ಪೊಲೀಸ್ ಮಾಹಿತಿದಾರರೆಂಬ ಶಂಕೆ: ಅಂಗನವಾಡಿ ಸಹಾಯಕಿಯನ್ನು ಕೊಂದ ನಕ್ಸಲೀಯರು

ಲಕ್ಷ್ಮೀ ಪದಂ (45) ಎಂಬುವರ ಮನೆಗೆ ನುಗ್ಗಿದ ಅಪರಿಚಿತ ನಕ್ಸಲೀಯರು ಮನೆಯವರ ಎದುರೇ ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ. ಬಳಿಕ ಶವವನ್ನು ಮನೆಯ ಅಂಗಳದಲ್ಲಿ ಎಸೆದು ಪರಾರಿಯಾಗಿದ್ದಾರೆ.
Casual Images
ನಕ್ಸಲೀಯರ ಸಾಂದರ್ಭಿಕ ಚಿತ್ರ
Updated on

ಬಿಜಾಪುರ: ಪೊಲೀಸ್ ಮಾಹಿತಿದಾರರೆಂಬ ಶಂಕೆಯ ಮೇಲೆ ಮಹಿಳಾ ಅಂಗನವಾಡಿ ಸಹಾಯಕಿಯನ್ನು ನಕ್ಸಲೀಯರು ಹತ್ಯೆಗೈದಿರುವ ಘಟನೆ ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ. ಬಸಗೂಡ ಪೊಲೀಸ್ ಠಾಣಾ ವ್ಯಾಪ್ತಿಯ ತಿಮ್ಮಾಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗ್ರಾಮದ ಲಕ್ಷ್ಮೀ ಪದಂ (45) ಎಂಬುವರ ಮನೆಗೆ ನುಗ್ಗಿದ ಅಪರಿಚಿತ ನಕ್ಸಲೀಯರು ಮನೆಯವರ ಎದುರೇ ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ. ಬಳಿಕ ಶವವನ್ನು ಮನೆಯ ಅಂಗಳದಲ್ಲಿ ಎಸೆದು ಪರಾರಿಯಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ನಂತರ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.

ಸ್ಥಳದಲ್ಲಿ ಮಾವೋವಾದಿಗಳ ಮದ್ದೇಡ್ ಪ್ರದೇಶ ಸಮಿತಿಯ ಕರಪತ್ರ ಪತ್ತೆಯಾಗಿದ್ದು, ಅದರಲ್ಲಿ ಪೊಲೀಸ್ ಮಾಹಿತಿದಾರರಂತೆ ಮಹಿಳೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

Casual Images
ಛತ್ತೀಸ್ ಗಢ: ನಾಲ್ವರು ನಕ್ಸಲೀಯರ ಬಂಧನ, ಸ್ಫೋಟಕಗಳ ವಶ

ದಾಳಿಕೋರರನ್ನು ಪತ್ತೆಹಚ್ಚಲು ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಈ ಘಟನೆಯೊಂದಿಗೆ, ಬಿಜಾಪುರ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತಾರ್ ವಿಭಾಗದ ವಿವಿಧ ಕಡೆಗಳಲ್ಲಿ ಈ ವರ್ಷ ಇದುವರೆಗೆ 60 ಕ್ಕೂ ಹೆಚ್ಚು ಜನರನ್ನು ನಕ್ಸಲೀಯರು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com