ಮಹಾರಾಷ್ಟ್ರ ಬಿಕ್ಕಟ್ಟು: ರಾಜಿ ಸೂತ್ರ ಒಪ್ಪದಿದ್ದರೆ ಮಹಾಯುತಿ ಸರ್ಕಾರದ ಭಾಗವಾಗುವುದಿಲ್ಲ- ಅಮಿತ್ ಶಾಗೆ ಶಿಂಧೆ

ಮಹಾರಾಷ್ಟ್ರ ನಿಯೋಜಿತ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಬಿಜೆಪಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧರಾಗಿದ್ದರೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರಾಜಿ ಸೂತ್ರವನ್ನು ನೀಡಿದ್ದಾರೆ.
ದೇವೇಂದ್ರ ಫಡ್ನವಿಸ್ - ಅಮಿತ್ ಶಾ - ಏಕನಾಥ್ ಶಿಂಧೆ
ದೇವೇಂದ್ರ ಫಡ್ನವಿಸ್ - ಅಮಿತ್ ಶಾ - ಏಕನಾಥ್ ಶಿಂಧೆ
Updated on

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ 10 ದಿನ ಕಳೆದಿದ್ದು, ಮಹಾಯುತಿ ಭರ್ಜರಿ ಗೆಲುವು ಸಾಧಿಸಿದರು ಕೂಡ ಹೊಸ ಮುಖ್ಯಮಂತ್ರಿ ಆಯ್ಕೆ ಇನ್ನೂ ಕಗ್ಗಂಟಾಗಿಯೇ ಉಳಿದಿದೆ.

ಮಹಾರಾಷ್ಟ್ರ ನಿಯೋಜಿತ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಬಿಜೆಪಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧರಾಗಿದ್ದರೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರಾಜಿ ಸೂತ್ರವನ್ನು ನೀಡಿದ್ದಾರೆ ಮತ್ತು ಈಗಲೂ ಅದಕ್ಕೆ ಅಂಟಿಕೊಂಡಿದ್ದಾರೆ ಎಂದು ಶಿವಸೇನೆ ಮೂಲಗಳು ತಿಳಿಸಿವೆ.

288 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಮಹಾಯುತಿ 230 ಸ್ಥಾನಗಳನ್ನು ಗೆದ್ದ ನಂತರ ಅಧಿಕಾರ ಹಂಚಿಕೆ ಕುರಿತು ಚರ್ಚಿಸಲು ಶಿಂಧೆ, ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್ ಅವರು ಗುರುವಾರ ರಾತ್ರಿ ದೆಹಲಿಯಲ್ಲಿ ಅಮಿ ಶಾ ಅವರನ್ನು ಭೇಟಿ ಮಾಡಿದ್ದರು.

ತಮ್ಮ ನಾಯಕತ್ವದಲ್ಲಿ ವಿಧಾನಸಭಾ ಚುನಾವಣೆ ನಡೆದಿದ್ದರಿಂದ ಮಹಿಳಾ ಮತದಾರರು, ಮರಾಠರು ಮತ್ತು ಒಬಿಸಿಗಳು, ಲಾಡ್ಲಿ ಬಹೆನಾ ಯೋಜನೆ, ಮೀಸಲಾತಿ ನಿರ್ಧಾರ ಮತ್ತು ವಿವಿಧ ಸಮುದಾಯಗಳಿಗೆ ಸ್ಥಾಪಿಸಲಾದ ಸಹಕಾರ ಮಂಡಳಿಗಳಿಂದಾಗಿ ಮಹಾಯುತಿಗೆ ಮತ ಹಾಕಿದ್ದಾರೆ ಎಂದು ಶಿಂಧೆ ಅವರು ಅಮಿತ್ ಶಾ ಅವರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

"ತಾವು ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂಬ ನಿರೀಕ್ಷೆಯೊಂದಿಗೆ ಜನ ಮತ ಹಾಕಿದ್ದಾರೆ ಎಂದು ಶಿಂಧೆ ಅವರು ಅಮಿತ್ ಶಾ ತಿಳಿಸಿದ್ದಾರೆ. ಅಲ್ಲದೆ ಒಂದು ವೇಳೆ ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡದಿದ್ದರೆ, ಸಮಾಜದ ಈ ವರ್ಗಗಳಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಹೇಳಿದ್ದಾರೆ.

ದೇವೇಂದ್ರ ಫಡ್ನವಿಸ್ - ಅಮಿತ್ ಶಾ - ಏಕನಾಥ್ ಶಿಂಧೆ
'ನಾನು ಯಾವಾಗಲೂ ನನ್ನ ಹಳ್ಳಿಗೆ ಬರುತ್ತೇನೆ; ಬಿಜೆಪಿಯಿಂದ ಸಿಎಂ ಆಯ್ಕೆ ಬೆಂಬಲಿಸಿದ ಶಿಂಧೆ

ತಮ್ಮನ್ನೇ ಮುಖ್ಯಮಂತ್ರಿ ಮಾಡಬೇಕು ಎಂದು ಜನ ಬಯಸುತ್ತಿದ್ದಾರೆ. ಈ ಸಂಬಂಧ ನಡೆಸಿದ ಒಂದೆರಡು ಸಮೀಕ್ಷೆಗಳನ್ನು ಅಮಿತ್ ಶಾ ಅವರಿಗೆ ಶಿಂಧೆ ತೋರಿಸಿದರು” ಎಂದು ಹೆಸರು ಹೇಳಲು ಇಚ್ಚಿಸದ ಶಿವಸೇನೆಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

"ಫಡ್ನವಿಸ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿದರೆ ರಾಜ್ಯದಲ್ಲಿ ಅಧಿಕಾರವನ್ನು ಸಮತೋಲನಗೊಳಿಸಲು ಶಿಂಧೆ ಅವರು ಮೂರು ಪ್ರಮುಖ ಖಾತೆಗಳಾದ ಗೃಹ, ಹಣಕಾಸು ಮತ್ತು ಕಂದಾಯ ಖಾತೆಗಳನ್ನು ತಮಗೆ ನೀಡಬೇಕು ಮತ್ತು ತಾವು ಹೇಳಿದವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ಶಿವಸೇನೆ ಮೂಲಗಳು ತಿಳಿಸಿವೆ.

ಈ ಮೂರು ಪ್ರಮುಖ ಖಾತೆಗಳನ್ನು ಶಿವಸೇನೆಗೆ ನೀಡಲು ಸಾಧ್ಯವಾಗದಿದ್ದರೆ, ತಮ್ಮ ಪಕ್ಷವು ಸರ್ಕಾರದ ಭಾಗವಾಗುವುದಿಲ್ಲ. ರಾಜ್ಯದಲ್ಲಿ ಶಿವಸೇನೆಯು ಹೊರಗಿನಿಂದ ಬೆಂಬಲ ನೀಡುತ್ತದೆ ಮತ್ತು ಪಕ್ಷದ ಏಳು ಲೋಕಸಭಾ ಸಂಸದರು ಹಿಂದುತ್ವದ ಕಾರಣಕ್ಕಾಗಿ ನರೇಂದ್ರ ಮೋದಿ ಸರ್ಕಾರವನ್ನು ಹೊರಗಿನಿಂದ ಬೆಂಬಲಿಸುತ್ತಾರೆ" ಎಂದು ಶಿಂಧೆ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com