ದೆಹಲಿ: ಅಕ್ರಮ ವಲಸೆ ಬಂದಿದ್ದ ಬಾಂಗ್ಲಾದ ತಾಯಿ-ಮಗ ಗಡಿಪಾರು!

"ಇಬ್ಬರೂ ಪಶ್ಚಿಮ ಬಂಗಾಳದ ಗಡಿಯ ಮೂಲಕ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಾರೆ. ನಜ್ಮಾ ಸುಮಾರು 20 ವರ್ಷಗಳ ಹಿಂದೆ ಬಂದಿದ್ದರೆ, ನೈಮ್ 2020 ರಲ್ಲಿ ಬಂದಿದ್ದರು" ಎಂದು ಪೊಲೀಸ್ ಉಪ ಆಯುಕ್ತ (ನೈಋತ್ಯ) ಸುರೇಂದ್ರ ಚೌಧರಿ ಹೇಳಿದ್ದಾರೆ.
Delhi police
ದೆಹಲಿ ಪೊಲೀಸ್ online desk
Updated on

ದೆಹಲಿ ಪೊಲೀಸರು ಬಾಂಗ್ಲಾದೇಶದ ತಾಯಿ-ಮಗನನ್ನು ಗಡೀಪಾರು ಮಾಡಿದ್ದಾರೆ. ಮಹಿಳೆ 2005 ರಿಂದ ನೈಋತ್ಯ ದೆಹಲಿಯಲ್ಲಿ ವಾಸಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಡೀಪಾರು ಮಾಡಿದ ವ್ಯಕ್ತಿಗಳನ್ನು ನಜ್ಮಾ ಖಾನ್ ಮತ್ತು ಆಕೆಯ ಮಗ ನಯಿಮ್ ಖಾನ್ (22) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ಇಬ್ಬರೂ ಪಶ್ಚಿಮ ಬಂಗಾಳದ ಗಡಿಯ ಮೂಲಕ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಾರೆ. ನಜ್ಮಾ ಸುಮಾರು 20 ವರ್ಷಗಳ ಹಿಂದೆ ಬಂದಿದ್ದರೆ, ನೈಮ್ 2020 ರಲ್ಲಿ ಬಂದಿದ್ದರು" ಎಂದು ಪೊಲೀಸ್ ಉಪ ಆಯುಕ್ತ (ನೈಋತ್ಯ) ಸುರೇಂದ್ರ ಚೌಧರಿ ಹೇಳಿದ್ದಾರೆ.

ತಾಯಿ-ಮಗ ಇಬ್ಬರೂ ಕಟ್ವಾರಿಯಾ ಸರಾಯ್‌ನಲ್ಲಿ ವಾಸಿಸುತ್ತಿದ್ದರು, ಅಲ್ಲಿ ನಜ್ಮಾ ಮನೆಕೆಲಸಗಾರರಾಗಿ ಕೆಲಸ ಮಾಡುತ್ತಿದ್ದರು ಎಂದು ಅವರು ಹೇಳಿದರು.

"ಡಿಸೆಂಬರ್ 29 ರಂದು ದಿನನಿತ್ಯದ ಗಸ್ತು ತಿರುಗುತ್ತಿದ್ದಾಗ, ಪೊಲೀಸರು ಸುಳಿವಿನ ಮೇರೆಗೆ ಶಾಸ್ತ್ರಿ ಮಾರ್ಕೆಟ್ ಬಳಿ ನೈಮ್ ಅವರನ್ನು ತಡೆದರು. ನಯಮ್ ಅವರ ವಿಚಾರಣೆಯು ಮರುದಿನ ನಜ್ಮಾ ಬಂಧನಕ್ಕೆ ಕಾರಣವಾಯಿತು. ಇಬ್ಬರನ್ನೂ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (FRRO) ಹಸ್ತಾಂತರಿಸಲಾಯಿತು. ಅಲ್ಲಿಂದ ಅವರನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಲಾಗಿದೆ." ಎಂದು ಡಿಸಿಪಿ ಹೇಳಿದ್ದಾರೆ.

ವಿಚಾರಣೆಯ ಸಮಯದಲ್ಲಿ, ಆರ್ಥಿಕ ಸಂಕಷ್ಟ ನಯಿಮ್ ತನ್ನ ತಾಯಿಯನ್ನು ಎರಡು ದಶಕಗಳ ಹಿಂದೆ ಭಾರತಕ್ಕೆ ವಲಸೆ ಹೋಗುವ ಪರಿಸ್ಥಿತಿ ಉಂಟುಮಾಡಿತ್ತು. 2020 ರಲ್ಲಿ ಆಕೆಯನ್ನು ತಾನು ಹಿಂಬಾಲಿಸಿದ್ದಾಗಿ ತಿಳಿಸಿದ್ದಾರೆ.

ಸಂಬಂಧಿತ ಪ್ರಕರಣದಲ್ಲಿ, ಬಾಂಗ್ಲಾದೇಶಿ ಪ್ರಜೆ ಮೊಹಮ್ಮದ್ ಅಖ್ತರ್ ಶೇಖ್ ಎಂಬಾತನನ್ನು ಸರೋಜಿನಿ ನಗರದಿಂದ ಅಕ್ರಮವಾಗಿ ದೇಶದಲ್ಲಿ ತಂಗಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Delhi police
ನಾನು ಬಾಂಗ್ಲಾದೇಶಿಗ, ಬೇಗೂರಿನಲ್ಲಿ 3 ಸಾವಿರಕ್ಕೂ ಹೆಚ್ಚು ಮಂದಿ ಇದ್ದೇವೆ; ನಮ್ಮ ಮತ ಕಾಂಗ್ರೆಸ್‌ಗೆ: ವೈರಲ್ ಆಯ್ತು ಯುವಕನ ವಿಡಿಯೋ!

"ನವೆಂಬರ್ 28 ರಂದು ಮಾದಕವಸ್ತು ಸಂಬಂಧಿತ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಶೇಖ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆದರೆ ನಂತರದ ವಿಳಾಸ ಪರಿಶೀಲನೆಯು ಅಕ್ರಮ ವಲಸಿಗನೆಂಬುದನ್ನು ಬಹಿರಂಗಪಡಿಸಿತು. ಮೂಲತಃ ಬಾಂಗ್ಲಾದೇಶದ ಕೊಚಘಾಟಾದಿಂದ ಶೇಖ್ 2004 ರಲ್ಲಿ ಪಶ್ಚಿಮ ಬಂಗಾಳದ ಮೂಲಕ ಭಾರತವನ್ನು ಪ್ರವೇಶಿಸಿದ್ದ ಎಂದು" ಡಿಸಿಪಿ ಹೇಳಿದರು.

2012 ರಲ್ಲಿ ಭಾರತೀಯ ಪ್ರಜೆಯನ್ನು ವಿವಾಹವಾದ ಶೇಖ್ ದೆಹಲಿಯ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅವರು ಹೇಳಿದರು. ಡಿಸೆಂಬರ್ 30 ರಂದು ಸರೋಜಿನಿ ನಗರ ರೈಲು ನಿಲ್ದಾಣದ ಬಳಿ ಯಾವುದೇ ಮಾನ್ಯ ದಾಖಲೆಗಳಿಲ್ಲದೆ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ವಿದೇಶಿ ಕಾಯ್ದೆಯಡಿ ಹೊಸ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com