ಕೇಜ್ರಿವಾಲ್ ನಿಮ್ಮನ್ನು ತಾತ್ಕಾಲಿಕ ಸಿಎಂ ಎಂದು ಕರೆದಿರುವುದು ಆಕ್ಷೇಪಾರ್ಹ: ಅತಿಶಿಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್
ನವದೆಹಲಿ: ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು, ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಅತಿಶಿ ಅವರನ್ನು ತಾತ್ಕಾಲಿಕ ಸಿಎಂ ಎಂದು ಕರೆದಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಮತ್ತು ಇದು ತಮಗೆ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅತಿಶಿಯನ್ನು ತಾತ್ಕಾಲಿಕ ಮುಖ್ಯಮಂತ್ರಿ ಎಂದು ಕರೆದಿದ್ದಕ್ಕೆ ಸಕ್ಸೇನಾ ಅವರು ದೆಹಲಿ ಮುಖ್ಯಮಂತ್ರಿ ಅತಿಶಿ ಅವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
"... ನಾನು ಇದನ್ನು ಬಹಳ ಆಕ್ಷೇಪಾರ್ಹವೆಂದು ಹೇಳುತ್ತೇನೆ ಮತ್ತು ಇದರಿಂದ ನನಗೆ ನೋವಾಗಿದೆ. ಇದು ನಿಮಗೆ ಮಾತ್ರವಲ್ಲ, ರಾಷ್ಟ್ರಪತಿ ಮತ್ತು ಅವರ ಪ್ರತಿನಿಧಿಯಾಗಿ ನನಗೆ ಮಾಡಿದ ಅವಮಾನವಾಗಿದೆ'. ಈ ಮಟ್ಟದ ಸಾರ್ವಜನಿಕ ಸಂವಾದದ ಬಗ್ಗೆ ಒಬ್ಬ ಲೆಫ್ಟಿನೆಂಟ್ ಗವರ್ನರ್ ಆಗಿ ನಾನು ಕಳವಳಗೊಂಡಿದ್ದೇನೆ ಮತ್ತು ಅದೇ ಸಮಯದಲ್ಲಿ, ನನ್ನ ಸರ್ಕಾರದ ಪೂರ್ಣಾವಧಿಯ ಮುಖ್ಯಮಂತ್ರಿಯನ್ನು ತಾತ್ಕಾಲಿಕ ಮುಖ್ಯಮಂತ್ರಿ ಎಂದು ಹೇಳಿರುವುದರಿಂದ ನನಗೆ ನೋವಾಗಿದೆ ... ” ಎಂದು ಸಕ್ಸೇನಾ ಅವರು ಪತ್ರದಲ್ಲಿ ಬರೆದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ