ನಮ್ಮ ಏಕತೆಗೆ ಸಂವಿಧಾನವೇ ಆಧಾರ: ಲೋಕಸಭೆಯಲ್ಲಿ ಪ್ರಧಾನಿ ಮೋದಿ

ಭಾರತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಮಾತ್ರವಲ್ಲ, ಪ್ರಜಾಪ್ರಭುತ್ವದ ತಾಯಿ. 2047 ರ ವೇಳೆಗೆ ದೇಶ ಅಭಿವೃದ್ಧಿ ಹೊಂದಿದ ದೇಶವಾಗಲು ಸಂಕಲ್ಪ ಮಾಡಲಾಗಿದೆ.
PM Modi
ಪ್ರಧಾನಿ ಮೋದಿ
Updated on

ನವದೆಹಲಿ: ದೇಶದ ಪ್ರಾಚೀನ ಪ್ರಜಾಪ್ರಭುತ್ವದ ಬೇರುಗಳು ಬಹಳ ಹಿಂದಿನಿಂದಲೂ ಜಗತ್ತಿಗೆ ಸ್ಫೂರ್ತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಪ್ರತಿಪಾದಿಸಿದ್ದಾರೆ.

ಸಂವಿಧಾನ ಅಂಗೀಕಾರಗೊಂಡು 75 ವರ್ಷ ಕಳೆದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ನಡೆದ ಎರಡು ದಿನಗಳ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, 1949 ರಲ್ಲಿ ಸಂವಿಧಾನವನ್ನು ಅಂಗೀಕರಿಸಿದ ನಂತರ ಭಾರತದ ಪ್ರಯಾಣವನ್ನು 'ಅಸಾಧಾರಣ ಎಂದು ಬಣ್ಣಿಸಿದರು.

ಭಾರತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಮಾತ್ರವಲ್ಲ, ಪ್ರಜಾಪ್ರಭುತ್ವದ ತಾಯಿ. 2047 ರ ವೇಳೆಗೆ ದೇಶ ಅಭಿವೃದ್ಧಿ ಹೊಂದಿದ ದೇಶವಾಗಲು ಸಂಕಲ್ಪ ಮಾಡಲಾಗಿದೆ. ಈ ಗುರಿಯನ್ನು ಸಾಧಿಸಲು ಅದರ ಏಕತೆ ಅತಿದೊಡ್ಡ ಅವಶ್ಯಕತೆಯಾಗಿದೆ. ಸಂವಿಧಾನವೇ ನಮ್ಮ ಏಕತೆಗೆ ಆಧಾರವಾಗಿದೆ ಎಂದರು.

ಸ್ವಾತಂತ್ರ್ಯದ ನಂತರ ಭಾರತವು ತನ್ನ ಪ್ರಜಾಸತ್ತಾತ್ಮಕ ಭವಿಷ್ಯದ ಬಗ್ಗೆ ಎಲ್ಲ ಆತಂಕಗಳನ್ನು ಬದಿಗಿರಿಸಿದ್ದು, ಸಂವಿಧಾನವು ಇಂದು ದೇಶವನ್ನು ಈ ಹಂತಕ್ಕೆ ತಂದಿದೆ ಎಂದು ಹೇಳಿದ ಮೋದಿ, ಸಂವಿಧಾನ ರಚಿಸಿದವರ ಸ್ಪೂರ್ತಿಗೆ ತಕ್ಕಂತೆ ಬದುಕುತ್ತಿರುವುದಕ್ಕೆ ಸಂವಿಧಾನ ರಚನಾಕಾರರು ಮತ್ತು ದೇಶದ ಪ್ರಜೆಗಳಿಗೆ ಗೌರವ ಸಲ್ಲಿಸಿದರು.

ಪುರುಷೋತ್ತಮ ದಾಸ್ ಟಂಡನ್ ಮತ್ತು ಭೀಮ್ ರಾವ್ ಅಂಬೇಡ್ಕರ್ ಅವರಂತಹ ಗಣ್ಯ ವ್ಯಕ್ತಿಗಳ ಹೇಳಿಕೆಗಳನ್ನು ಉಲ್ಲೇಖಿಸಿದ ಮೋದಿ, ಸಂವಿಧಾನ ರಚನೆಯಲ್ಲಿ ತೊಡಗಿದ್ದವರಿಗೆ ಭಾರತವು 1947 ರಲ್ಲಿ ಹುಟ್ಟಿಲ್ಲ ಅಥವಾ 1950 ರಲ್ಲಿ ಪ್ರಜಾಪ್ರಭುತ್ವಕ್ಕೆ ತಿರುಗಿಲ್ಲ ಎಂದು ಚೆನ್ನಾಗಿ ತಿಳಿದಿತ್ತು ಎಂದರು.

PM Modi
Rahul Gandhi: ಮಹಾಭಾರತದಲ್ಲೂ ಜಾತಿ ಪದ್ಧತಿ ಇತ್ತು; ದ್ರೋಣ ಏಕಲವ್ಯನ ಬೆರಳು ಕತ್ತರಿಸಿದಂತೆಯೇ ಮೋದಿ ಸರ್ಕಾರ ಯುವಕರ ಬೆರಳು ಕತ್ತರಿಸುತ್ತಿದೆ!

ಸಂವಿಧಾನವು ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದ್ದು, ದೇಶ ಈಗ ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ನೋಡುತ್ತಿದೆ ಎಂದು ಪ್ರಧಾನಿ ಮೋದಿ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಕಾನೂನನ್ನು ಸರ್ವಾನುಮತದಿಂದ ಅಂಗೀಕರಿಸಿದ್ದಕ್ಕಾಗಿ ಸಂಸದರನ್ನು ಶ್ಲಾಘಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com