಸಂಕಲ್ಪ ಈಡೇರಲಿದೆ. ಪೋರ್ಟಲ್‌ನಲ್ಲಿ ನಿರಂತರ ಸುಧಾರಣೆಗಳೊಂದಿಗೆ 'ರಾಷ್ಟ್ರೀಯ ವೈದ್ಯಕೀಯ ನೋಂದಣಿಯನ್ನು ಉನ್ನತಿಕರಿಸಲಾಗುವುದು
ಜೆಪಿ ನಡ್ಡಾ
ಜೆಪಿ ನಡ್ಡಾ
Updated on

ನವದೆಹಲಿ: ದೇಶದಲ್ಲಿನ ಎಲ್ಲಾ ಅಲೋಪತಿ ನೋಂದಾಯಿತ ವೈದ್ಯರ ಸಮಗ್ರ ಮತ್ತು ಕ್ರಿಯಾತ್ಮಕ ಡೇಟಾಬೇಸ್ ಹೊಂದಿರುವ ರಾಷ್ಟ್ರೀಯ ವೈದ್ಯಕೀಯ ನೋಂದಣಿ ಪೋರ್ಟರ್ ಗೆ ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡಾ ಶುಕ್ರವಾರ ಚಾಲನೆ ನೀಡಿದರು.

ಅರೆ ವೈದ್ಯಕೀಯ ಮತ್ತಿತರ ಆರೋಗ್ಯ ವೃತ್ತಿಪರರಿಗೆ ಇದೇ ರೀತಿಯ ನೋಂದಣಿಯನ್ನು ಶೀಘ್ರದಲ್ಲೇ ಪ್ರಾರಂಭಿಸಲು ಸಚಿವಾಲಯ ಯೋಜಿಸಿದೆ.

ಈ ವೇಳೆ ಮಾತನಾಡಿದ ಜೆ.ಪಿ. ನಡ್ಡಾ, ಡಿಜಿಟಲ್ ಹೆಲ್ತ್‌ಕೇರ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ದೇಶದ ಜನರಿಗೆ ಗುಣಮಟ್ಟದ ಆರೋಗ್ಯವನ್ನು ಖಾತ್ರಿಪಡಿಸುವ ಬಹುನಿರೀಕ್ಷಿತ ಹೆಜ್ಜೆಯಾಗಿದೆ. ಅರೆ ವೈದ್ಯರು ಮತ್ತು ಇತರ ಆರೋಗ್ಯ ವೃತ್ತಿಪರರಿಗೆ ಇದೇ ರೀತಿಯ ನೋಂದಣಿ ಪ್ರಾರಂಭಿಸುವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂದು ಅವರು ಹೇಳಿದರು.

ಭಾರತವನ್ನು ಡಿಜಿಟಲೀಕರಣ ಮಾಡುವುದು ಪ್ರಧಾನಮಂತ್ರಿಯವರ ದೃಷ್ಟಿಯಾಗಿದೆ ಮತ್ತು ಆರೋಗ್ಯ ಪರಿಸರ ವ್ಯವಸ್ಥೆ ಡಿಜಿಟಲೀಕರಣಗೊಂಡರೆ ಪ್ರಧಾನಿ ಸಂಕಲ್ಪ ಈಡೇರಲಿದೆ. ಪೋರ್ಟಲ್‌ನಲ್ಲಿ ನಿರಂತರ ಸುಧಾರಣೆಗಳೊಂದಿಗೆ 'ರಾಷ್ಟ್ರೀಯ ವೈದ್ಯಕೀಯ ನೋಂದಣಿಯನ್ನು ಉನ್ನತಿಕರಿಸಲಾಗುವುದು ಎಂದರು.

2019ರ NMC ಕಾಯ್ದೆ 31ರಡಿ NMR ಕಡ್ಡಾಯಗೊಳಿಸಲಾಗಿದೆ. ಇದು NMC ಯ ನೈತಿಕತೆ ಮತ್ತು ವೈದ್ಯಕೀಯ ನೋಂದಣಿ ಮಂಡಳಿ (EMRB) ಹೆಸರು, ವಿಳಾಸ ಮತ್ತು ಪರವಾನಗಿ ಪಡೆದ ವೈದ್ಯಕೀಯ ಪ್ರಾಕ್ಟಿಸರ್ ಗಳಿಂದ ಪಡೆದ ಎಲ್ಲಾ ಮಾನ್ಯತೆ ಪಡೆದ ಅರ್ಹತೆಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ರಾಷ್ಟ್ರೀಯ ನೋಂದಣಿಯನ್ನು ನಿರ್ವಹಿಸಬೇಕು ಎಂದು ಹೇಳುತ್ತದೆ. NMRನ ವಿಶಿಷ್ಟತೆಯೆಂದರೆ ಅದು ವೈದ್ಯರ ಆಧಾರ್ ಐಡಿಯೊಂದಿಗೆ ಲಿಂಕ್ ಆಗಿದ್ದು ಅದು ವ್ಯಕ್ತಿಯ ದೃಢೀಕರಣವನ್ನು ಖಚಿತಪಡಿಸುತ್ತದೆ ಎಂದು ತಿಳಿಸಿದರು.

NMR ಅಭಿವೃದ್ಧಿ ಮತ್ತು ನಿರ್ವಹಣೆಯಲ್ಲಿ ಮತ್ತು ನೋಂದಣಿ ಪ್ರಕ್ರಿಯೆಯನ್ನು ಸುಗಮಗೊಳಿಸುವಲ್ಲಿ ರಾಜ್ಯ ವೈದ್ಯಕೀಯ ಮಂಡಳಿಗಳು (SMC ಗಳು) ಪ್ರಮುಖ ಪಾಲುದಾರರಾಗಿದ್ದಾರೆ. NMR ಯಶಸ್ಸಿನಲ್ಲಿ ಅವರ ದೃಢೀಕರಣದ ವೇಗ ಮತ್ತು ಪ್ರಯತ್ನ ಪ್ರಮುಖ ಅಂಶವಾಗಲಿದ್ದು, ಅವರ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮತ್ತು ನೋಂದಣಿ ಪ್ರಕ್ರಿಯೆಯನ್ನು ವೇಗವಾಗಿ ಮಾಡುವಂತೆ ಒತ್ತಾಯಿಸಿದರು.

ಜೆಪಿ ನಡ್ಡಾ
NMC ಮಾನದಂಡ ಅನುಸರಣೆಯಲ್ಲಿ ಲೋಪ: 40 ವೈದ್ಯಕೀಯ ಕಾಲೇಜುಗಳ ಮಾನ್ಯತೆ ರದ್ದು, ಇನ್ನೂ 100 ಸಂಸ್ಥೆಗಳು ವೀಕ್ಷಣೆಯಲ್ಲಿ!!

NMR ಪೋರ್ಟಲ್ ಚಾಲನೆಯಿಂದ 13 ಲಕ್ಷಕ್ಕೂ ಹೆಚ್ಚು ವೈದ್ಯರ ಡೇಟಾ ಒದಗಿಸುವುದನ್ನು ಖಚಿತಪಡಿಸುತ್ತದೆ. "ಎನ್‌ಎಂಆರ್ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅಡಿಯಲ್ಲಿ ಹೆಲ್ತ್‌ಕೇರ್ ಪ್ರೊಫೆಷನಲ್ ರಿಜಿಸ್ಟ್ರಿಯ ಭಾಗವಾಗಿರುತ್ತದೆ ಮತ್ತು ಎಲ್ಲಾ ವೈದ್ಯರ ವಿವರಗಳನ್ನು ಹೊಂದಿರುತ್ತದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಅಪೂರ್ವ ಚಂದ್ರ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com