Gujarat: ಪೋಷನ್ ಅಭಿಯಾನಕ್ಕೆ ಕೇಂದ್ರ 2,879 ಕೋಟಿ ರೂ ಮಂಜೂರು, ಆದರೂ ಅಪೌಷ್ಟಿಕತೆ ಹೆಚ್ಚಳ!

ಕೇಂದ್ರ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಪೋಷನ್ ಅಭಿಯಾನದ ಅಡಿಯಲ್ಲಿ ಗುಜರಾತ್ ಗೆ 2,879.3 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಆದರೂ ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ಆರೋಗ್ಯ ಸವಾಲುಗಳು ಮುಂದುವರಿದಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಅಹಮದಾಬಾದ್: ‘ಅಭಿವೃದ್ಧಿ ಹೊಂದಿದ ರಾಜ್ಯ’ ಎಂದೇ ಪರಿಗಣಿಸಲ್ಪಟ್ಟಿರುವ ಗುಜರಾತ್‌ನಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಪೋಷನ್ ಅಭಿಯಾನದ ಅಡಿಯಲ್ಲಿ 2,879.3 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಆದರೂ ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ಆರೋಗ್ಯ ಸವಾಲುಗಳು ಮುಂದುವರಿದಿವೆ.

ಇಂದು ರಾಜ್ಯಸಭೆಯಲ್ಲಿ ಪ್ರಸ್ತುತಪಡಿಸಿದ ಸರ್ಕಾರಿ ಅಂಕಿಅಂಶಗಳ ಪ್ರಕಾರ, ಅಕ್ಟೋಬರ್ 2024 ರ ವರೆಗೆ 0-5 ವರ್ಷ ವಯಸ್ಸಿನ ಶೇ. 40.8 ರಷ್ಟು ಮಕ್ಕಳ ಬೆಳವಣಿಗೆ ಕುಂಠಿತ, ಶೇ. 7.8 ರಷ್ಟು ಕೃಶ ಮತ್ತು ಶೇ. 21 ರಷ್ಟು ಕಡಿಮೆ ತೂಕ ಹೊಂದಿದ್ದಾರೆ ಎಂದು ತಿಳಿಸುತ್ತದೆ.

ಹೆಚ್ಚುವರಿಯಾಗಿ, 15 ರಿಂದ 49 ವರ್ಷ ವಯಸ್ಸಿನ ಶೇ. 65 ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಬುಧವಾರ ರಾಜ್ಯಸಭೆಯಲ್ಲಿ ಪೋಶನ್ ಅಭಿಯಾನ್-ರಾಷ್ಟ್ರೀಯ ಪೋಷಣೆ ಮಿಷನ್(ಎನ್‌ಎನ್‌ಎಂ) ಅಡಿಯಲ್ಲಿ ಮಹತ್ವದ ಹಣಕಾಸಿನ ವಿವರಗಳನ್ನು ಸಹ ಬಹಿರಂಗಪಡಿಸಿದೆ.

ಸಾಂದರ್ಭಿಕ ಚಿತ್ರ
Gujarat: 5 ವರ್ಷದೊಳಗಿನ ಶೇ.40ರಷ್ಟು ಮಕ್ಕಳಲ್ಲಿ ಅಪೌಷ್ಟಿಕತೆ, ಕಡಿಮೆ ತೂಕ- Niti Aayog ಕಳವಳ

ಸಂಸದ ಡಾ.ವಿ.ಶಿವದಾಸನ್ ಅವರ ಪ್ರಶ್ನೆಗೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಕೇಂದ್ರ ಸರ್ಕಾರವು ಗುಜರಾತ್‌ಗೆ 2021-22 ರಲ್ಲಿ 839.86 ಕೋಟಿ ರೂ., 2022-23 ರಲ್ಲಿ 912.64 ಕೋಟಿ ರೂ., ಮತ್ತು 2023-24 ರಲ್ಲಿ ಮಿಷನ್ 2 ರ ಅಡಿಯಲ್ಲಿ 1,126.8 ಕೋಟಿ ರೂ. ಅಪೌಷ್ಟಿಕತೆಯನ್ನು ಪರಿಹರಿಸಲು ನೀಡಿದೆ ಎಂದು ತಿಳಿಸಿದೆ.

ಈ ಅಂಕಿಅಂಶವು ಕಳೆದ ಮೂರು ವರ್ಷಗಳಲ್ಲಿ ಹಣ ಹಂಚಿಕೆಯಲ್ಲಿ ಸ್ಥಿರವಾದ ಹೆಚ್ಚಳವನ್ನು ಎತ್ತಿ ತೋರಿಸುತ್ತದೆ ಮತ್ತು ಇದು ರಾಷ್ಟ್ರವ್ಯಾಪಿ ಪೌಷ್ಟಿಕಾಂಶದ ಸವಾಲುಗಳನ್ನು ನಿಭಾಯಿಸಲು ಸರ್ಕಾರದ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ.

ಆದಾಗ್ಯೂ, ಗುಜರಾತ್‌ನಲ್ಲಿ ಕಳೆದ ಮೂರು ವರ್ಷಗಳಲ್ಲಿ "ಪೋಷನ್ ಅಭಿಯಾನ್-ಎನ್‌ಎನ್‌ಎಂ" ಯೋಜನೆಯಡಿ ಫಲಾನುಭವಿಗಳ ಸಂಖ್ಯೆ ಕುಸಿತವಾಗಿರುವುದು ಸರ್ಕಾರದ ಅಂಕಿಅಂಶಗಳು ಬಹಿರಂಗಪಡಿಸುತ್ತವೆ.

2021-22 ರಲ್ಲಿ, ಕಾರ್ಯಕ್ರಮ 42,87,408 ಫಲಾನುಭವಿಗಳನ್ನು ತಲುಪಿದ್ದು, 2022-23 ರಲ್ಲಿ 40,47,017 ಕ್ಕೆ ಇಳಿದಿದೆ ಮತ್ತು ಮಾರ್ಚ್ 2024 ರ ವೇಳೆಗೆ ಗುಜರಾತ್‌ನಲ್ಲಿ 37,82,803 ಕ್ಕೆ ಇಳಿದಿದೆ.

ಅಪೌಷ್ಟಿಕತೆಯನ್ನು ಎದುರಿಸಲು ಗಮನಾರ್ಹವಾದ ಸರ್ಕಾರಿ ವೆಚ್ಚದ ಹೊರತಾಗಿಯೂ, ಗುಜರಾತ್‌ನಲ್ಲಿ ಯಾವುದೇ ಸುಧಾರಣೆ ಕಾಣುತ್ತಿಲ್ಲ ಎಂಬುದು ಸ್ಪಷ್ಟವಾಗಿ ಎತ್ತಿ ತೋರಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com