ಸಂಸತ್ ಸಂಘರ್ಷ: ನಮ್ಮ ಕರ್ತವ್ಯದಲ್ಲಿ ಲೋಪವಿಲ್ಲ- ಸಿಐಎಸ್ಎಫ್

ಯಾರನ್ನು ತಳ್ಳಿದವರ ಬಗ್ಗೆ ಸಂಸದರು ಮಾಡಿರುವ ಪ್ರತ್ಯಾರೋಪಗಳ ಬಗ್ಗೆ ಕೇಳಿದಾಗ, "ಗೌರವಾನ್ವಿತ ಸದಸ್ಯರು (ಸಂಸದರು) ಆರೋಪ ಮಾಡಿದಾಗ ಮೌನವಾಗಿರುವುದನ್ನು ಸಿಐಎಸ್ಎಫ್ ಆಯ್ಕೆ ಮಾಡಲಿದೆ ಎಂದು ಅವರು ಹೇಳಿದರು.
CISF-Parliament
ಸಿಐಎಸ್ಎಫ್online desk
Updated on

ನವದೆಹಲಿ: ಕಳೆದ ವಾರ ಕೊನೆಗೊಂಡ ಚಳಿಗಾಲದ ಅಧಿವೇಶನದ ವೇಳೆ ಸಂಸತ್ ಸಂಕೀರ್ಣದಲ್ಲಿ ಸಂಸದರ ನಡುವೆ ನಡೆದ ಗಲಾಟೆಯ ಘಟನೆಯಲ್ಲಿ ತನ್ನಿಂದ ಯಾವುದೇ ಕರ್ತವ್ಯ ಲೋಪ ಉಂಟಾಗಿಲ್ಲ ಎಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸೋಮವಾರ ಹೇಳಿದೆ.

ಸಂಸತ್ ಭವನದ ಸಂಕೀರ್ಣವನ್ನು ಕಾವಲನ್ನು ಸಿಐಎಸ್‌ಎಫ್‌ಗೆ ವಹಿಸಲಾಗಿದೆ. ಸಿಐಎಸ್ಎಫ್ ಉಪ ನಿರೀಕ್ಷಕ (ಕಾರ್ಯಾಚರಣೆ) ಶ್ರೀಕಾಂತ್ ಕಿಶೋರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು, "ಯಾವುದೇ ಲೋಪವಾಗಿಲ್ಲ (ಪಡೆಯ ಕಡೆಯಿಂದ) ಯಾವುದೇ ಶಸ್ತ್ರಾಸ್ತ್ರವನ್ನು ಅನುಮತಿಸಲಾಗಿಲ್ಲ ಎಂದು ಹೇಳಿದ್ದಾರೆ.

ಯಾರನ್ನು ತಳ್ಳಿದವರ ಬಗ್ಗೆ ಸಂಸದರು ಮಾಡಿರುವ ಪ್ರತ್ಯಾರೋಪಗಳ ಬಗ್ಗೆ ಕೇಳಿದಾಗ, "ಗೌರವಾನ್ವಿತ ಸದಸ್ಯರು (ಸಂಸದರು) ಆರೋಪ ಮಾಡಿದಾಗ ಮೌನವಾಗಿರುವುದನ್ನು ಸಿಐಎಸ್ಎಫ್ ಆಯ್ಕೆ ಮಾಡಲಿದೆ ಎಂದು ಅವರು ಹೇಳಿದರು. ಸಂಸತ್ ಭವನದ ಸಂಕೀರ್ಣದ ಮಕರ ದ್ವಾರದಲ್ಲಿ ನಡೆದ ಘಟನೆಯ ಬಗ್ಗೆ ಸಿಐಎಸ್‌ಎಫ್ ಯಾವುದೇ ವಿಚಾರಣೆ ನಡೆಸುತ್ತಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

CISF-Parliament
ಸಂಸತ್ ಆವರಣದಲ್ಲಿ ಬಿಜೆಪಿ-ಕಾಂಗ್ರೆಸ್ ಜಟಾಪಟಿ ಪ್ರಕರಣ: ಗಾಯಗೊಂಡಿದ್ದ ಇಬ್ಬರು BJP ಸಂಸದರು ಆಸ್ಪತ್ರೆಯಿಂದ ಡಿಸ್ಚಾರ್ಜ್

ಕಳೆದ ವಾರ ಸಂಸತ್ತಿನ ಆವರಣದಲ್ಲಿ ಪ್ರತಿಪಕ್ಷಗಳು ಮತ್ತು ಆಡಳಿತಾರೂಢ ಬಿಜೆಪಿ ಸಂಸದರ ನಡುವೆ ನಡೆದ ಗಲಾಟೆಯಲ್ಲಿ ಬಿಜೆಪಿ ಸಂಸದರಾದ ಪ್ರತಾಪ್ ಚಂದ್ರ ಸಾರಂಗಿ ಮತ್ತು ಮುಖೇಶ್ ರಜಪೂತ್ ಗಾಯಗೊಂಡಿದ್ದರು. ಬಿಜೆಪಿಯ ದೂರಿನ ಮೇರೆಗೆ ದೆಹಲಿ ಪೊಲೀಸರು ಕಾಂಗ್ರೆಸ್ ನಾಯಕ ಮತ್ತು ಎಲ್‌ಪಿ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com