
ಮುಂಬೈ: ಹಣದುಬ್ಬರದಿಂದ ಜನ ತತ್ತರಿಸುತ್ತಿರುವಾಗ ಮತ್ತು ರೈತರು ಪ್ರತಿಭಟನೆ ನಡೆಸುತ್ತಿರುವಾಗ ಅಭಿವೃದ್ಧಿಯ ಬದಲು 'ಮಸೀದಿಗಳ ಸಮೀಕ್ಷೆ' ರಾಜಕೀಯದ ಕೇಂದ್ರಬಿಂದುವಾಗುತ್ತಿರುವುದು ತಪ್ಪು ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು ಶನಿವಾರ ಹೇಳಿದ್ದಾರೆ.
ಸಂಭವನೀಯ ಕೋಮು ಗಲಭೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ ವಾದ್ರಾ, ಮಸೀದಿಗಳ ಸಮೀಕ್ಷೆ ನಡೆಸುವುದು ತಪ್ಪು ಎಂದು ಹೇಳಿದರು.
ಭಾರತ ವೈವಿಧ್ಯಮಯ, ಜಾತ್ಯತೀತ ರಾಷ್ಟ್ರವಾಗಿರುವುದರಿಂದ ಧರ್ಮ ಮತ್ತು ರಾಜಕೀಯವನ್ನು ಪ್ರತ್ಯೇಕವಾಗಿ ಇಡಬೇಕು ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.
ವಾದ್ರಾ ಅವರು ತಮ್ಮ ಆಧ್ಯಾತ್ಮಿಕ ಪ್ರವಾಸದ ಭಾಗವಾಗಿ ದೇಶದ ವಿವಿಧ ಪೂಜಾ ಸ್ಥಳಗಳಿಗೆ ಭೇಟಿ ನೀಡುತ್ತಾರೆ ಮತ್ತು ಶನಿವಾರ ಮುಂಬೈನ ಪ್ರಸಿದ್ಧ ಹಾಜಿ ಅಲಿ ದರ್ಗಾಗೆ ಭೇಟಿ ನೀಡಿ ಚಾದರ್ ಅರ್ಪಿಸಿದರು.
ನನ್ನ ಕುಟುಂಬ ಮತ್ತು ದೇಶದ ಒಳಿತಿಗಾಗಿ ನಾನು ಪ್ರಾರ್ಥಿಸಿದೆ. ಸಮಾಜದಲ್ಲಿ ಸಹೋದರತ್ವ ನೆಲೆಸಲಿ ಎಂದು ನಾನು ಬಯಸುತ್ತೇನೆ ಎಂದು ಅವರು ಹೇಳಿದರು.
ಮಸೀದಿಗಳ ಸಮೀಕ್ಷೆ ತಪ್ಪು ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರ ಪತಿ ವಾದ್ರಾ ಹೇಳಿದ್ದಾರೆ.
ಮೊಘಲರ ಕಾಲದ ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ನ್ಯಾಯಾಲಯದ ಆದೇಶಿಸಿದ ನಂತರ ನವೆಂಬರ್ 24 ರಂದು ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಭಾರಿ ಹಿಂಸಾಚಾರ ಸಂಭವಿಸಿತ್ತು.
Advertisement