ಸಂಭಾಜಿನಗರ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ನಂತರ ಕೆಲವು ವಿರೋಧ ಪಕ್ಷಗಳು ಇವಿಎಂ ವಿಶ್ವಾಸಾರ್ಹತೆಯ ಬಗ್ಗೆ ಮತ್ತೆ ಚರ್ಚೆ ಆರಂಭಿಸಿರುವಂತೆಯೇ, ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕಾರ್ ಕೂಡಾ ಹಲವು ದೇಶಗಳು ಇವಿಎಂ ಬಳಕೆ ಸ್ಥಗಿತಗೊಳಿಸಿರುವುದಾಗಿ ಶನಿವಾರ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣಾ ವಿಧಾನದಲ್ಲಿ ಬ್ಯಾಲೆಟ್ ಪೇಪರ್ ನ್ನು ಮರು ಪರಿಚಯಿಸುವಂತೆ ಸಲಹೆ ನೀಡಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಪಾಟ್ಕರ್, "ನಾನು ಇವಿಎಂಗಳ ಬಗ್ಗೆ ಪರಿಣತಿ ಹೊಂದಿಲ್ಲ. ಆದರೆ ಅನೇಕ ದೇಶಗಳು ಅವುಗಳ ಬಳಕೆ ನಿಲ್ಲಿಸಿರುವುದು ನಿಜ. ಕೇವಲ ವಿದ್ಯುತ್ ಸಂಪರ್ಕದೊಂದಿಗೆ ಕೆಲವೊಂದು ವಿದ್ಯುನ್ಮಾನ ಮತಯಂತ್ರಗಳನ್ನು ಬದಲಾಯಿಸಬಹುದು ಎಂಬುದು ಪ್ರಯೋಗಗಳು ತೋರಿಸಿವೆ ಎಂದರು.
ಮಹಾತ್ಮಗಾಂಧಿ ಮಿಷನ್ ವಿಶ್ವವಿದ್ಯಾನಿಲಯದಿಂದ ಅವರಿಗೆ ಗೌರವ ಡಿ.ಲಿಟ್ ನೀಡಲಾಯಿತು. ಚುನಾವಣಾ ಆಯೋಗ ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಪರ್ಕ ಹೊಂದಿದ್ದರೆ ಚುನಾವಣಾ ನೀತಿ ಸಂಹಿತೆಯನ್ನು ನಿಷ್ಪಕ್ಷಪಾತವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಮಹಾರಾಷ್ಟ್ರ ಸರ್ಕಾರದ "ಮಝಿ ಲಡ್ಕಿ ಬಹಿನ್" ಯೋಜನೆಯಡಿ ಬಡ ಕುಟುಂಬದ ಮಹಿಳೆಯರಿಗೆ ಮಾಸಿಕ 1,500 ರೂ. ಆರ್ಥಿಕ ನೆರವು ನೀಡುವುದರಿಂದ ಅವರ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದರು.
Advertisement