
ಚೆನ್ನೈ: ಫೆಂಗಲ್ ಚಂಡಮಾರುತದ ಪರಿಣಾಮ ವಾಯುಭಾರ ಕುಸಿತ ಉಂಟಾಗಿ ಭಾರೀ ಗಾಳಿ ಮತ್ತು ಮಳೆ ಸೇರಿದಂತೆ ಅತ್ಯಂತ ತೀವ್ರವಾದ ಹವಾಮಾನ ಪರಿಸ್ಥಿತಿಗಳ ನಡುವೆ ಇಂಡಿಗೋ ವಿಮಾನವು ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಪಟ್ಟು ಅತ್ಯಂತ ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸಿತು.
ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಭಾರೀ ಪ್ರಕ್ಷುಬ್ಧ ವಾತಾವರಣ ನಡುವೆ ವಿಮಾನವು ಇಳಿಯಲು ಪ್ರಯತ್ನಿಸುತ್ತಿದೆ. ಹವಾಮಾನ ಪರಿಸ್ಥಿತಿಗಳು ಮತ್ತಷ್ಟು ತೀವ್ರಗೊಳ್ಳುತ್ತಿದ್ದಂತೆ, ವಿಮಾನವು ಲ್ಯಾಂಡಿಂಗ್ ಪ್ರಯತ್ನವನ್ನು ನಿಲ್ಲಿಸಿ ಹಾರಿಹೋಗುತ್ತಿರುವುದು ಕಂಡುಬರುತ್ತದೆ.
ಇಂಡಿಗೊ ಏರ್‌ಲೈನ್ಸ್ ಘಟನೆಯನ್ನು ದೃಢಪಡಿಸಿದೆ. ಪ್ರತಿಕೂಲ ಹವಾಮಾನದ ಕಾರಣ ಮುಂಬೈ-ಚೆನ್ನೈ ವಿಮಾನವು "ಗೋ-ಅರೌಂಡ್" ನ್ನು ಜಾರಿಗೆ ತರಬೇಕಾಯಿತು ಎಂದಿದೆ.
ಮಳೆ ಮತ್ತು ಬಲವಾದ ಗಾಳಿ ಸೇರಿದಂತೆ ಪ್ರತಿಕೂಲ ಹವಾಮಾನದ ಕಾರಣ (ಚೆನ್ನೈ ವಿಮಾನ ನಿಲ್ದಾಣವನ್ನು ತಾತ್ಕಾಲಿಕ ಮುಚ್ಚಲಾಯಿತು), ಮುಂಬೈ ಮತ್ತು ಚೆನ್ನೈ ನಡುವೆ ಕಾರ್ಯನಿರ್ವಹಿಸುತ್ತಿರುವ ವಿಮಾನ 6ಇ 683 ನ ಕಾಕ್‌ಪಿಟ್ ಸಿಬ್ಬಂದಿ ಸ್ಥಾಪಿತ ಸುರಕ್ಷತಾ ಪ್ರೋಟೋಕಾಲ್‌ಗಳಿಗೆ ಅನುಸಾರವಾಗಿ ಗೋ-ಅರೌಂಡ್ ನ್ನು ಕಾರ್ಯಗತಗೊಳಿಸಿದರು ಎಂದು ಹೇಳಿಕೆ ತಿಳಿಸಿದೆ.
ಇದು ಪ್ರಮಾಣಿತ ಮತ್ತು ಸುರಕ್ಷಿತ ತಂತ್ರವಾಗಿದೆ, ನಮ್ಮ ಪೈಲಟ್‌ಗಳು ಅಂತಹ ಸಂದರ್ಭಗಳನ್ನು ಅತ್ಯಂತ ವೃತ್ತಿಪರತೆಯೊಂದಿಗೆ ನಿರ್ವಹಿಸಲು ತರಬೇತಿ ಪಡೆದಿದ್ದಾರೆ. ಸುರಕ್ಷಿತ ಲ್ಯಾಂಡಿಂಗ್ ಸಾಧಿಸಲು ಸಾಧ್ಯವಾಗದಿದ್ದಾಗ ಗೋ-ಅರೌಂಡ್ ನ್ನು ನಡೆಸಲಾಗುತ್ತದೆ ಎಂದು ಇಂಡಿಗೋ ಹೇಳಿದೆ.
Advertisement