
ಲಖನೌ: ಉತ್ತರಪ್ರದೇಶದ ಸಂಭಾಲ್‌ನ ಸಮಾಜವಾದಿ ಪಕ್ಷದ ಸಂಸದ ಜಿಯಾ ಉರ್ ರೆಹಮಾನ್ ಬರ್ಕೆ ವಿರುದ್ಧ ವಿದ್ಯುತ್ ಕಳ್ಳತನದ ಆರೋಪವಿದೆ. ಆತನ ವಿರುದ್ಧ ವಿದ್ಯುತ್ ಕಳ್ಳತನ ವಿರೋಧಿ ಸೆಕ್ಷನ್ 135ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಸಂಸದನ ಮನೆಯಲ್ಲಿ ಝೀರೋ ಮೀಟರ್ ರೀಡಿಂಗ್ ನಂತರ ಪೊಲೀಸರು ಮತ್ತು ಆಡಳಿತ ಕ್ರಮ ಕೈಗೊಂಡಿದೆ. ಅಷ್ಟೇ ಅಲ್ಲದೆ ಸಂಸದರ ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ಎಸ್ಪಿ ಸಂಸದರ ವಿರುದ್ಧ ಉತ್ತರಪ್ರದೇಶ ವಿದ್ಯುತ್ ಇಲಾಖೆ ವಿದ್ಯುತ್ ಕಳ್ಳತನ ಪ್ರಕರಣ ದಾಖಲಿಸಿರುವುದು ಗಮನಾರ್ಹ. ಅಷ್ಟೇ ಅಲ್ಲದೆ, ಜಿಯಾ ಉರ್ ರೆಹಮಾನ್ ಕಡೆಯವರು ಇಲಾಖೆಯ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಬೆದರಿಕೆಗೆ ಸಂಬಂಧಿಸಿದಂತೆ ಎಸ್‌ಪಿ ಸಂಸದನ ತಂದೆ ವಿರುದ್ಧವೂ ಪ್ರಕರಣ ದಾಖಲಾಗಿದೆ.
ವಿದ್ಯುತ್ ಕಳ್ಳತನದ ಆರೋಪ ಎದುರಿಸುತ್ತಿರುವ ಸಂಭಾಲ್ ಸಂಸದ ಜಿಯಾ ಉರ್ ರೆಹಮಾನ್ ಬರ್ಕೆ ಅವರ ದೀಪ್ ಸರಾಯ್ ಮನೆಗೆ ಭಾರೀ ಪೊಲೀಸ್ ಪಡೆಯೊಂದಿಗೆ ವಿದ್ಯುತ್ ಇಲಾಖೆ ತಂಡ ತಲುಪಿತ್ತು. ಎಷ್ಟು ಯೂನಿಟ್ ವಿದ್ಯುತ್ ಬಳಕೆಯಾಗಿದೆ ಎಂದು ವಿದ್ಯುತ್ ಇಲಾಖೆ ತಂಡ ಸ್ಮಾರ್ಟ್ ಮೀಟರ್ ಪರಿಶೀಲಿಸಿದಾಗ ಮೀಟರ್ ಟ್ಯಾಂಪರಿಂಗ್ ಮಾಡಿರುವುದು ಬೆಳಕಿಗೆ ಬಂದಿತ್ತು.
ನ್ಯಾಯಾಲಯದ ಆದೇಶದಂತೆ ನವೆಂಬರ್ 24ರಂದು ನಗರದ ಕೋಟ್ ಗಾರ್ವಿ ಪ್ರದೇಶದಲ್ಲಿರುವ ಮೊಘಲರ ಕಾಲದ ಶಾಹಿ ಜಾಮಾ ಮಸೀದಿಯ ಸಮೀಕ್ಷೆ ನಡೆಸಲು ಬಂದ ಅಧಿಕಾರಿಗಳ ವಿರುದ್ಧ ಕಲ್ಲು ತೂರಾಟ ನಡೆಸಿದ್ದು ಈ ವೇಳೆ ನಡೆದ ಐವರು ಸ್ಥಳೀಯರ ಸಾವನ್ನಪ್ಪಿದ್ದರು. ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪ ಸಂಬಂಧ ಪೊಲೀಸರು ಬಾರ್ಕ್ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.
Advertisement