INDI ಮೈತ್ರಿಕೂಟದಲ್ಲಿ ನಾಯಕತ್ವ ಬಿಕ್ಕಟ್ಟು: ಅಚ್ಚರಿ ಮೂಡಿಸಿದ ಲಾಲು ಪ್ರಸಾದ್ ನಡೆ...

ಇದಕ್ಕೂ ಮೊದಲು ಇಂಡಿ ಮೈತ್ರಿಕೂಟದ ನಾಯಕತ್ವ ವಹಿಸಿಕೊಳ್ಳಲು ಶರದ್ ಪವಾರ್, ಅಖಿಲೇಶ್ ಯಾದವ್ ಮಮತಾ ಬ್ಯಾನರ್ಜಿಯನ್ನು ಬೆಂಬಲಿಸಿದ್ದರು.
Lalu prasad yadav
ಲಾಲು ಪ್ರಸಾದ್ ಯಾದವ್online desk
Updated on

ಪಾಟ್ನ: ಸಂಸತ್ ನ ಚಳಿಗಾಲದ ಅಧಿವೇಶನದಲ್ಲಿ ಅದಾನಿ ವಿಷಯವನ್ನೇ ಪ್ರಮುಖ ವಿಷಯವನ್ನಾಗಿ ಮಾಡಲು ಯತ್ನಿಸುತ್ತಿರುವ ಕಾಂಗ್ರೆಸ್ ನ ವರ್ತನೆಗೆ INDI ಮೈತ್ರಿಕೂಟದ ಇನ್ನಿತರ ರಾಜಕೀಯ ಪಕ್ಷಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.

ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಬಹಿರಂಗವಾಗಿಯೆ ಕಾಂಗ್ರೆಸ್ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದರೆ, ಇಂಡಿಯಾ ಕೂಟದ ನಾಯಕತ್ವ ಬದಲಾಗಬೇಕು ಎಂಬ ಕೂಗೂ ಕೇಳಿಬರತೊಡಗಿದೆ.

ಈ ನಡುವೆ ಆರ್ ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ INDI ನಾಯಕತ್ವದ ಬಗ್ಗೆ ನೀಡಿರುವ ಹೇಳಿಕೆ ಅಚ್ಚರಿ ಮೂಡಿಸಿದೆ. ಇಂಡಿ ಮೈತ್ರಿಕೂಟ ಮುನ್ನಡೆಸಲು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಉತ್ತಮ ವ್ಯಕ್ತಿ ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.

ಇದಕ್ಕೂ ಮೊದಲು ಇಂಡಿ ಮೈತ್ರಿಕೂಟದ ನಾಯಕತ್ವ ವಹಿಸಿಕೊಳ್ಳಲು ಶರದ್ ಪವಾರ್, ಅಖಿಲೇಶ್ ಯಾದವ್ ಮಮತಾ ಬ್ಯಾನರ್ಜಿಯನ್ನು ಬೆಂಬಲಿಸಿದ್ದರು.

ಮಮತಾ ಬ್ಯಾನರ್ಜಿಗೆ ಇಂಡಿ ಮೈತ್ರಿಕೂಟದ ನಾಯಕತ್ವ ಸಿಗಬೇಕು ಎಂದು ಮಾಧ್ಯಮಗಳಿಗೆ ಪಾಟ್ನಾದಲ್ಲಿ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ. ಲಾಲು ಪ್ರಸಾದ್ ಯಾದವ್ ಅವರ ಈ ಹೇಳಿಕೆ ರಾಹುಲ್ ಗಾಂಧಿಗೆ ಹಿನ್ನೆಡೆ ಎಂದು ವಿಶ್ಲೇಷಿಸಲಾಗುತ್ತಿದೆ.

Lalu prasad yadav
ಅವಕಾಶ ಸಿಕ್ಕರೆ INDIA ಬಣ ಮುನ್ನಡೆಸಲು ಸಿದ್ಧ: ಮಮತಾ ಬ್ಯಾನರ್ಜಿ

ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್ ಮಾತನಾಡಿದ್ದು, "ರಾಹುಲ್ ಗಾಂಧಿ ಅವರ ನಾಯಕತ್ವವನ್ನು ಯಾರೂ ಪ್ರಶ್ನಿಸುತ್ತಿಲ್ಲ, ಅವರು ನಮ್ಮೆಲ್ಲರ ನಾಯಕರಾಗಿದ್ದಾರೆ. ನಮ್ಮ ಕೆಲವು ಮಿತ್ರಪಕ್ಷಗಳಾದ ಟಿಎಂಸಿ, ಲಾಲೂ, ಅಖಿಲೇಶ್ ಇಂಡಿ ಮೈತ್ರಿ ಬಗ್ಗೆ ವಿಭಿನ್ನ ಅಭಿಪ್ರಾಯವನ್ನು ಹೊಂದಿದ್ದರೆ, ಹೊಸದನ್ನು ಹೇಳಲು ಬಯಸಿದರೆ ಮತ್ತು ಇಂಡಿ ಮೈತ್ರಿಯನ್ನು ಬಲಪಡಿಸಲು ಬಯಸಿದರೆ ಅದನ್ನು ಪರಿಗಣಿಸಬೇಕು ಮತ್ತು ಕಾಂಗ್ರೆಸ್ ಚರ್ಚೆಗೆ ಸೇರಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com