
ಸುಕ್ಮಾ: ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ 13 ನಕ್ಸಲೀಯರನ್ನು ಬಂಧಿಸಲಾಗಿದೆ. ಬಂಧಿತರಿಂದ ಸ್ಪೋಟಕ ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಬಂಧಿತರ ಪೈಕಿ ಆರು ಮಂದಿಯನ್ನು ಸಿಆರ್‌ಪಿಎಫ್ ಮತ್ತು ಸ್ಥಳೀಯ ಪೊಲೀಸರು ಚಿಂತಲ್ನಾರ್‌ನ ಮುರ್ಕಮ್ ಗ್ರಾಮದಿಂದ ಬಂಧಿಸಿದ್ದಾರೆ. ಇವರಲ್ಲಿ ಮದ್ವಿ ಎಂಬಾತ ಭೀಮಾ ಬಹಿಷ್ಕಾರದ ಮಾವೋವಾದಿ ಚಳವಳಿಯ ಆರ್‌ಪಿಸಿ ಪಂಚ ಸಮಿತಿ ಅಧ್ಯಕ್ಷನಾಗಿದ್ದರೆ, ಅಲ್ಟ್ರಾ ಮಡ್ಕಂ ಬಾಜಿ ರಾವ್, ಸ್ಥಳೀಯ ನಕ್ಸಲ್ ಸಂಘಟನೆಯ ಸದಸ್ಯನಾಗಿದ್ದ. ಅವರ ಪತ್ತೆಗೆ ರೂ. 1 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.
ಬಂಧಿತರಿಂದ ಜಿಲೆಟಿನ್ ಕಡ್ಡಿಗಳು, ಡಿಟೋನೇಟರ್‌ಗಳು, ಪೆನ್ಸಿಲ್ ಶೆಲ್‌ಗಳು, ಒಂದು ಟಿಫಿನ್ ಮತ್ತು ಪೈಪ್ ಬಾಂಬ್ ವಶಪಡಿಸಿಕೊಂಡಿದ್ದೇವೆ. ಇತರ ಏಳು ಮಂದಿಯನ್ನು ಶುಕ್ರವಾರ ತಿಮ್ಮಾಪುರಂ ಗ್ರಾಮದ ಬಳಿಯ ಅರಣ್ಯದಲ್ಲಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
Advertisement