ಛತ್ತೀಸ್ ಗಢ: ನಾಲ್ವರು ನಕ್ಸಲೀಯರ ಬಂಧನ, ಸ್ಫೋಟಕಗಳ ವಶ

ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ಪೊಲೀಸರ ತಂಡ ನಾಲ್ವರು ನಕ್ಸಲೀಯರನ್ನು ಬಂಧಿಸಿದ್ದು, ಅವರಿಂದ ಟಿಫಿನ್ ಬಾಂಬ್, ಕಾರ್ಡೆಕ್ಸ್ ವೈರ್, ಸ್ವಿಚ್ ಮತ್ತು ಉತ್ಖನನ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
Casual Images
ಸಾಂದರ್ಭಿಕ ಚಿತ್ರ
Updated on

ಬಿಜಾಪುರ: ಛತ್ತೀಸ್ ಗಢದ ಬಿಜಾಪುರ ಜಿಲ್ಲೆಯಲ್ಲಿ ಬುಧವಾರ ನಾಲ್ವರು ನಕ್ಸಲೀಯರನ್ನು ಬಂಧಿಸಿರುವ ಪೊಲೀಸರು, ಅವರಿಂದ ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದಾರೆ.

ಭೈರಾಮ್ ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ವೊಂದರ ಬಳಿ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ಪೊಲೀಸರ ತಂಡ ನಾಲ್ವರು ನಕ್ಸಲೀಯರನ್ನು ಬಂಧಿಸಿದ್ದು, ಅವರಿಂದ ಟಿಫಿನ್ ಬಾಂಬ್, ಕಾರ್ಡೆಕ್ಸ್ ವೈರ್, ಸ್ವಿಚ್ ಮತ್ತು ಉತ್ಖನನ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

Casual Images
ಛತ್ತೀಸ್‌ಗಢ: ಸುಕ್ಮಾದಲ್ಲಿ ಐಇಡಿ ಸ್ಫೋಟ, ಪೊಲೀಸ್ ಕಾನ್ಸ್ ಟೇಬಲ್ ಗೆ ಗಾಯ

ಬಂಧಿತ ನಕ್ಸಲೀಯರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಜೈಲಿಗೆ ಕಳುಹಿಸಲಾಯಿತು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com