
ಪುಣೆ: 2024ಕ್ಕೆ ವಿದಾಯ ಹೇಳಿ, 2025ನ್ನು ಬರಮಾಡಿಕೊಳ್ಳಲು ದೇಶಾದ್ಯಂತ ಭರ್ಜರಿ ಸಿದ್ಧತೆಗಳು ನಡೆಯುತ್ತಿರುವಂತೆಯೇ ಮಹಾರಾಷ್ಟ್ರದ ಪುಣೆಯ ಸ್ಥಳೀಯ ಪಬ್ ವೊಂದು ಹೊಸ ವರ್ಷಾ ಆಚರಣೆ ಪಾರ್ಟಿಗೆ ಆಗಮಿಸುವ ಆಹ್ವಾನಿತರಿಗೆ ಇನ್ವಿಟೇಶನ್ ಕಾರ್ಡ್ ನೊಂದಿಗೆ ಕಾಂಡೋಮ್ ಮತ್ತು ORS ಪ್ಯಾಕೆಟ್ ಕಳುಹಿಸುವ ಮೂಲಕ ಜನಾಕ್ರೋಶಕ್ಕೆ ಗುರಿಯಾಗಿದೆ. ಪೊಲೀಸರು ಮಧ್ಯ ಪ್ರವೇಶಿಸಿದ್ದು, ಆಹ್ವಾನಿತರಿಂದ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
ಪಾರ್ಟಿ ಹಿನ್ನೆಲೆಯಲ್ಲಿ ಆಹ್ವಾನಿತರಿಗೆ ಪಬ್ ಮುಖ್ಯಸ್ಥರು ಕೆಲ ಸಲಹೆಗಳನ್ನು ಕಳುಹಿಸಿದ್ದು, ಅದರಲ್ಲಿ ಜನರು ಹೆಲ್ಮೆಟ್ ಬಳಸಿ, 'ಕುಡಿದು ಚಾಲನೆ ಮಾಡಬೇಡಿ' ಎಂದು ಒತ್ತಾಯಿಸಲಾಗಿದೆ. ಇದು ಹೊಸ ವರ್ಷ ಆಚರಣೆ ಸಂದರ್ಭದಲ್ಲಿನ ಸುರಕ್ಷತೆಯ ಕ್ರಮವಾಗಿದೆ ಎಂದು ಮುಂಡ್ವಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ನೀಲಕಾಂತ್ ಜಗತಾಪ್ ದೃಢಪಡಿಸಿದ್ದಾರೆ.
ಈ ಸಲಹೆಯ ಜೊತೆಗೆ ತನ್ನ ಆಯ್ದ ಆಹ್ವಾನಿತರಿಗೆ ಕೆಲವು ಹೆಲ್ಮೆಟ್‌ಗಳು ಮತ್ತು ಕಾಂಡೋಮ್‌ಗಳ ಪ್ಯಾಕೆಟ್ ಅನ್ನು ಒಳಗೊಂಡಿರುವ ಬ್ಯಾಗ್ ವೊಂದನ್ನು ಕಳುಹಿಸಿದೆ. ಪಬ್‌ಗೆ ನಿಯಮಿತವಾಗಿ ಬರುವ ಸುಮಾರು 40 ಮಂದಿಗೆ ಇದನ್ನು ಕಳುಹಿಸಲಾಗಿದ್ದು, ಅವರು ಹೊಸ ವರ್ಷದ ಪಾರ್ಟಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.
ಆಹ್ವಾನಿತರಲ್ಲಿ ಒಬ್ಬರು ಈ ಉಡುಗೊರೆ ಪ್ಯಾಕೆಟ್‌ನ ಫೋಟೋಗಳನ್ನು ತೆಗೆದುಕೊಂಡು ಅದನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ನಂತರ ಇಡೀ ಘಟನೆ ಬೆಳಕಿಗೆ ಬಂದಿದೆ. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದ್ದು, ನಂತರ ಪಬ್ ಪಾರ್ಟಿಯನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ.
ದೂರು ಸ್ವೀಕರಿಸಿದ ನಂತರ ಕೆಲವು ಆಹ್ವಾನಿತರು ಮತ್ತು ಆಡಳಿತ ಮಂಡಳಿಯವರ ಹೇಳಿಕೆ ದಾಖಲಿಸಿಕೊಂಡಿದ್ದೇವೆ. ನೋಟಿಸ್ ಜಾರಿ ಮಾಡಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದರು.ಮಹಾರಾಷ್ಟ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಜೈನ್ ಅವರು ದೂರು ನೀಡಿದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಬಗ್ಗೆ ಪ್ರತ್ರಿಯಿಸಿರುವ ಅಕ್ಷಯ್ ಜೈನ್ ನಾವು ಪಬ್ ಸಂಸ್ಕೃತಿ ಅಥವಾ ರಾತ್ರಿಜೀವನದ ವಿರುದ್ಧ ದೂರು ನೀಡಿಲ್ಲ. ಆದರೆ, ಈ ರೀತಿಯ ಹಗ್ಗದ ಪ್ರಚಾರದ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇವೆ. ಈ ರೀತಿಯ ಚಟುವಟಿಕೆಗಳು ಮತ್ತೆ ನಡೆಯಬಾರದು ಎಂದು ಭಾವಿಸುತ್ತೇವೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಡ್ರಗ್ಸ್ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳನ್ನು ಖಂಡಿಸಬೇಕು ಮತ್ತು ಅದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
Advertisement