ಮಾಸ್ಕೋ: ಪುಟಿನ್ ಭೇಟಿ ಮಾಡಿದ ರಾಜನಾಥ್ ಸಿಂಗ್, ಭಾರತ-ರಷ್ಯಾ ಸಂಬಂಧ ಗುಣಗಾನ

ಉಭಯ ದೇಶಗಳ ನಡುವಿನ ಬಾಂಧವ್ಯ ಗಟ್ಟಿಯಾಗಿದ್ದು, ಸಹಭಾಗಿತ್ವದ ಪ್ರಯತ್ನಗಳು ಗಮನಾರ್ಹ ಫಲಿತಾಂಶಗಳಿಗೆ ದಾರಿ ಮಾಡಿಕೊಡುತ್ತವೆ ಎಂದು ಉಭಯ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Defence Minister Rajnath Singh meets Russian President Mr Vladimir Putin
ವ್ಲಾಡಿಮಿರ್ ಪುಟಿನ್ ಭೇಟಿಯಾದ ರಾಜನಾಥ್ ಸಿಂಗ್
Updated on

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರನ್ನು ಮಾಸ್ಕೋದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಈ ವೇಳೆ ರಷ್ಯಾದೊಂದಿಗೆ ಭಾರತದ ಬಾಂಧವ್ಯ ಅತ್ಯಂತ ಎತ್ತರದ ಪರ್ವತಕ್ಕಿಂತಲೂ ಎತ್ತರವಾಗಿದೆ ಮತ್ತು ಸಾಗರದ ಅತ್ಯಂತ ಆಳವಾಗಿರುವ ಪ್ರದೇಶಕ್ಕಿಂತಲೂ ಆಳವಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಸಭೆಯಲ್ಲಿ ಉಭಯ ದೇಶಗಳ ನಡುವಿನ ಬಾಂಧವ್ಯ ಗಟ್ಟಿಯಾಗಿದ್ದು, ಸಹಭಾಗಿತ್ವದ ಪ್ರಯತ್ನಗಳು ಗಮನಾರ್ಹ ಫಲಿತಾಂಶಗಳಿಗೆ ದಾರಿ ಮಾಡಿಕೊಡುತ್ತವೆ ಎಂದು ಉಭಯ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎರಡು ದೇಶಗಳ ನಡುವಿನ ಸ್ನೇಹವು ಅತ್ಯಂತ ಎತ್ತರದ ಪರ್ವತಕ್ಕಿಂತ ಎತ್ತರವಾಗಿದೆ ಮತ್ತು ಆಳವಾದ ಸಾಗರಕ್ಕಿಂತ ಆಳವಾಗಿದೆ' ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಭಾರತ ಯಾವಾಗಲೂ ರಷ್ಯಾದ ಪರವಾಗಿ ನಿಂತಿದೆ ಮತ್ತು ಭವಿಷ್ಯದಲ್ಲಿಯೂ ಈ ನೀತಿಯನ್ನು ಮುಂದುವರೆಸುತ್ತದೆ ಎಂದು ಸಿಂಗ್ ಪುಟಿನ್ ಅವರಿಗೆ ತಿಳಿಸಿದ್ದಾರೆ.

ವಾಡ್ಲಿಮಿರ್ ಪುಟಿನ್ ಭೇಟಿಗೂ ಮುನ್ನಾ ರಾಜನಾಥ್ ಸಿಂಗ್ ಅವರು ಮಿಲಿಟರಿ ಸಹಕಾರಕ್ಕೆ ಸಂಬಂಧಿಸಿದ ಭಾರತ- ರಷ್ಯಾ ಅಂತರ- ಸರ್ಕಾರಿ ಆಯೋಗದ 21ನೇ ಅಧಿವೇಶನದಲ್ಲಿ ರಷ್ಯಾದ ರಕ್ಷಣಾ ಸಚಿವ ಆಂಡ್ರೆ ಬೆಲೊಸೊವ್ ಅವರೊಂದಿಗೆ ಪಾಲ್ಗೊಂಡರು.

Defence Minister Rajnath Singh meets Russian President Mr Vladimir Putin
ಉಕ್ರೇನ್ ಯುದ್ಧದಲ್ಲಿ ಸಿಲುಕಿದ್ದ ಯುವಕ ಭಾರತಕ್ಕೆ ಸುರಕ್ಷಿತ ವಾಪಸ್: ರಷ್ಯಾ ಸೇನೆಯಲ್ಲಿ ಇನ್ನೂ 25 ಭಾರತೀಯರು ಲಾಕ್!

ಬೆಲೊಸೊವ್ ಅವರೊಂದಿಗಿನ ಸಭೆಯಲ್ಲಿ ಭಾರತಕ್ಕೆ 'ಎಸ್ 400 ಟ್ರಯಂಫ್' ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಇನ್ನುಳಿದ ಎರಡು ಘಟಕಗಳ ಪೂರೈಕೆಯನ್ನು ತ್ವರಿತಗೊಳಿಸುವಂತೆ ರಾಜನಾಥ್ ಸಿಂಗ್ ಒತ್ತಾಯಿಸಿದ್ದಾರೆ ಎಂದು ರಕ್ಷಣಾ ಪ್ರಕಟಣೆ ತಿಳಿಸಿದೆ.

ಈ ಸಭೆಗೂ ಮುನ್ನ ರಾಜನಾಥ್ ಅವರು ಮಾಸ್ಕೋದಲ್ಲಿ ಎರಡನೇ ಮಹಾಯುದ್ಧದಲ್ಲಿ ಮಡಿದ ಸೋವಿಯತ್ ಸೈನಿಕರಿಗೆ ಗೌರವ ಸಲ್ಲಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com