ಬೆಂಗಳೂರು: ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್ 2014ರಿಂದಲೂ ಮಹಿಳಾ ಸಾಧಕಿಯರಿಗೆ ದೇವಿ ಪ್ರಶಸ್ತಿ ನೀಡುತ್ತಾ ಬಂದಿದ್ದು, ಈ ವರ್ಷ ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ 12 ಮಹಿಳಾ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇಂದು ಸಂಜೆ ನಗರದ ಐಟಿಸಿ ಗಾರ್ಡೆನಿಯಾದಲ್ಲಿ ನಡೆದ ಸಮಾರಂಭದಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಸೊಂತಾಲಿಯಾ ಅವರು ಜಾಹ್ನವಿ ಫಾಲ್ಕಿ, ಡಾ. ವತ್ಸಲಾ ತಿರುಮಲೈ, ಅಲಿನಾ ಆಲಂ, ಸೋನಾಲಿ ಸತ್ತಾರ್, ಪವಿತ್ರಾ ಮುದ್ದಯ್ಯ ವಿಮೋರ್, ಡಾ.ಪ್ರತಿಮಾ ಮೂರ್ತಿ, ಅರುಂಧತಿ ನಾಗ್, ಸಂಹಿತಾ ಅರ್ನಿ, ಡಾ. ಅಂಜು ಬಾಬಿ ಜಾರ್ಜ್, ಕವಿತಾ ಗುಪ್ತಾ ಸಬರ್ವಾಲ್, ಮೀನಾ ಗಣೇಶ್ ಹಾಗೂ ನಿರುಪಮಾ ರಾಜೇಂದ್ರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ (TNIE) ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ, TNIE ಗ್ರೂಪ್ ಸಂಪಾದಕಿ ಸಾಂತ್ವಾನ ಭಟ್ಟಾಚಾರ್ಯ ಮತ್ತು TNIE ನ ಸಿಇಒ ಲಕ್ಷ್ಮಿ ಮೆನನ್ ಅವರು ಉಪಸ್ಥಿತರಿದ್ದರು.
ವಿವಿಧ ವೃತ್ತಿ ಹಿನ್ನೆಲೆಯ 12 ಮಹಿಳೆಯರಿಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಇಂದು ದೇವಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಸಮಾಜಕ್ಕೆ ನೀಡಿರುವ ಒಟ್ಟಾರೇ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
Advertisement