ಕೇರಳ: ಪಾಲಕ್ಕಾಡ್‌ ಶಾಲೆಯಲ್ಲಿ ಕ್ರಿಸ್‌ಮಸ್ ಆಚರಣೆಗೆ ಅಡ್ಡಿ; ಇಬ್ಬರು ವಿಎಚ್‌ಪಿ ಮುಖಂಡರು, ಭಜರಂಗದಳ ಕಾರ್ಯಕರ್ತನ ವಿರುದ್ಧ ಪ್ರಕರಣ

ಕ್ರಿಸ್‌ಮಸ್ ಹಬ್ಬವನ್ನಷ್ಟೇ ಏಕೆ ಆಚರಿಸುತ್ತಿದ್ದಾರೆ ಎಂದು ಪ್ರಶ್ನಿಸಿ ಮೂವರು ಆರೋಪಿಗಳು ನಲ್ಲೇಪಿಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹಾಗೂ ಶಿಕ್ಷಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಶ್ರೀಕೃಷ್ಣ ಜಯಂತಿಯನ್ನೂ ಆಚರಿಸಬೇಕು ಎಂದು ಒತ್ತಾಯಿಸಿದರು.
VHP
ವಿಹೆಚ್ ಪಿonline desk
Updated on

ಪಾಲಕ್ಕಾಡ್: ಪಾಲಕ್ಕಾಡ್‌ನ ನಲ್ಲೆಪಿಲ್ಲಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಕ್ರಿಸ್‌ಮಸ್ ಆಚರಣೆಗೆ ಅಡ್ಡಿಪಡಿಸಲು ಯತ್ನಿಸಿದ ಇಬ್ಬರು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಒಬ್ಬ ಬಜರಂಗದಳ ಕಾರ್ಯಕರ್ತರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕ್ರಿಸ್‌ಮಸ್ ಹಬ್ಬವನ್ನಷ್ಟೇ ಏಕೆ ಆಚರಿಸುತ್ತಿದ್ದಾರೆ ಎಂದು ಪ್ರಶ್ನಿಸಿ ಮೂವರು ಆರೋಪಿಗಳು ನಲ್ಲೇಪಿಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹಾಗೂ ಶಿಕ್ಷಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಶ್ರೀಕೃಷ್ಣ ಜಯಂತಿಯನ್ನೂ ಆಚರಿಸಬೇಕು ಎಂದು ಒತ್ತಾಯಿಸಿದರು. ಮೂವರು ಆರೋಪಿಗಳನ್ನು ನಲ್ಲೆಪಿಲ್ಲಿ ನಿವಾಸಿಗಳಾದ ವಡಕ್ಕುಂತಾರ ಕೆ ಅನಿಲ್‌ಕುಮಾರ್, ಮನಂಕುಜಿ ಸುಶಾಸನನ್ ಮತ್ತು ತೆಕ್ಕುಮುರಿ ವೇಲಾಯುಧನ್ ಎಂದು ಗುರುತಿಸಲಾಗಿದೆ.

ಪಾಲಕ್ಕಾಡ್‌ನ ನಲ್ಲೆಪಿಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮೂವರು ಶಾಲೆಯ ಕ್ರಿಸ್‌ಮಸ್ ಆಚರಣೆಗೆ ಅಡ್ಡಿಪಡಿಸಿದರು, ಕ್ರಿಸ್‌ಮಸ್ ಕ್ಯಾರೋಲ್‌ಗಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಅವರ ಉಡುಪಿನ ಬಗ್ಗೆ ಪ್ರಶ್ನಿಸಿದರು. ಅಲ್ಲದೇ ವಿದ್ಯಾರ್ಥಿಗಳ ಎದುರೇ ಶಿಕ್ಷಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆರೋಪಿ ಕೆ.ಅನಿಲ್‌ಕುಮಾರ್‌ ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಕಾರ್ಯದರ್ಶಿ, ವಿ.ಸುಶಾಸನನ್‌ ಭಜರಂಗದಳ ಜಿಲ್ಲಾ ಸಂಯೋಜಕ, ಕೆ.ವೇಲಾಯುಧನ್‌ ವಿಶ್ವ ಹಿಂದೂ ಪರಿಷತ್‌ ಪಂಚಾಯಿತಿ ಸಮಿತಿ ಅಧ್ಯಕ್ಷರಾಗಿದ್ದಾರೆ.

VHP
ಬಹುಸಂಖ್ಯಾತರ ಅಪೇಕ್ಷೆಯಂತೆ ಈ ದೇಶ ನಡೆಯುತ್ತೆ; UCC ಶೀಘ್ರದಲ್ಲೇ ಜಾರಿ: VHP ಕಾರ್ಯಕ್ರಮದಲ್ಲಿ ಜಡ್ಜ್ ಶೇಖರ್ ಯಾದವ್

"ಮೂವರನ್ನು ಶನಿವಾರ ಬಂಧಿಸಿ ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಬೆದರಿಕೆ ಹಾಕಿರುವ ಆರೋಪದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ" ಎಂದು ಚಿತ್ತೂರು ಪೊಲೀಸ್ ಠಾಣೆಯ ಎಸ್‌ಎಚ್‌ಒ ಕೆ ಮ್ಯಾಥ್ಯೂ ತಿಳಿಸಿದ್ದಾರೆ.

ಕೇರಳದಲ್ಲಿ ಕ್ರಿಶ್ಚಿಯನ್ ಸಮುದಾಯವನ್ನು ಗೆಲ್ಲಲು ಬಿಜೆಪಿ ಪ್ರಯತ್ನಿಸುತ್ತಿರುವಾಗ ಈ ಘಟನೆ ನಡೆದಿದೆ, ಆದರೆ ರಾಜ್ಯ ಬಿಜೆಪಿ ನಾಯಕತ್ವವು ಈ ವಿಷಯದಲ್ಲಿ ಮೌನವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com