
ನವದೆಹಲಿ: 'ಸಂವಿಧಾನ ಶಿಲ್ಪಿ' ಡಾ. ಬಿ.ಆರ್ ಅಂಬೇಡ್ಕರ್ ಅವರ ವಿಚಾರವಾಗಿ ಸಂಸತ್ ಭವನದ ಆವರಣದಲ್ಲಿ ನಡೆದ ಪ್ರತಿಭಟನೆ ವೇಳೆ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಬಿಜೆಪಿ ಸಂಸದರು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಒಡಿಶಾದ ಪ್ರತಾಪ್ ಸಾರಂಗಿ (69) ಮತ್ತು ಉತ್ತರ ಪ್ರದೇಶದ ಮುಖೇಶ್ ರಜಪೂತ್ ಅವರು ರಾಮ್ ಮನೋಹರ್ ಲೋಹಿಯಾ (ಆರ್‌ಎಂಎಲ್) ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಬ್ಬರು ಸಂಸದರ ಆರೋಗ್ಯ ಸ್ಥಿತಿ ಈಗ ಸುಧಾರಿಸಿದ್ದು, ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇಬ್ಬರಿಗೂ ಐಸಿಯುನಲ್ಲಿರಿಸಿ ನಿಗಾ ಇರಿಸಲಾಗಿತ್ತು. ಶನಿವಾರ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಸಾರಂಗಿ ಅವರಿಗೆ ಹೃದಯದ ಸಮಸ್ಯೆ ಇದ್ದು, ಸ್ಟೆಂಟ್ ಹಾಕಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್‌ಗಳಲ್ಲಿ ದೊಡ್ಡ ಸಮಸ್ಯೆಗಳು ಕಂಡು ಬಂದಿಲ್ಲ. ಆಸ್ಪತ್ರೆಗೆ ಕರೆತಂದಾಗ ಸಾರಂಗಿ ಅವರ ತಲೆಯಿಂದ ತೀವ್ರ ರಕ್ತಸ್ರಾವವಾಗುತ್ತಿತ್ತು. ಹಣೆಯ ಮೇಲೆ ಆಳವಾಗ ಗಾಯವಾಗಿತ್ತು. ನಂತರ ಹೊಲಿಗೆ ಹಾಕಬೇಕಾಗಿತ್ತು. ರಜಪೂತ್ ಅವರ ತಲೆಗೂ ಗಾಯವಾಗಿತ್ತು, ಪ್ರಜ್ಞೆ ಕಳೆದುಕೊಂಡಿದ್ದರು. ಆದರೆ, ಆಸ್ಪತ್ರೆಗೆ ಕರೆತರುವಾಗ ಪ್ರಜ್ಞೆ ಬಂದಿತ್ತು. ರಕ್ತದೊತ್ತಡದ ಹೆಚ್ಚಾಗಿರುವುದು ಕಂಡು ಬಂದಿತ್ತು. ಇಬ್ಬರ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್‌ಗಳಲ್ಲಿ ದೊಡ್ಡ ಸಮಸ್ಯೆಗಳೇನು ಕಂಡುಬಂದಿರಲಿಲ್ಲ ಎಂದು ಹೇಳಿದ್ದಾರೆ.
Advertisement