
ಕೊಚ್ಚಿ: ಸೇನಾ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವ ಘಟನೆ ಕೊಚ್ಚಿಯಲ್ಲಿ ನಡೆದಿದೆ.
ಕಳೆದ ವಾರ ಕೊಚ್ಚಿಯ ತೃಕ್ಕಾಕರದಲ್ಲಿರುವ ಕೆಎಂಎಂ ಕಾಲೇಜಿನಲ್ಲಿ ನ್ಯಾಷನಲ್ ಕೆಡೆಟ್ ಕಾರ್ಪ್ಸ್ ಕೆಡೆಟ್‌ಗಳಿಗೆ ಕ್ಯಾಂಪ್ ಆಯೋಜಿಸಿದ್ದ ವೇಳೆ ಸೇನಾ ಅಧಿಕಾರಿ ಮೇಲೆ ಹಲ್ಲೆ ನಡೆದಿತ್ತು.
ಆರೋಪಿಗಳನ್ನು ಫೋರ್ಟ್ ಕೊಚ್ಚಿ ಮೂಲದ ನಿಶಾದ್ ಮತ್ತು ಪಲ್ಲುರುತಿಯ ನವಾಸ್ ಎಂದು ಗುರುತಿಸಲಾಗಿದೆ ಎಂದು ಕೊಚ್ಚಿ ನಗರ ಪೊಲೀಸರು ತಿಳಿಸಿದ್ದಾರೆ.
ಕೆಎಂಎಂ ಕಾಲೇಜಿನಲ್ಲಿ ನಡೆದ ಎನ್‌ಸಿಸಿ ಕೆಡೆಟ್ ಶಿಬಿರದಲ್ಲಿ 21 ಕೇರಳ ಎನ್‌ಸಿಸಿ ಬೆಟಾಲಿಯನ್‌ನ ಆಡಳಿತ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಕರ್ನೇಲ್ ಸಿಂಗ್ ಅವರ ಮೇಲೆ ಇಬ್ಬರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಉನ್ನತ ಪೊಲೀಸ್ ಅಧಿಕಾರಿಯ ಪ್ರಕಾರ, ಆರೋಪಿಗಳನ್ನು ಅವರ ನಿವಾಸಗಳಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ಎನ್‌ಸಿಸಿ ಅಧಿಕಾರಿಗಳು ಅವರನ್ನು ಗುರುತಿಸಿದ ನಂತರ ಬಂಧಿಸಲಾಗಿದೆ. ಇದಕ್ಕೂ ಮುನ್ನ ತ್ರಿಕ್ಕಾಕರ ಪೊಲೀಸರು ಸೇನಾಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಅಧಿಕಾರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 23 ರ ರಾತ್ರಿ 60 ಕ್ಕೂ ಹೆಚ್ಚು ಕೆಡೆಟ್‌ಗಳು ಕಲುಶಿತ ಆಹಾರ ಸೇವನೆಯ ಪರಿಣಾಮ ಆರೋಗ್ಯದಲ್ಲಿ ಏರುಪೇರಾಗಿ ಬಳಲುತ್ತಿದ್ದರು ಎಂದು ವರದಿಯಾದ ನಂತರ ಉದ್ವಿಗ್ನತೆ ಉಂಟಾಗಿತ್ತು. ಈ ಪರಿಸ್ಥಿತಿಯ ನಡುವೆ ಹಲ್ಲೆಯ ಘಟನೆ ಸಂಭವಿಸಿತ್ತು.
ಶಿಬಿರವನ್ನು ಆಯೋಜಿಸುವ ಕಾಲೇಜಿಗೆ ಅತಿಕ್ರಮವಾಗಿ ಪ್ರವೇಶಿಸಿದ ನಂತರ, ನಿಲ್ಲಿಸಿ, ಬೆದರಿಕೆ ಹಾಕಿದರು, ನಂತರ ರಾತ್ರಿ 11.30 ರ ಸುಮಾರಿಗೆ ಶಿಬಿರದ ಕಮಾಂಡೆಂಟ್ ಲೆಫ್ಟಿನೆಂಟ್ ಕರ್ನಲ್ ಕರ್ನೆಯಿಲ್ ಸಿಂಗ್ ಮೇಲೆ ಹಲ್ಲೆ ನಡೆಸಿದರು ಎಂದು ಡಿಸೆಂಬರ್ 24 ರ ಎಫ್ಐಆರ್ನಲ್ಲಿ ತಿಳಿಸಲಾಗಿದೆ.
Advertisement