ಲಖನೌ: ಉತ್ತರ ಪ್ರದೇಶದ ಇಂಡೋ-ನೇಪಾಳ ಗಡಿ ಜಿಲ್ಲೆ ಬಹ್ರೈಚ್‌ನ ಮಹಾಸಿ ಬ್ಲಾಕ್‌ನ 30 ಗ್ರಾಮಗಳಲ್ಲಿ ತೋಳಗಳ ಗುಂಪು ದಾಳಿ ನಡೆಸಿದ್ದು, ಘಟನೆಯಲ್ಲಿ ಆರು ಮಕ್ಕಳು ಸೇರಿದಂತೆ ಏಳು ಜನ ಸಾವನ್ನಪ್ಪಿದ್ದಾರೆ ಮತ್ತು 26 ಜನ ಗಾಯಗೊಂಡಿದ್ದಾರೆ.
ಅರಣ್ಯ ಇಲಾಖೆಯು ತೋಳಗಳನ್ನು ಸೆರೆ ಹಿಡಿಯಲು ಒಂಬತ್ತು ಜನರ ತಂಡವನ್ನು ನಿಯೋಜಿಸಿದೆ. ತೋಳಗಳ ಆಗಾಗ್ಗೆ ಗ್ರಾಮಗಳಿಗೆ ನುಗ್ಗಿ ದಾಳಿ ನಡೆಸುತ್ತಿದ್ದು, ಕಳೆದ ಒಂದು ತಿಂಗಳಿಂದ ಈ ಪ್ರದೇಶದ ಗ್ರಾಮಸ್ಥರಲ್ಲಿ ಭೀತಿಯನ್ನು ಸೃಷ್ಟಿಸಿವೆ.
ಗ್ರಾಮಸ್ಥರು ತೋಳಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ರಾತ್ರಿ ಪಾಳಿಗಳಲ್ಲಿ ಕಾಯುತ್ತಿದ್ದಾರೆ. ಅರಣ್ಯಾಧಿಕಾರಿಗಳು ಇಲ್ಲಿಯವರೆಗೆ ಮೂರು ತೋಳಗಳನ್ನು ಹಿಡಿದು ಲಖನೌ ಮೃಗಾಲಯಕ್ಕೆ ಕಳುಹಿಸಿದ್ದಾರೆ. ಅರಣ್ಯ ಇಲಾಖೆಯು ಥರ್ಮಲ್ ಡ್ರೋನ್ ಸೇರಿದಂತೆ ವಿವಿಧ ತಂತ್ರಜ್ಞಾನಗಳೊಂದಿಗೆ ತೋಳಗಳನ್ನು ಟ್ರ್ಯಾಕ್ ಮಾಡುತ್ತಿದೆ.
"ದಾಳಿಯಲ್ಲಿ ವಯಸ್ಕ ಮಹಿಳೆಯ ಸಾವು ಅನುಮಾನಾಸ್ಪದವಾಗಿದೆ. ಆದರೆ ಆರು ಮಕ್ಕಳ ಸಾವು ತೋಳಗಳ ದಾಳಿಯಿಂದ ಸಂಭವಿಸಿದೆ ಎಂದು ದೃಢಪಟ್ಟಿರುವುದಾಗಿ" ತನಿಖಾಧಿಕಾರಿಯೊಬ್ಬರು TNIE ತಿಳಿಸಿದ್ದಾರೆ.
ಬಹ್ರೈಚ್ ಜಿಲ್ಲೆಯ ವಿಭಾಗೀಯ ಅರಣ್ಯಾಧಿಕಾರಿ ಅಜೀತ್ ಪ್ರತಾಪ್ ಸಿಂಗ್ ಮಾತನಾಡಿ, ತೋಳಗಳ ದಾಳಿಯ ಮೊದಲ ಘಟನೆ ಜುಲೈ 17 ರಂದು ವರದಿಯಾಗಿದೆ. "ನಮ್ಮ ಅಧಿಕಾರಿಗಳು ಥರ್ಮಲ್ ಡ್ರೋನ್‌ಗಳ ಸಹಾಯದಿಂದ ತೋಳಗಳ ಪ್ಯಾಕ್ ಅನ್ನು ತಡೆಯಲು ಮತ್ತು ಹಿಡಿಯಲು ಶ್ರಮಿಸುತ್ತಿದ್ದಾರೆ. ನಾವು ಆರು ಕ್ಯಾಮೆರಾಗಳನ್ನು ಸ್ಥಾಪಿಸುತ್ತಿದ್ದೇವೆ ಮತ್ತು ಅವುಗಳು ಹೆಚ್ಚಾಗಿ ಸಂಚರಿಸುವ ಪ್ರದೇಶದಲ್ಲಿ ನಾಲ್ಕು ಬಲೆಗಳನ್ನು ಇರಿಸುತ್ತಿದ್ದೇವೆ" ಎಂದು ಸಿಂಗ್ ಹೇಳಿದ್ದಾರೆ.
ಅರಣ್ಯ ಅಧಿಕಾರಿಗಳ ಪ್ರಕಾರ, 5-6 ತೋಳಗಳನ್ನು ಒಳಗೊಂಡ ಒಂದು ಹಿಂಡು ಇದ್ದು, ಅವು ಕೇವಲ ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ.
Advertisement