ವಿಜಯವಾಡ: ತೆಲಂಗಾಣ ರಾಜ್ಯದ ಮುಲುಗು ಎಂಬಲ್ಲಿ ಇಂದು ಬುಧವಾರ ಬೆಳಗ್ಗೆ ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಇಂದು ಬೆಳಗ್ಗೆ 7.27ಕ್ಕೆ ಭೂಕಂಪ ಸಂಭವಿಸಿದೆ.
ತೆಲಂಗಾಣ ಮತ್ತು ಆಂಧ್ರಪ್ರದೇಶದ ಹಲವು ಸ್ಥಳಗಳಲ್ಲಿ ಕಂಪನಗಳ ವರದಿಯಾಗಿವೆ. ಯಾವುದೇ ಪ್ರಾಣಹಾನಿ ಅಥವಾ ಹೆಚ್ಚಿನ ಹಾನಿಯ ಬಗ್ಗೆ ಇದುವರೆಗೆ ವರದಿಯಾಗಿಲ್ಲ.
ಅಧಿಕಾರಿಗಳು ಪರಿಸ್ಥಿತಿ ನಿಗಾವಹಿಸುತ್ತಿದ್ದಾರೆ, ಜನರು ಜಾಗೃತರಾಗಿರಲು ಮತ್ತು ಭೂಕಂಪಗಳ ಸಮಯದಲ್ಲಿ ಕಿಕ್ಕಿರಿದ ಜನಸಂದಣಿ ಅಥವಾ ಅಸುರಕ್ಷಿತ ಪರಿಸ್ಥಿತಿಗಳನ್ನು ತಪ್ಪಿಸಲು ನಿವಾಸಿಗಳಿಗೆ ತಜ್ಞರು ಸಲಹೆ ನೀಡಿದ್ದಾರೆ.
Advertisement