
ನವದೆಹಲಿ: ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸದಿಂದ ತರಲಾಗಿದೆ ಎನ್ನಲಾದ ಕೆಲವು ಕಮೋಡ್‌ಗಳನ್ನು ಬಿಜೆಪಿ ನಾಯಕ ಆರ್‌ಪಿ ಸಿಂಗ್ ಪ್ರದರ್ಶಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅತಿಶಿ ಅವರು ಮತ್ತೊಂದು ಮನೆಯಲ್ಲಿ ವಾಸವಾಗಿದ್ದಾರೆ.
‘ಇದು ಚಿನ್ನ ಲೇಪಿತ ಶೌಚಾಲಯ, ಮುಖ್ಯಮಂತ್ರಿಗಳು ತಮ್ಮ ಮನೆಯಲ್ಲಿ ಇಂತಹ 12 ಶೌಚಾಲಯಗಳನ್ನು ಅಳವಡಿಸಿದ್ದರು. ಶೀಷ್ ಮಹಲ್‌ನಲ್ಲಿ 1.44 ಕೋಟಿ ರೂ. ವೆಚ್ಚದ ಈ ಶೌಚಾಲಯಗಳನ್ನು ಅಳವಡಿಸಲಾಗಿದೆ. ಅವರು ಉಚಿತ ಕೊಡುಗೆಗಳನ್ನು ನೀಡಿ ನಿಮ್ಮ ವೋಟ್‌ಗಳನ್ನು ಪಡೆದು ಇಂತಹ ಕೆಲಸ ಮಾಡುತ್ತಾರೆ ಎಂದು ನಾವು ಜನರಿಗೆ ಹೇಳುತ್ತಿದ್ದೇವೆ. ಎಎಪಿ ಸರ್ಕಾರ 'ರೆವಿಡಿಸ್'(ಉಚಿತ ಕೊಡುಗೆಗಳು) ಹೆಸರಿನಲ್ಲಿ ಲೂಟಿ ಮಾಡುತ್ತಿದೆ ಎಂದು ಆರ್ ಪಿ ಸಿಂಗ್ ಆರೋಪಿಸಿದ್ದಾರೆ.
ಮುಖ್ಯಮಂತ್ರಿಗಳ ಅಧಿಕೃತ ನಿವಾಸವನ್ನು 200 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿದೆ ಎಂದು ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜೇಂದರ್ ಗುಪ್ತಾ ಅವರು ಶನಿವಾರ ಆರೋಪಿಸಿದ್ದರು.
ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗುಪ್ತಾ, ಕೇಜ್ರಿವಾಲ್ ಅವರು ಮುಖ್ಯಮಂತ್ರಿಗಳ ಅಧಿಕೃತ ನಿವಾಸದ ಕರಾಳ ಸತ್ಯವನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದರು.
Advertisement