ನವದೆಹಲಿ: ಭಾರತೀಯ ಕರಾವಳಿ ಭದ್ರತಾ ಪಡೆ ಮಧ್ಯರಾತ್ರಿ ನಡೆಸಿದ ಮಹತ್ವದ ರಕ್ಷಣಾ ಕಾರ್ಯಾಚರಣೆಯೊಂದರಲ್ಲಿ ಸಮುದ್ರದ ಮಧ್ಯ ಸಂಕಷ್ಟದಲ್ಲಿ ಸಿಲುಕಿದ್ದ ವಾಣಿಜ್ಯ ದೋಣಿಯೊಂದರಿಂದ 11 ಮಂದಿ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ.
ಮುಂಬೈ-ನೋಂದಾಯಿತ ಸರಕು ಸಾಗಣೆ ಹಡಗು ಕೋಲ್ಕತ್ತಾದಿಂದ ಪೋರ್ಟ್ ಬ್ಲೇರ್‌ಗೆ ತೆರಳುತ್ತಿದ್ದಾಗ ಪಶ್ಚಿಮ ಬಂಗಾಳದ ಸಾಗರ್ ದ್ವೀಪದ ದಕ್ಷಿಣಕ್ಕೆ ಸುಮಾರು 90 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಮುಳುಗಿತು ಎಂದು ವರದಿಯಾಗಿದೆ.
2024 ರ ಆಗಸ್ಟ್ 25 ರಂದು ಸಂಜೆ ಚೆನ್ನೈನ ನೌಕಾಯಾನದ ಹುಡುಕಾಟ ಮತ್ತು ಪಾರುಗಾಣಿಕಾ ಸಮನ್ವಯ ಕೇಂದ್ರದಿಂದ (MRCC) ವಾಣಿಜ್ಯ ಹಡಗು ಸಂಕಷ್ಟದಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ಪಡೆದು ಭಾರತೀಯ ಕರಾವಳಿ ಭದ್ರತಾ ಪಡೆ ಎರಡು ಹಡಗುಗಳು ಮತ್ತು ಒಂದು ವಿಮಾನವನ್ನು ಸಜ್ಜುಗೊಳಿಸಿದೆ.
ಕೋಲ್ಕತ್ತಾದಲ್ಲಿರುವ ಪ್ರಾದೇಶಿಕ ಪ್ರಧಾನ ಕಛೇರಿಯು ಎರಡು ಹಡಗುಗಳು ಮತ್ತು ಒಂದು ಡಾರ್ನಿಯರ್ ವಿಮಾನವನ್ನು ಸಜ್ಜುಗೊಳಿಸುವ ಮೂಲಕ ಕ್ಷೀಪ್ರಗತಿಯಲ್ಲಿ ಕಾರ್ಯಾಚರಣೆ ನಡೆಸಿದ್ದು, 11 ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ಭಾರತೀಯ ಕರಾವಳಿ ಭದ್ರತಾ ಪಡೆ ತಿಳಿಸಿದೆ.
ಪ್ರತಿಕೂಲ ಹವಮಾನ ಪರಿಸ್ಥಿತಿಯ ಹೊರತಾಗಿಯೂ ICG ಹಡಗುಗಳಾದ ಸಾರಂಗ್ ಮತ್ತು ಅಮೋಘ್, ಡಾರ್ನಿಯರ್ ವಿಮಾನದ ಜೊತೆಗೆ, ಸಂಘಟಿತ ಕಾರ್ಯಾಚರಣೆಯಲ್ಲಿ ಆಗಸ್ಟ್ 25 ರ ತಡರಾತ್ರಿ ಮತ್ತು ಆಗಸ್ಟ್ 26 ರ ಮುಂಜಾನೆ ಸಮಯದಲ್ಲಿ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
Advertisement