ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡಿ, ರಾಜಕೀಯ ತೊರೆಯಲಿ: ಲಾಲು

ಈ ವಾರದ ಆರಂಭದಲ್ಲಿ ರಾಜ್ಯಸಭೆಯಲ್ಲಿ ಅಮಿತ್ ಶಾ ಅವರ ಭಾಷಣದ ಕುರಿತು ಆಕ್ರೋಶ ಭುಗಿಲೆದ್ದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಹಿರಿಯ ರಾಜಕಾರಣಿ ಲಾಲು, "ಅಮಿತ್ ಶಾಗೆ ಹುಚ್ಚು ಹಿಡಿದಿದೆ ಎಂದಿದ್ದಾರೆ.
Lalu prasad yadav
ಲಾಲು ಪ್ರಸಾದ್ ಯಾದವ್online desk
Updated on

ಪಾಟ್ನಾ: ಬಾಬಾಸಾಹೇಬ್ ಅಂಬೇಡ್ಕರ್ ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು, ಅವರು ರಾಜೀನಾಮೆ ನೀಡಬೇಕು ಮತ್ತು ರಾಜಕೀಯವನ್ನು ತ್ಯಜಿಸಬೇಕು ಎಂದು ಗುರುವಾರ ಒತ್ತಾಯಿಸಿದ್ದಾರೆ.

ಈ ವಾರದ ಆರಂಭದಲ್ಲಿ ರಾಜ್ಯಸಭೆಯಲ್ಲಿ ಅಮಿತ್ ಶಾ ಅವರ ಭಾಷಣದ ಕುರಿತು ಆಕ್ರೋಶ ಭುಗಿಲೆದ್ದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಹಿರಿಯ ರಾಜಕಾರಣಿ ಲಾಲು, "ಅಮಿತ್ ಶಾಗೆ ಹುಚ್ಚು ಹಿಡಿದಿದೆ. ಅವರಿಗೆ ನಮ್ಮ ಪೂಜ್ಯ ಬಾಬಾಸಾಹೇಬರ ಮೇಲೆ ದ್ವೇಷ ಇದೆ. ಅವರ ಹುಚ್ಚುತನವನ್ನು ನಾನು ಬಲವಾಗಿ ಖಂಡಿಸುತ್ತೇನೆ" ಎಂದರು.

"ಖಂಡಿತವಾಗಿಯೂ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸುತ್ತೇನೆ. ಅವರು ರಾಜೀನಾಮೆ ನೀಡಬೇಕು. ಅಷ್ಟೇ ಅಲ್ಲ, ಅವರು ರಾಜಕೀಯವನ್ನು ತ್ಯಜಿಸಬೇಕು" ಎಂದು ಬಿಜೆಪಿಯ ಕಟ್ಟಾ ವಿರೋಧಿಯಾಗಿರುವ ಆರ್‌ಜೆಡಿ ವರಿಷ್ಠರು ಹೇಳಿದ್ದಾರೆ.

Lalu prasad yadav
ಅಮಿತ್ ಶಾ ಭಾಷಣ ತೆಗೆದು ಹಾಕುವಂತೆ 'X' ಗೆ ಬಿಜೆಪಿ ಸರ್ಕಾರ ಸೂಚನೆ

'ಇತ್ತೀಚೆಗೆ ಅಂಬೇಡ್ಕರ್ ಹೆಸರು ಹೇಳುವುದು ಒಂದು ಫ್ಯಾಷನ್ ಆಗಿದ್ದು, ಇದರ ಬದಲು ದೇವರ ಜಪ ಮಾಡಿದರೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತು' ಎಂದು ಅಮಿತ್ ಶಾ ಹೇಳಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com