ಟ್ರೈನಿ ಡಾಕ್ಟರ್ ರೇಪ್, ಕೊಲೆ: ಆಗಸ್ಟ್ 9 ರಂದು ಆರ್‌ಜಿ ಕರ್ ಆಸ್ಪತ್ರೆಯಿಂದ ಸಂತ್ರಸ್ತೆಯ ಪೋಷಕರಿಗೆ ಬಂದ 3 ಕರೆಗಳ ಆಡಿಯೋ ರೆಕಾರ್ಡ್ ಬಹಿರಂಗ!

ಫೋನ್ ಕರೆಗಳಲ್ಲಿ ಸಂತ್ರಸ್ತೆಯ ಸ್ಥಿತಿಯ ಕುರಿತು ಅಧಿಕಾರಿಯೊಬ್ಬರು ನೀಡಿದ ಹೇಳಿಕೆಗಳಲ್ಲಿನ ಬದಲಾವಣೆಗಳು ಆಸ್ಪತ್ರೆಯು ಆರಂಭದಲ್ಲಿ ಘೋರ ಅಪರಾಧವನ್ನು ಮುಚ್ಚಿಡಲು ಪ್ರಯತ್ನಿಸಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಆರ್ ಜಿ ಕರ್ ಆಸ್ಪತ್ರೆ ಮುಂಭಾಗದ ಬ್ಯಾನರ್
ಆರ್ ಜಿ ಕರ್ ಆಸ್ಪತ್ರೆ ಮುಂಭಾಗದ ಬ್ಯಾನರ್
Updated on

ಕೋಲ್ಕತ್ತಾ: ಅತ್ಯಾಚಾರ, ಹತ್ಯೆಗೀಡಾದ ಮಹಿಳಾ ಟ್ರೈನಿ ಡಾಕ್ಟರ್ ಪೋಷಕರಿಗೆ ಆಗಸ್ಟ್ 9 ರಂದು ಬೆಳಿಗ್ಗೆ ಆರ್‌ಜಿ ಕಾರ್ ಮೆಡಿಕಲ್ ಕಾಲೇಜು ಅಧಿಕಾರಿಗಳು ಆಸ್ಪತ್ರೆಗೆ ಬರುವಂತೆ ಹೇಳಿ ಮಾಡಿದ ಮೂರು ಫೋನ್ ಕರೆಗಳ ಆಡಿಯೋ ರೆಕಾರ್ಡ್ ಗಳು ಗುರುವಾರ ಸಾರ್ವಜನಿಕವಾಗಿ ಬಹಿರಂಗವಾಗಿದ್ದು, ಕೆಟ್ಟ ಸುದ್ದಿಯನ್ನು ನೀಡುವಲ್ಲಿ ಸಂಸ್ಥೆಯ ಆಡಳಿತದ ಅಸೂಕ್ಷ್ಮತೆ" ಮತ್ತು ತಪ್ಪು ಮಾಹಿತಿ ವಿವಾದಕ್ಕೆ ಗುರಿಯಾಗಿದೆ.

ಆ ಫೋನ್ ಕರೆಗಳಲ್ಲಿ ಸಂತ್ರಸ್ತೆಯ ಸ್ಥಿತಿಯ ಕುರಿತು ಅಧಿಕಾರಿಯೊಬ್ಬರು ನೀಡಿದ ಹೇಳಿಕೆಗಳಲ್ಲಿನ ಬದಲಾವಣೆಗಳು ಆಸ್ಪತ್ರೆಯು ಆರಂಭದಲ್ಲಿ ಘೋರ ಅಪರಾಧವನ್ನು ಮುಚ್ಚಿಡಲು ಪ್ರಯತ್ನಿಸಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ತನ್ನನ್ನು ಆಸ್ಪತ್ರೆಯ ಸಹಾಯಕ ಸೂಪರಿಂಟೆಂಡೆಂಟ್ ಎಂದು ಪರಿಚಯಿಸಿಕೊಂಡ ಮಹಿಳೆಯೊಬ್ಬರು, ಸುಮಾರು 30 ನಿಮಿಷಗಳ ಅವಧಿಯಲ್ಲಿ ಅದೇ ಸಂಖ್ಯೆಯಿಂದ ಸಂತ್ರಸ್ತರ ಪೋಷಕರಿಗೆ ಮೂರು ಬಾರಿ ಕರೆ ಮಾಡಿದ್ದು, ತುರ್ತಾಗಿ ಆಸ್ಪತ್ರೆಗೆ ಬರುವಂತೆ ಹೇಳುತ್ತಾರೆ.

ಮೊದಲ ಕರೆ : ಆ ದಿನ ಬೆಳಿಗ್ಗೆ 10.53 ರ ಸುಮಾರಿಗೆ ಮೊದಲ ಬಾರಿಗೆ ಮೊದಲ ಕರೆ ಮಾಡಿದ್ದು, ಸಂತ್ರಸ್ತೆಯ ತಂದೆ ಫೋನ್ ತೆಗೆದುಕೊಂಡಾಗ ಕರೆ ಮಾಡಿದವರು, ನಾನು RG ಕರ್ ಆಸ್ಪತ್ರೆಯಿಂದ ಕರೆ ಮಾಡುತ್ತಿದ್ದೇನೆ. ನೀವು ತಕ್ಷಣ ಬರಬಹುದೇ?" "ಯಾಕೆ? ಏನಾಯಿತು?" ತಂದೆ ಪ್ರತಿಕ್ರಿಯಿಸುವರು, ಇದಕ್ಕೆ ಫೋನ್ ಮಾಡಿದವರು, "ನಿಮ್ಮ ಮಗಳಿಗೆ ಸ್ವಲ್ಪ ಕಾಯಿಲೆಯಾಗಿದೆ. ನಾವು ಆಸ್ಪತ್ರೆಗೆ ಸೇರಿಸುತ್ತಿದ್ದೇವೆ, ನೀವು ಬೇಗನೆ ಕೆಳಗೆ ಬರಬಹುದೇ?"

ಹೆಚ್ಚಿನ ವಿವರ ನೀಡುವಂತೆ ಪೋಷಕರು ಒತ್ತಾಯಿಸಿದಾಗ, ಆ ವಿವರಗಳನ್ನು ವೈದ್ಯರು ಮಾತ್ರ ನೀಡಬಹುದು, ನಾವು ನಿಮ್ಮ ನಂಬರ್ ಮಾತ್ರ ಹುಡುಕಿ, ಕರೆ ಮಾಡಿದ್ದೇವೆ. ದಯವಿಟ್ಟು ಬೇಗನೆ ಕೆಳಗೆ ಬನ್ನಿ. ಸಂತ್ರಸ್ತೆಗೆ ಅನಾರೋಗ್ಯದ ನಂತರ ದಾಖಲಿಸಲಾಗಿದೆ. ಉಳಿದ ವಿವರಗಳನ್ನು ನೀವು ಬಂದ ನಂತರ ವೈದ್ಯರು ತಿಳಿಸುತ್ತಾರೆ ಎಂದು ಕರೆ ಮಾಡಿದವರು ಹೇಳುತ್ತಾರೆ.

ಅವಳಿಗೆ ಜ್ವರ ಬಂದಿದೆಯೇ ಎಂದು ಸಂತ್ರಸ್ತೆ ತಾಯಿ ಕೇಳುವುದು ಕೇಳಿಸುತ್ತದೆ. ಅದಕ್ಕೆ ಬೇಗ ಬನ್ನಿಎಂದು ಕರೆ ಮಾಡಿದವರು ಉತ್ತರಿಸುತ್ತಾರೆ. ಆಕೆಯ ಸ್ಥಿತಿ ತುಂಬಾ ಗಂಭೀರವಾಗಿದೆಯೇ?" ಎಂದು ಕೇಳುವ ತಂದೆಯ ಧ್ವನಿ ಕೇಳಿಸುತ್ತದೆ "ಹೌದು, ಆಕೆ ತುಂಬಾ ಗಂಭೀರವಾಗಿದ್ದಾಳೆ. ಬೇಗ ಬನ್ನಿ ಎಂದು ಹೇಳಲಾಗುತ್ತದೆ. ಒಂದು ನಿಮಿಷ ಮತ್ತು 11 ಸೆಕೆಂಡುಗಳ ಕಾಲ ಮೊದಲ ಕರೆಯದಾಗಿರುತ್ತದೆ.

ಐದು ನಿಮಿಷಗಳ ನಂತರ ಬಂದ ಎರಡನೇ ಫೋನ್ ಕರೆ ಸುಮಾರು 46 ಸೆಕೆಂಡ್‌ಗಳ ಕಾಲ ನಡೆಯುತ್ತದೆ. ಅದೇ ನಂಬರ್ ನಿಂದ ಕರೆ ಮಾಡಿದವರು, ಆಕೆಯ ಸ್ಥಿತಿ ಗಂಭೀರವಾಗಿದೆ, ತುಂಬಾ ಗಂಭೀರವಾಗಿದೆ, ದಯವಿಟ್ಟು ನೀವು ಸಾಧ್ಯವಾದಷ್ಟು ಬೇಗ ಬನ್ನಿ" ಎಂದು ಹೇಳುವುದು ಕೇಳಿಸುತ್ತದೆ. ತನ್ನ ಮಗಳಿಗೆ ಏನಾಯಿತು ಎಂದು ಕೇಳುವ ತಂದೆಯ ಹತಾಶ ಮನವಿಗೆ, ವೈದ್ಯರು ಮಾತ್ರ ಅದನ್ನು ಹೇಳಬಹುದು. ನೀವು ದಯವಿಟ್ಟು ಬನ್ನಿ ಎಂದು ಹೇಳಲಾಗುತ್ತದೆ. ನೀವು ಯಾರು ಎಂದು ಹೇಳಿ ಎಂದು ಸಂತ್ರಸ್ತೆ ತಂದೆ ಕೇಳಿದಾಗ, ನಾನು ಸಹಾಯಕ ಸೂಪರಿಂಟೆಂಡೆಂಟ್, ನಾನು ವೈದ್ಯನಲ್ಲ, ನಿಮ್ಮ ಮಗಳನ್ನು ತುರ್ತು ವಿಭಾಗಕ್ಕೆ ಕರೆತಂದಿದ್ದೇವೆ, ನೀವು ದಯವಿಟ್ಟು ಬಂದಿ ನಮ್ಮನ್ನು ಸಂಪರ್ಕಿಸಿ ಎಂದು ಹೇಳುತ್ತಾರೆ.

ಭಯಭೀತರಾದ ತಾಯಿಯ ಧ್ವನಿ ಕೇಳಿಸುತ್ತದೆ. ಅದಕ್ಕೆ ನೀವು ಬೇಗ ಬನ್ನಿ ಆದಷ್ಟು ಬೇಗ ಬನ್ನಿ ಎಂಬ ಉತ್ತರ ಬರುತ್ತದೆ.

ಆರ್ ಜಿ ಕರ್ ಆಸ್ಪತ್ರೆ ಮುಂಭಾಗದ ಬ್ಯಾನರ್
ಕೋಲ್ಕತ್ತಾದಲ್ಲಿ ವೈದ್ಯೆ ಮೇಲೆ ಅತ್ಯಾಚಾರ-ಹತ್ಯೆ ಕೇಸು: ಆರ್ ಜಿ ಕಾರ್ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಮೇಲೆ ಸುಳ್ಳು ಪತ್ತೆ ಪರೀಕ್ಷೆ

ಮೂರನೆಯ ಮತ್ತು ಅಂತಿಮ ಕರೆಯು ಸಂತ್ರಸ್ತೆಯ ಮರಣವನ್ನು ಟ್ವಿಸ್ಟ್ ನೊಂದಿಗೆ ಹೇಳುತ್ತದೆ. "ಹೌದು, ದಯವಿಟ್ಟು ಕೇಳಿ. ನಾವು ನಿಮಗೆ ಈ ಹಿಂದೆ ಪದೇ ಪದೇ ಹೇಳುತ್ತಿದ್ದೆವು... ನಿಮ್ಮ ಮಗಳು... ಆತ್ಮಹತ್ಯೆ ಮಾಡಿಕೊಂಡಿರಬಹುದು... ಅಥವಾ, ಆಕೆ ತೀರಿಕೊಂಡಿರಬಹುದು. ಪೊಲೀಸರು ಇಲ್ಲಿದ್ದಾರೆ. ಆಸ್ಪತ್ರೆಯಿಂದ ನಾವೆಲ್ಲರೂ ಇಲ್ಲಿದ್ದೇವೆ. ನಾವು ನಿಮ್ಮನ್ನು ಕಾಯುತ್ತಿದ್ದೇವೆ. ನೀವು ಬೇಗನೆ ಬನ್ನಿ ಎಂದು ಆದೇ ನಂಬರ್ ನಿಂದ ಬಂದ ಕರೆಯಲ್ಲಿ ದ್ವಂದ್ವ ರೀತಿಯಲ್ಲಿ ಹೇಳಲಾಗುತ್ತದೆ.

ಅಂತಿಮ ಕರೆ 28 ಸೆಕೆಂಡುಗಳ ಕಾಲ ನಡೆಯುತ್ತದೆ.

ಸಂತ್ರಸ್ತೆ ಸ್ವಲ್ಪ ಅನಾರೋಗ್ಯಕ್ಕೆ ಒಳಗಾಗುವುದರಿಂದ ಬಹಳ ಕ್ಲಿಷ್ಟಕರ ಮತ್ತು ತುರ್ತು ಚಿಕಿತ್ಸಾ ವಾರ್ಡ್‌ನಲ್ಲಿ ದಾಖಲಾಗಿದ್ದಾರೆ. ಅಂತಿಮವಾಗಿ, "ಆತ್ಮಹತ್ಯೆಯಿಂದ ಸಾವನ್ನಪ್ಪಿರಬಹುದು" ಎಂಬವರೆಗಿನ ಆಸ್ಪತ್ರೆಯವರ ಹೇಳಿಕೆಗಳು ಆತ್ಮಹತ್ಯೆ ಎಂದು ಬಿಂಬಿಸಲು ಮಾಡಿದ ಪ್ರಯತ್ನವೇ ಎಂದು ಎಂದು ತನಿಖಾಧಿಕಾರಿಗಳನ್ನು ಪ್ರಶ್ನಿಸುವಂತೆ ಮಾಡಿದೆ. ಅಪರಾಧವನ್ನು ಮುಚ್ಚಿಹಾಕಲು ಆಸ್ಪತ್ರೆಯ ಅಧಿಕಾರಿಗಳು ಮತ್ತು ಪೊಲೀಸರು ಸಂಚು ರೂಪಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com