Casual Images
ಸಾಂದರ್ಭಿಕ ಚಿತ್ರ

ಇವಿಎಂ ಹ್ಯಾಕ್ ಮಾಡಬಹುದು: ವ್ಯಕ್ತಿಯ ವಿರುದ್ಧ FIR ದಾಖಲು

ಆರೋಪಿ ಸೈಯದ್ ಶುಜಾ ಮಾಡಿರುವ ಆರೋಪಗಳು ಸುಳ್ಳು, ಆಧಾರ ರಹಿತ ಎಂದು ಆರೋಪಿಸಿ ಮಹಾರಾಷ್ಟ್ರದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಅವರು ದೂರು ನೀಡಿದ್ದಾರೆ.
Published on

ಮುಂಬೈ: ಮಷಿನ್ ಫ್ರೀಕ್ವೆನ್ಸಿಯನ್ನು ಪ್ರತ್ಯೇಕಿಸುವ ಮೂಲಕ ತಾನು ಕೂಡಾ ಇವಿಎಂಗಳನ್ನು ಹ್ಯಾಕ್ ಮಾಡಬಹುದು ಎಂದು ಹೇಳಿದ್ದ ವ್ಯಕ್ತಿಯ ವಿರುದ್ಧ ಮುಂಬೈ ಸೈಬರ್ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಸೈಯದ್ ಶುಜಾ ಮಾಡಿರುವ ಆರೋಪಗಳು ಸುಳ್ಳು, ಆಧಾರ ರಹಿತ ಎಂದು ಆರೋಪಿಸಿ ಮಹಾರಾಷ್ಟ್ರದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಅವರು ದೂರು ನೀಡಿದ್ದಾರೆ.

ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಮತ್ತು ಐಟಿ ಕಾಯ್ದೆಯಡಿ ದಕ್ಷಿಣ ಮುಂಬೈನ ಸೈಬರ್ ಪೊಲೀಸ್ ಠಾಣೆಯಲ್ಲಿ ನವೆಂಬರ್ 30 ರಂದು ವ್ಯಕ್ತಿಯ ವಿರುದ್ಧ' ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸಿಇಒ ಹೇಳಿದ್ದಾರೆ.

ಮಷಿನ್ ಫ್ರೀಕ್ವೆನ್ಸಿಯನ್ನು ಪ್ರತ್ಯೇಕಿಸುವ ಮೂಲಕ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (ಇವಿಎಂ) ಹ್ಯಾಕ್ ಮಾಡಬಹುದು ಮತ್ತು ತಿರುಚಬಹುದು ಎಂಬ ವ್ಯಕ್ತಿಯೊಬ್ಬರ ಹೇಳಿಕೆಯ ವೀಡಿಯೊವನ್ನು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡ ನಂತರ ಚುನಾವಣಾ ಆಯೋಗದ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ. 2019 ರಲ್ಲಿಯೂ ಇದೇ ರೀತಿಯ ಹೇಳಿಕೆ ನೀಡಿದ್ದಕ್ಕಾಗಿ ಶುಜಾ ವಿರುದ್ಧ ಎಫ್‌ಐಆರ್ ದಾಖಲಿಸಲು EC ಆದೇಶಿಸಿತ್ತು.

Casual Images
ಹಲವು ದೇಶಗಳಲ್ಲಿ ಇವಿಎಂ ಬಳಕೆ ಸ್ಥಗಿತ: ಮೇಧಾ ಪಾಟ್ಕರ್

ಇಂತಹ ಕ್ರಮಗಳು ಗಂಭೀರ ಅಪರಾಧವಾಗಿದ್ದು, ಇದರಲ್ಲಿ ಭಾಗಿಯಾಗಿರುವ ಯಾರನ್ನೂ ಸುಮ್ಮನೆ ಬಿಡಲಾಗುವುದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಇವಿಎಂಗಳು ವೈಫೈ ಅಥವಾ ಬ್ಲೂಟೂತ್ ಸೇರಿದಂತೆ ಯಾವುದೇ ನೆಟ್‌ವರ್ಕ್‌ಗೆ ಸಂಪರ್ಕಿಸಲಾಗದ ಸ್ವತಂತ್ರ ಯಂತ್ರಗಳಾಗಿವೆ ಎಂದು ಇಸಿ ಸಮರ್ಥಿಸಿಕೊಂಡಿದೆ. ಇವಿಎಂಗಳ ಮೇಲಿನ ನಂಬಿಕೆಯನ್ನು ಸುಪ್ರೀಂ ಕೋರ್ಟ್ ಹಲವು ಸಂದರ್ಭಗಳಲ್ಲಿ ತಳ್ಳಿಹಾಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com