
ನವದೆಹಲಿ: ಕಾಂಗ್ರೆಸ್ ಸಂಸದೆ ಪ್ರಿಯಾಂಕ ಗಾಂಧಿ ವಾಧ್ರ ಸಂಸತ್ ಭವನಕ್ಕೆ Palestine ಎಂದು ಬರೆದಿದ್ದ ಬ್ಯಾಗ್ ಹಿಡಿದು ಬಂದಿದ್ದು ಇಂದು ಸದನದ ಕೇಂದ್ರಬಿಂದುವಾಗಿತ್ತು.
ಪ್ರಿಯಾಂಕ ಹಿಡಿದುಬಂದ ಬ್ಯಾಗ್, ಕಲ್ಲಂಗಡಿ, ಈ ಪ್ರದೇಶದಲ್ಲಿ ಪ್ರತಿರೋಧದ ದೀರ್ಘಕಾಲದಿಂದ ಗುರುತಿಸಲ್ಪಟ್ಟ ಮೋಟಿಫ್ ಸೇರಿದಂತೆ ಪ್ಯಾಲೆಸ್ಟೀನಿಯಾದೊಂದಿಗಿನ ಐಕಮತ್ಯವನ್ನು ಸಂಕೇತಿಸುವ ಲಾಂಛನಗಳನ್ನು ಒಳಗೊಂಡಿತ್ತು. ಪ್ರಿಯಾಂಕ ಗಾಂಧಿ ಪ್ಯಾಲೆಸ್ಟೀನಿಯನ್ ನ ದೀರ್ಘಾವಧಿಯ ಪ್ರತಿಪಾದಕರಾಗಿದ್ದಾರೆ ಮತ್ತು ಗಾಜಾದಲ್ಲಿನ ಸಂಘರ್ಷಕ್ಕೆ ತಮ್ಮ ವಿರೋಧವನ್ನು ಬಲವಾಗಿ ವ್ಯಕ್ತಪಡಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರು ಸಂಸತ್ತಿನ ಆವರಣದಲ್ಲಿ ಬ್ಯಾಗ್ ಸುತ್ತುತ್ತಿರುವ ಫೋಟೋವನ್ನು ಕಾಂಗ್ರೆಸ್ ವಕ್ತಾರ ಶಾಮಾ ಮೊಹಮ್ಮದ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಬಿಜೆಪಿ ನಾಯಕ ಸಂಬಿತ್ ಪಾತ್ರ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
"ಗಾಂಧಿ ಕುಟುಂಬ ಯಾವಾಗಲೂ ತುಷ್ಟೀಕರಣದ ಬ್ಯಾಗ್ ನ್ನು ಹೊತ್ತಿದೆ. ಚುನಾವಣೆಯಲ್ಲಿ ಅವರ ಸೋಲಿಗೆ ತುಷ್ಟೀಕರಣದ ಚೀಲವೇ ಕಾರಣ" ಎಂದು ಪತ್ರಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಪ್ಯಾಲೆಸ್ಟೈನ್ ರಾಯಭಾರಿ ಕಚೇರಿಯ ಉಸ್ತುವಾರಿ ಅಬೇದ್ ಎಲ್ರಾಜೆಗ್ ಅಬು ಜಝರ್ ಅವರೊಂದಿಗಿನ ಸಭೆಯ ಸಂದರ್ಭದಲ್ಲಿ ಪ್ರಿಯಾಂಕ ಗಾಂಧಿ ಕಪ್ಪು-ಬಿಳುಪು ಕೆಫಿಯೆಹ್ (ಸಾಂಪ್ರದಾಯಿಕ ಪ್ಯಾಲೆಸ್ಟೀನಿಯಾದ ಸ್ಕಾರ್ಫ್) ಧರಿಸಿದ್ದರು. ಈ ಘಟನೆಯ ಕೆಲವು ದಿನಗಳ ನಂತರ ಪ್ರಿಯಾಂಕ ಗಾಂಧಿ ವಾದ್ರ ಪ್ಯಾಲೆಸ್ತೇನ್ ಬ್ಯಾಗ್ ಧರಿಸಿ ಬಂದಿದ್ದಾರೆ.
ಪ್ಯಾಲೆಸ್ತೇನ್ ಗೆ ಬೆಂಬಲ ವ್ಯಕ್ತಪಡಿಸುತ್ತಿರುವ ಪ್ರಿಯಾಂಕ ವಾದ್ರ, ಆಗಾಗ್ಗೆ ಇಸ್ರೇಲ್‌ನಲ್ಲಿ ನೆತನ್ಯಾಹು ಸರ್ಕಾರವನ್ನು ದೂಷಿಸುತ್ತಿರುತ್ತಾರೆ.
Advertisement