ಪ್ರತಿ ವರ್ಷ ಸುದ್ದಿಯಾಗುತ್ತದೆ ವಿತ್ತ ಸಚಿವೆ ಸೀರೆ: ಈ ಬಾರಿ ನೀಲಿ-ಕೆನೆ ಬಣ್ಣದ ಸೀರೆಯುಟ್ಟು ನಿರ್ಮಲಾ ಸೀತಾರಾಮನ್‌ ಬಜೆಟ್ ಮಂಡನೆ

ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ ಫೆಬ್ರವರಿ 1ರಂದು  ಮಂಡನೆಯಾಗಲಿದೆ. ಸತತ 6ನೇ ಬಾರಿಗೆ ಬಜೆಟ್‌ ಮಂಡಿಸುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಈ ಬಾರಿ ನೀಲಿಬಣ್ಣದ ಸೀರೆಯುಟ್ಟು ಬಜೆಟ್‌ ಮಂಡಿಸಲಿದ್ದಾರೆ.
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್

ನವದೆಹಲಿ: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ ಫೆಬ್ರವರಿ 1ರಂದು  ಮಂಡನೆಯಾಗಲಿದೆ. ಸತತ 6ನೇ ಬಾರಿಗೆ ಬಜೆಟ್‌ ಮಂಡಿಸುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಈ ಬಾರಿ ನೀಲಿಬಣ್ಣದ ಸೀರೆಯುಟ್ಟು ಬಜೆಟ್‌ ಮಂಡಿಸಲಿದ್ದಾರೆ.

ಈ ಬಾರಿ ಲೋಕಸಭೆ ಚುನಾವಣೆ ಹತ್ತಿರದಲ್ಲೇ ಇರುವ ಕಾರಣ ಈ ಬಾರಿ ಮಧ್ಯಂತರ ಬಜೆಟ್‌ ಮಂಡನೆಯಾಗಲಿದೆ.  ಬೆಳಗ್ಗೆ 11 ಗಂಟೆಗೆ ಬಜೆಟ್‌ ಮಂಡಿಸಲಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಈ ಬಾರಿ ಸೀರೆ ಬಣ್ಣದ ಸೀರೆಯಲ್ಲಿ ಬಜೆಟ್‌ ಮಂಡಿಸಲಿದ್ದಾರೆ.

ಬಜೆಟ್‌ ಮಂಡನೆಗೂ ಮುನ್ನ ಹಣಕಾಸು ಸಚಿವಾಲಯದ ಕಚೇರಿಗೆ ಆಗಮಿಸಿದ ನಿರ್ಮಲಾ ಸೀತಾರಾಮನ್‌ ನೀಲಿ ಹಾಗೂ ಕೆನೆಬಣ್ಣದ ಸೀರೆ ಉಟ್ಟಿರುವುದು ಗಮನಿಸಬಹುದು. ಟಸ್ಸರ್‌ ಸಿಲ್ಕ್‌ ಸೀರೆಯಲ್ಲಿ ಇಂದು ನಿರ್ಮಲಾ ಬಜೆಟ್‌ ಮಂಡಿಸಲಿದ್ದಾರೆ.

ಈ ಬಾರಿಯ ಬಜೆಟ್‌ನಲ್ಲಿ ನಿರ್ಮಲಾ ಅವರು ಧರಿಸುವ ಸೀರೆ ಸಂಪೂರ್ಣ ನೀಲಿ ಬಣ್ಣದ್ದಾಗಿದ್ದು, ಮಧ್ಯದಲ್ಲಿ ಕೆನೆ ಬಣ್ಣದ ಚಿತ್ತಾರವಿದೆ. ಬಳ್ಳಿ ಹಾಗೂ ಎಲೆಗಳಿಂದ ಕೂಡಿರುವ ಚಿತ್ತಾರವನ್ನು ಸೀರೆಯಲ್ಲಿ ಕಾಣಬಹುದಾಗಿದೆ. ಇದರೊಂದಿಗೆ ಸೀರೆಗೊಪ್ಪುವ ಕೆನೆ ಬಣ್ಣದ ಮ್ಯಾಚಿಂಗ್‌ ಬ್ಲೌಸ್‌ ಧರಿಸಿದ್ದಾರೆ.

ಪ್ರತಿ ಬಾರಿ ಬಜೆಟ್‌ನಲ್ಲೂ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸುವ ಬಜೆಟ್‌ ಜೊತೆಗೆ ಅವರ ಸೀರೆ ಕೂಡ ಸುದ್ದಿಯಾಗುತ್ತಿತ್ತು. ನಿರ್ಮಲಾ ಸೀತಾರಾಮನ್‌ ಅವರ ಭಾರತೀಯ ಜವಳಿಗಳ ಮೇಲಿನ ಪ್ರೀತಿ ಅಪಾರ. ಅವರು ಯಾವಾಗಲೂ ಸ್ಥಳೀಯ ಕೈಮಗ್ಗಗಳನ್ನು ಬಳಸುವ ಕರೆ ನೀಡುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com