Beef Ban:'ಕಾಂಗ್ರೆಸ್ ಪತ್ರ ಬರೆದರೆ ಅಸ್ಸಾಂನಲ್ಲಿ ಗೋಮಾಂಸ ನಿಷೇಧಿಸಲು ಸಿದ್ಧ': ಸಿಎಂ ಶರ್ಮಾ ದೊಡ್ಡ ಘೋಷಣೆ

ಮುಸ್ಲಿಂ ಪ್ರಾಬಲ್ಯದ ಸಮ್ಗುರಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ, ಬಿಜೆಪಿ ಗೋಮಾಂಸ ಹಂಚಿದೆ ಎಂದು ಆರೋಪಿಸಲಾಗಿತ್ತು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಸತತ ಐದು ಬಾರಿ ಗೆದ್ದಿತ್ತು. ಆದರೆ ಈ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.
Himanta Biswa Sarma
ಹಿಮಂತ ಬಿಸ್ವಾ ಶರ್ಮಾPTI
Updated on

ಗೋಮಾಂಸವನ್ನು ನಿಷೇಧಿಸುವಂತೆ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಭೂಪೇನ್ ಕುಮಾರ್ ಬೋರಾ ಅವರು ಪತ್ರ ಬರೆದರೆ ರಾಜ್ಯದಲ್ಲಿ ಗೋಮಾಂಸವನ್ನು ನಿಷೇಧಿಸಲು ಸಿದ್ಧ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಮುಸ್ಲಿಂ ಪ್ರಾಬಲ್ಯದ ಸಮ್ಗುರಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ, ಬಿಜೆಪಿ ಗೋಮಾಂಸ ಹಂಚಿದೆ ಎಂದು ಆರೋಪಿಸಲಾಗಿತ್ತು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಸತತ ಐದು ಬಾರಿ ಗೆದ್ದಿತ್ತು. ಆದರೆ ಈ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.

'ಸಮ್ಗುರಿ ಕ್ಷೇತ್ರವು 25 ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿಯೇ ಇತ್ತು. ಸಮ್ಗುರಿಯಂತಹ ಕ್ಷೇತ್ರದಲ್ಲಿ 27,000 ಮತಗಳ ಅಂತರದಿಂದ ಸೋತಿರುವುದು ಕಾಂಗ್ರೆಸ್ ಇತಿಹಾಸದಲ್ಲೇ ದೊಡ್ಡ ಅವಮಾನ. ಇದು ಬಿಜೆಪಿಯ ಗೆಲುವಿಗಿಂತ ಕಾಂಗ್ರೆಸ್ಸಿನ ಸೋಲು. 'ದುಃಖದ ನಡುವೆಯೇ ರಕೀಬುಲ್ ಹುಸೇನ್ ಗೋಮಾಂಸ ತಿನ್ನುವುದು ತಪ್ಪು ಎಂದು ಒಳ್ಳೆಯ ಮಾತು ಹೇಳಿದ್ದಾರೆ. ಅಲ್ಲವೇ? ಮತದಾರರಿಗೆ ಗೋಮಾಂಸ ಬಡಿಸುವ ಮೂಲಕ ಕಾಂಗ್ರೆಸ್-ಬಿಜೆಪಿ ಚುನಾವಣೆ ಗೆಲ್ಲುವುದು ಬೇಡ. ಹೀಗಾಗಿ ಕಾಂಗ್ರೆಸ್ ಲಿಖಿತವಾಗಿ ಬರದುಕೊಟ್ಟರೆ ರಾಜ್ಯದಲ್ಲಿ ಗೋಮಾಂಸವನ್ನು ನಿಷೇಧಿಸುವುದಾಗಿ ಸಿಎಂ ಶರ್ಮಾ ಹೇಳಿದ್ದಾರೆ.

'ಕಾಂಗ್ರೆಸ್ ಇಲ್ಲಿಯವರೆಗೆ ಮತದಾರರಿಗೆ ಗೋಮಾಂಸ ನೀಡುವುದರ ಮೂಲಕ ಸಮ್ಗುರಿಯನ್ನು ಗೆಲ್ಲುತ್ತಿತ್ತೆ ಎಂದು ನಾನು ತಿಳಿದುಕೊಳ್ಳಲು ಬಯಸುತ್ತೇನೆ. ದನದ ಮಾಂಸವನ್ನು ಕೊಟ್ಟು ಸಮ್ಗುರಿಯನ್ನು ಗೆಲ್ಲಬಹುದೆ?' ಗೋಮಾಂಸವನ್ನು ನಿಷೇಧಿಸಬೇಕು ಎಂದು ನಾನು ರಾಕಿಬುಲ್ ಹುಸೇನ್ ಅವರಿಗೆ ಹೇಳಲು ಬಯಸುತ್ತೇನೆ. ಏಕೆಂದರೆ ಅದು ತಪ್ಪು ಎಂದು ಅವರೇ ಹೇಳಿದ್ದಾರೆ ಎಂದು ಸಿಎಂ ಶರ್ಮಾ ಹೇಳಿದ್ದಾರೆ. ಬಿಜೆಪಿ ಅಥವಾ ಕಾಂಗ್ರೆಸ್ ಗೋಮಾಂಸದ ಬಗ್ಗೆ ಮಾತನಾಡಬಾರದು, ಆದರೆ ಅಸ್ಸಾಂನಲ್ಲಿ ಅದನ್ನು ನಿಷೇಧಿಸಬೇಕು ಎಂದು ಅವರು ನನಗೆ ಲಿಖಿತವಾಗಿ ನೀಡಬೇಕಾಗಿದೆ. ಹೀಗೆ ಮಾಡಿದರೆ ಎಲ್ಲ ಸಮಸ್ಯೆಗಳೂ ಪರಿಹಾರವಾಗುತ್ತವೆ ಎಂದು ಹೇಳಿದರು.

Himanta Biswa Sarma
ವಕ್ಫ್ ಮಸೂದೆ ಅಲ್ಲ... Wakf Board ಅನ್ನೇ ವಜಾಗೊಳಿಸಿದ ಆಂಧ್ರ ಪ್ರದೇಶ ಸರ್ಕಾರ!

ಸಮ್ಗುರಿ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ದಿಪ್ಲು ರಂಜನ್ ಶರ್ಮಾ ಅವರು ಕಾಂಗ್ರೆಸ್ ಸಂಸದ ರಾಕಿಬುಲ್ ಹುಸೇನ್ ಅವರ ಪುತ್ರ ತಂಜೀಲ್ ಅವರನ್ನು 24,501 ಮತಗಳ ಅಂತರದಿಂದ ಸೋಲಿಸಿದ್ದಾರೆ. ರಾಕಿಬುಲ್ ಹುಸೇನ್ ಹೇಳಿಕೆಗೆ ಸಂಬಂಧಿಸಿದಂತೆ ಗೋಮಾಂಸದ ಬಗ್ಗೆ ಅವರ ನಿಲುವು ತಿಳಿಯಲು ರಾಜ್ಯ ಕಾಂಗ್ರೆಸ್ ಅಧ್ಯಕ್ಷರಿಗೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಹೇಳಿದರು. ರಾಕಿಬುಲ್ ಹುಸೇನ್ ಅವರಂತೆ ಗೋಮಾಂಸ ನಿಷೇಧವನ್ನು ಅವರು ಸಹ ಬೆಂಬಲಿಸುತ್ತಾರೆಯೇ ಎಂದು ಕೇಳಲು ನಾನು ಭೂಪೇನ್ ಬೋರಾ ಅವರಿಗೆ ಪತ್ರ ಬರೆಯುತ್ತೇನೆ ಮತ್ತು ಹಾಗಿದ್ದರೆ ನನಗೆ ತಿಳಿಸಿ. ಗೋಮಾಂಸವನ್ನು ಸಂಪೂರ್ಣವಾಗಿ ನಿಷೇಧಿಸುತ್ತೇನೆ. ಅಸ್ಸಾಂನಲ್ಲಿ ಗೋಮಾಂಸ ಸೇವನೆಯು ಕಾನೂನುಬಾಹಿರವಲ್ಲ, ಆದರೆ ಅಸ್ಸಾಂ ಜಾನುವಾರು ಸಂರಕ್ಷಣಾ ಕಾಯ್ದೆ 2021 ರ ಅಡಿಯಲ್ಲಿ, ಬಹುಪಾಲು ಹಿಂದೂಗಳು, ಜೈನರು ಮತ್ತು ಸಿಖ್ಖರು ಇರುವ ಪ್ರದೇಶಗಳಲ್ಲಿ ಮತ್ತು ಯಾವುದೇ ದೇವಾಲಯ ಅಥವಾ ವೈಷ್ಣವ ಮಠದಿಂದ ಐದು ಕಿಲೋಮೀಟರ್ ವ್ಯಾಪ್ತಿಯೊಳಗೆ ಗೋಹತ್ಯೆ ಮತ್ತು ಗೋಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ ಎಂಬುದು ಗಮನಾರ್ಹ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com