ಸಂಭಾಲ್ ಹಿಂಸಾಚಾರ ಬೆನ್ನಲೇ 46 ವರ್ಷಗಳಿಂದ ಮುಚ್ಚಲಾಗಿದ್ದ ಶಿವ ದೇವಸ್ಥಾನ ಪುನಾರಂಭ, ವಿಡಿಯೋ ನೋಡಿ!

ವಿದ್ಯುತ್ ಕಳ್ಳತನ ಹಿಡಿಯಲು ಆಡಳಿತ ತಂಡ ಸ್ಥಳಕ್ಕೆ ತೆರಳಿದ್ದು, ಈ ವೇಳೆ ದೇವಸ್ಥಾನ ಪತ್ತೆಯಾಗಿದೆ. ಪ್ರಸ್ತುತ ದೇವಾಲಯವು ತನ್ನ ಹಳೆಯ ರೂಪದಲ್ಲಿ ಗೋಚರಿಸುತ್ತಿದ್ದು ಮತ್ತೆ ಪೂಜೆ ಪ್ರಾರಂಭವಾಗಿದೆ.
ಶಿವ ದೇವಸ್ಥಾನ
ಶಿವ ದೇವಸ್ಥಾನTNIE
Updated on

ಸಂಭಾಲ್(ಉತ್ತರಪ್ರದೇಶ): 46 ವರ್ಷಗಳ ನಂತರ ಸಂಭಾಲ್‌ನಲ್ಲಿದ್ದ ಹಳೆಯ ದೇವಾಲಯದ ಭಾಗಿಲನ್ನು ತೆರೆಯಲಾಗಿದ್ದು ಇಂದು ಬೆಳಿಗ್ಗೆ ಮೊದಲ ಆರತಿ ನಡೆದಿದೆ. ಜಿಲ್ಲಾಡಳಿತ ನಿನ್ನೆ ಸಂಭಾಲ್‌ನಲ್ಲಿ ಹಳೆಯ ದೇವಾಲಯವನ್ನು ಪತ್ತೆ ಮಾಡಿತ್ತು. ಅಕ್ರಮ ಒತ್ತುವರಿ ಮೂಲಕ ದೇವಸ್ಥಾನವನ್ನು ಮರೆಮಾಚುವ ಯತ್ನ ನಡೆದಿದೆ ಎನ್ನಲಾಗಿದೆ.

ವಿದ್ಯುತ್ ಕಳ್ಳತನ ಹಿಡಿಯಲು ಆಡಳಿತ ತಂಡ ಸ್ಥಳಕ್ಕೆ ತೆರಳಿದ್ದು, ಈ ವೇಳೆ ದೇವಸ್ಥಾನ ಪತ್ತೆಯಾಗಿದೆ. ಪ್ರಸ್ತುತ ದೇವಾಲಯವು ತನ್ನ ಹಳೆಯ ರೂಪದಲ್ಲಿ ಗೋಚರಿಸುತ್ತಿದ್ದು ಮತ್ತೆ ಪೂಜೆ ಪ್ರಾರಂಭವಾಗಿದೆ. ಸಂಭಾಲ್‌ನ ಹಳೆಯ ದೇವಾಲಯದಲ್ಲಿ ಬೆಳಗಿನ ಆರತಿಯ ಚಿತ್ರಗಳು ವೈರಲ್ ಆಗಿವೆ. ದೇವಾಲಯದಲ್ಲಿ ಪುರಾತನ ಶಿವಲಿಂಗವಿದ್ದು, ಹಳೆಯ ಹನುಮಾನ್ ವಿಗ್ರಹವಿದೆ. ದೇವಸ್ಥಾನವನ್ನು ಸ್ವಚ್ಛಗೊಳಿಸಿದ ನಂತರ ಸ್ಥಳೀಯ ಜನರು ಇಲ್ಲಿ ಪೂಜೆ ಆರಂಭಿಸಿದ್ದಾರೆ. ಬೆಳಗಿನ ಜಾವ ಆರತಿಯಲ್ಲಿ ಹಲವರು ಹಾಜರಿದ್ದದ್ದು ಕಂಡುಬಂತು.

ನಾವು ಪ್ರದೇಶದಲ್ಲಿ ವಿದ್ಯುತ್ ಕಳ್ಳತನದ ವಿರುದ್ಧ ಅಭಿಯಾನವನ್ನು ನಡೆಸುತ್ತಿದ್ದಾಗ, ಅತಿಕ್ರಮಿಸಲ್ಪಟ್ಟ ದೇವಾಲಯವು ನಮ್ಮ ಕಣ್ಣಿಗೆ ಬಿತ್ತು ಎಂದು ಸಂಭಾಲ್ ಡಿಎಂ ರಾಜೇಂದ್ರ ಪೆನ್ಸಿಯಾ ಹೇಳಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಕಾರ, ಪುರಾತನ ಶಿವ ದೇವಾಲಯದ ಬಳಿ ಬಾವಿಯೂ ಕಂಡುಬಂದಿದೆ. ಜಿಲ್ಲಾಡಳಿತವು ಸ್ಥಳದಿಂದ ರಾಂಪ್ ಮತ್ತು ಅವಶೇಷಗಳನ್ನು ತೆಗೆದ ನಂತರ ಬಾವಿಯ ಕುರುಹುಗಳು ಪತ್ತೆ ಆಯಿತು. ಪುರಾತನ ಕಾಲದ ಬಾವಿಗೆ ಇಳಿಜಾರು ನಿರ್ಮಿಸಲಾಗಿದ್ದು, ಇಳಿಜಾರು ತೆಗೆದ ಬಳಿಕವೇ ಬಾವಿ ಪತ್ತೆಯಾಗಿ ಎಂದರು.

ಶಿವ ದೇವಸ್ಥಾನ
ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ವಾಗ್ದಂಡನೆಗೆ ಆಗ್ರಹ: ರಾಜ್ಯಸಭೆ ವಿಪಕ್ಷಗಳಿಂದ ನೋಟಿಸ್

ಸಂಭಾಲ್ ಮಂದಿರವನ್ನು 1978ರಿಂದ ಮುಚ್ಚಲಾಗಿತ್ತು!

ಸಂಭಾಲ್‌ನಲ್ಲಿ ಪತ್ತೆಯಾಗಿರುವ ಈ ದೇವಾಲಯವನ್ನು 1978ರಿಂದ ಮುಚ್ಚಲಾಗಿದೆ. ನಗರ ಹಿಂದೂ ಸಭಾದ ಪೋಷಕರಾದ ವಿಷ್ಣು ಶರಣ್ ರಸ್ತೋಗಿ ಅವರು 1978ರ ನಂತರ ದೇವಾಲಯವನ್ನು ಪುನಃ ತೆರೆಯಲಾಯಿತು ಎಂದು ಹೇಳಿದ್ದಾರೆ. ಯಾವುದೇ ಅರ್ಚಕರು ಅಲ್ಲಿ ವಾಸಿಸಲು ಸಿದ್ಧರಿಲ್ಲದ ಕಾರಣ ದೇವಾಲಯವನ್ನು ಮುಚ್ಚಲಾಗಿತ್ತು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com