ಉತ್ತರ ಪ್ರದೇಶ: ಪೊಲೀಸ್ ಎನ್ ಕೌಂಟರ್ ನಲ್ಲಿ ಇಬ್ಬರು ಬ್ಯಾಂಕ್ ದರೋಡೆಕೋರರ ಹತ್ಯೆ!

26 ವರ್ಷದ ಸೋಬಿಂದ್ ಕುಮಾರ್ ಎಂಬಾತನನ್ನು ಕಿಸಾನ್ ಪಾಥ್ ಬಳಿ ಲಖನೌ ಪೊಲೀಸರು ಎನ್ ಕೌಂಟರ್ ಮಾಡಿದ್ದರೆ 28 ವರ್ಷದ ಮತ್ತೋರ್ವ ಆರೋಪಿ ಸನ್ನಿ ದಯಾಳ್ ಎಂಬಾತನನ್ನು ಘಾಜಿಪುರ ಪೊಲೀಸರು ಹತ್ಯೆ ಮಾಡಿದ್ದಾರೆ.
Police at Encounter place
ಎನ್ ಕೌಂಟರ್ ಸ್ಥಳದಲ್ಲಿ ಪೊಲೀಸರು
Updated on

ಲಖನೌ: ಉತ್ತರ ಪ್ರದೇಶದ ರಾಜಧಾನಿ ಲಖನೌನ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಚಿನ್ಹಾಟ್ ಶಾಖೆಯಲ್ಲಿ ಇತ್ತೀಚಿಗೆ ನಡೆದಿದ್ದ ದರೋಡೆಯಲ್ಲಿ ಭಾಗಿಯಾಗಿದ್ದ ಇಬ್ಬರು ಕ್ರಿಮಿನಲ್ ಗಳನ್ನು ಪೊಲೀಸ್ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ. ಲಖನೌ ಹಾಗೂ ಘಾಜಿಪುರ ಪೊಲೀಸರು ಪ್ರತ್ಯೇಕ ಎನ್ ಎನ್ ಕೌಂಟರ್ ನಲ್ಲಿ ದರೋಡೆಕೋರರನ್ನು ಹತ್ಯೆ ಮಾಡಿರುವುದಾಗಿ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

26 ವರ್ಷದ ಸೋಬಿಂದ್ ಕುಮಾರ್ ಎಂಬಾತನನ್ನು ಕಿಸಾನ್ ಪಾಥ್ ಬಳಿ ಲಖನೌ ಪೊಲೀಸರು ಎನ್ ಕೌಂಟರ್ ಮಾಡಿದ್ದರೆ 28 ವರ್ಷದ ಮತ್ತೋರ್ವ ಆರೋಪಿ ಸನ್ನಿ ದಯಾಳ್ ಎಂಬಾತನನ್ನು ಘಾಜಿಪುರ ಪೊಲೀಸರು ಹತ್ಯೆ ಮಾಡಿದ್ದಾರೆ.

ಬಿಹಾರ ಮೂಲದ ಸೋಬಿಂದ್ ಕುಮಾರ್ ಬ್ಯಾಂಕ್ ದರೋಡೆಯಲ್ಲಿ ಪೊಲೀಸರಿಗೆ ಬೇಕಾಗಿದ್ದ. ಸೋಮವಾರ ಸುಳಿವಿನ ಆಧಾರದ ಮೇಲೆ ಆತನು ಸಂಚರಿಸುತ್ತಿದ್ದ ವಾಹನವನ್ನು ತಡೆದಾಗ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಬಳಿಕ ಪ್ರತಿದಾಳಿ ನಡೆಸಿದಾಗ ಗುಂಡೇಟಿನಿಂದ ಗಾಯಗೊಂಡು ಆತ ಸಾವನ್ನಪ್ಪಿರುವುದಾಗಿ ಚಿನ್ಹಾಟ್ ಸಹಾಯಕ ಪೊಲೀಸ್ ಕಮಿಷನರ್ ರಾಧಾ ರಮಣ್ ಸಿಂಗ್ ತಿಳಿಸಿದ್ದಾರೆ.

ಗಾಜಿಪುರ ಬಳಿ ನಡೆದ ಮತ್ತೊಂದು ಎನ್ ಕೌಂಟರ್ ನಲ್ಲಿ ದಯಾಳ್ ನನ್ನು ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿರುವುದಾಗಿ ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ. ದಯಾಳ್ ಕುರಿತು ಮಾಹಿತಿ ನೀಡಿದ್ದವರಿಗೆ ರೂ. 25,000 ಬಹುಮಾನವನ್ನು ಘೋಷಿಸಲಾಗಿತ್ತು. ಕುತುಬ್‌ಪುರ ಬಳಿ ಆತನನ್ನು ಹಿಡಿಯಲು ಪ್ರಯತ್ನಿಸಿದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ.

Police at Encounter place
Watch | ಉತ್ತರ ಪ್ರದೇಶ: ಮೂವರು ಖಲಿಸ್ತಾನಿ ಉಗ್ರರು ಎನ್‌ಕೌಂಟರ್‌'ನಲ್ಲಿ ಹತ

ಬಳಿಕ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ ಬಳಿಕ ಸಮುದಾಯ ಆರೋಗ್ಯ ಕೇಂದ್ರಕ್ಕೆ, ನಂತರ ಗಾಜಿಪುರ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಆತ ಮೃತಪಟ್ಟಿರುವುದಾಗಿ ಘೋಷಿಸಲಾಯಿತು ಎಂದು ಡಿಜಿಪಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com