
ನವದೆಹಲಿ: ಅಲ್ಲಿ ಸಂಪೂರ್ಣ ಮಹಿಳೆಯರ ವೇದಿಕೆಯಾಗಿತ್ತು. ಅವರ ಶಕ್ತಿ, ಸಾಮರ್ಥ್ಯಗಳ ವೈಭವೀಕರಣಕ್ಕೆ ಜಾಗವಾಗಿತ್ತು. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್(New Indian Express) ಸ್ಥಾಪಿಸಿದ ದೇವಿ ಅವಾರ್ಡ್ಸ್‌ನ 30 ನೇ ಆವೃತ್ತಿ ನಿನ್ನೆ ಡಿಸೆಂಬರ್ 23 ರಂದು ದೆಹಲಿಯಲ್ಲಿ ನಡೆದಿದ್ದು, ಈ ವರ್ಷ ದೇಶಾದ್ಯಂತ ನಡೆದ ಕಾರ್ಯಕ್ರಮದಲ್ಲಿ ಆರನೆಯದ್ದು.
ಇಲ್ಲಿ ಕಣ್ಣೀರು, ಭಾಷಣಕ್ಕೆ ಜಾಗವಿರಲಿಲ್ಲ. ಬದಲಿಗೆ ಮಹಿಳೆಯರ ಘನತೆ ಮತ್ತು ನಿರಂತರ ಕೆಲಸದ ಪ್ರದರ್ಶನದಿಂದ ಗುರುತಿಸಲ್ಪಟ್ಟಿದೆ. ಕಲೆ, ಅರ್ಥಶಾಸ್ತ್ರ, ಸಾರ್ವಜನಿಕ ಸೇವೆ ಮತ್ತು ಆಡಳಿತ ವಿಭಾಗಗಳಲ್ಲಿ ಅದ್ವಿತೀಯ ಸಾಧನೆ ಮೆರೆದ ಮಹಿಳೆಯರನ್ನು ಗುರುತಿಸಿ ಗೌರವಿಸಲಾಗಿದೆ.
TNIE ಗ್ರೂಪ್ ಸಂಡೇ ಸ್ಟ್ಯಾಂಡರ್ಡ್ ನೀಡುವ ಪ್ರಶಸ್ತಿಯನ್ನು ಪ್ರಶಸ್ತಿ ಪ್ರದಾನ ಸಮಾರಂಭ 17 ಮಹಿಳೆಯರಿಗೆ ನೀಡಲಾಗಿತ್ತು. TNIE ಗ್ರೂಪ್‌ನ ಸಿಇಒ ಲಕ್ಷ್ಮಿ ಮೆನನ್, ಶಕ್ತಿಶಾಲಿ ಮಹಿಳೆಯರಿಗೆ ಹೊಸದೇನಲ್ಲ ಎಂದರು. ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತೆ ಕಾವೇರಿ ಬಾಮಝೈ ನಿರ್ವಹಿಸಿದರು.
ಸಂಜೆ ಕೇರಳದ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್, ಟಿಎನ್‌ಐಇ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ, ಸಂಪಾದಕ ಸಾಂತ್ವಾನ ಭಟ್ಟಾಚಾರ್ಯ ಮತ್ತು ಮೆನನ್‌ರವರು ದೀಪ ಬೆಳಗಿಸಿದರು. ತಮ್ಮ ಭಾಷಣದಲ್ಲಿ, ಕೇರಳ ರಾಜ್ಯಪಾಲರು "ಆಧುನಿಕ ಯುಗದಲ್ಲಿ ಭಾರತವು ಶ್ರೇಷ್ಠತೆಗೆ ಏರಲು ಮಹಿಳೆಯರ ಪ್ರಯತ್ನ ಕಾರಣವಾಗಿದೆ ಎಂದರು.
ಸಂಜೆಯ ಪ್ರಮುಖ ಅಂಶವೆಂದರೆ ಪ್ರಭು ಚಾವ್ಲಾ ಮತ್ತು ಕೇರಳ ರಾಜ್ಯಪಾಲರ ನಡುವೆ ಹಲವಾರು ವಿಷಯಗಳ ಕುರಿತು ಸಂವಾದವಾಗಿತ್ತು. 17 ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಲಾಯಿತು.
Advertisement